ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ಫೋಟೋ ಗ್ಯಾಲರಿ) ಪರಿಸರ ಸ್ನೇಹಿ ನಮ್ಮನೆ ಗಣಪ.... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಪರಿಸರ ಸ್ನೇಹ ಗಣಪತಿ ವಿಗ್ರಹಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಉಪಯುಕ್ತ ನ್ಯೂಸ್ ನೀಡಿದ ಆಹ್ವಾನಕ್ಕೆ  ಓದುಗರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ನೂರಾರು ಓದುಗರು ತಮ್ಮ ಮನೆಗಳಲ್ಲಿ ಪೂಜಿಸಿದ ಪರಿಸರ ಸ್ನೇಹಿ ಗಣಪನ ಫೋಟೋಗಳನ್ನು ನಮಗೆ ಕಳುಹಿಸಿದ್ದಾರೆ. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಮನೆಯಲ್ಲಿ ಚೌತಿಯಂದು ಮಣ್ಣು ಅಥವಾ ಗೋಮಯದಂತಹ ಪರಿಸರ ಸ್ನೇಹಿ ವಸ್ತುಗಳಿಂದ ರಚಿಸಿದ ಗಣಪನ ಪೂಜೆಯ ಫೊಟೋವನ್ನು ಕಳಿಸಿ.ಎಂದು ಕೋರಲಾಗಿತ್ತು.


ಸ್ವರ್ಣ ಗೌರಿ, ತೆಂಕಮಾಣಿಪ್ಪಾಡಿ, ಪೈವಳಿಕೆ ಕಾಸರಗೋಡು- ಅವರ ಮನೆಯಲ್ಲಿ ಪೂಜಿತ ಪರಿಸರಸ್ನೇಹಿ ಗಣಪ




ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ನಿರತರಾಗಿರುವ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪೂಜಿಸಿದ ಗೋಮಯ ಗಣಪ.



ಸ್ವಸ್ತಿಕದ ಹಿನ್ನೆಲೆಯಲ್ಲಿ, ಪಾರಂಪರಿಕವಾದ ಓಂಕಾರಪೀಠದಲ್ಲಿ ಮೆರೆಯುವ ಮಣ್ಣಿನ ಮಹಾಗಣಪತಿ.

ಎಂದಿನಂತೆ ಬಣ್ಣವೆಂಬ ವಿಷವನ್ನು ಬಳಿಯದೆಯೇ, ಅಮೃತತುಲ್ಯವಾದ ವಸ್ತುಗಳಿಂದಲೇ ಈ ಗಣಪತಿಯನ್ನು ರಾಮಕಥೆಯ ಗಾಯಕರಾದ ಕಡತೋಕೆಯ ಶ್ರೀಪಾದ ಭಟ್ಟರು ತಯಾರಿಸಿದ್ದಾರೆ.




ಚಿಂತನ್ ಗೌಡ, ಚನ್ನಮಲ್ಲನಹಳ್ಳಿ, ಮಧುಗಿರಿ ತಾಲೂಕು, ತುಮಕೂರು ಜಿಲ್ಲೆ- ಇವರ ಮನೆಯಲ್ಲಿ ಪೂಜಿತ ಮಣ್ಣಿನ ಗಣಪ




ಉಡುಪಿ: ನೀಲಾವರ ಗೋಶಾಲೆಯಲ್ಲಿನ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸಿದರು.




ಶಿಡ್ಲಘಟ್ಟ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎ.ಎಂ ತ್ಯಾಗರಾಜ್ ಅವರ ಮನೆಯಲ್ಲಿ ಪೂಜಿತ ಗೋಮಯ ಗಣಪ.



ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಶ್ವೇತಾ ಅವರ ಮನೆಯಲ್ಲಿ ಪೂಜಿಸಲಾದ ಪರಿಸರಸ್ನೇಹಿ ಗೋಮಯ ಗಣೇಶ.



ದೆಹಲಿಯ ಮೈಥಿಲಿ ಅವರ ನಿವಾಸದಲ್ಲಿ ಪೂಜಿಸಲಾದ ಗಣೇಶ.






ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುಬ್ರಹ್ಮಣ್ಯಂ ಅವರ ಮನೆಯಲ್ಲಿ ಪೂಜಿಸಲಾದ ಗಣಪತಿ.



ಬೆಂಗಳೂರಿನ ದೊಡ್ಡಕಲ್ಲಸಂದ್ರದ ವೆಂಕಟೇಶ್ ಅವರ ಮನೆಯಲ್ಲಿ ಪೂಜಿತ ವಿಘ್ನೇಶ್ವರ




ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ್‌ ಅವರ ಮನೆಯಲ್ಲಿ ಪೂಜಿತ ಗೋಮಯ ಗಣಪತಿ.



ಬೆಂಗಳೂರು ಇಂದಿರಾನಗರದ ಶ್ರೀಧರ್ ಅವರ ಮನೆಯಲ್ಲಿ ಪೂಜಿತ ಗೋಮಯ ಗಣಪತಿ



ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ತಮ್ಮ ಮನೆಯಲ್ಲಿ ಪೂಜಿಸಲು ಗೋಮಯ ಗಣಪನನ್ನು ಬೆಂಗಳೂರಿನ ಖರೀದಿಸಿದರು. ಕೇಂದ್ರ ಸರಕಾರದ ರಾಷ್ಟ್ರೀಯ ಕಾಮಧೇನು ಆಯೋಗದಿಂದ ಮಾನ್ಯತೆ ಪಡೆದ, ಗ್ರಾಮೀಣ ಉದ್ಯಮಿಗಳ ನೆರವಿಗಾಗಿ ಸ್ಥಾಪನೆಯಾದ ಬೆಂಗಳೂರು ಮೂಲದ ಜಾಗೃತಿ ಟ್ರಸ್ಟ್ಈ ಗೋಮಯ ಗಣಪನನ್ನು ತಯಾರಿಸಿ ಮಾರಾಟ ಮಾಡುತ್ತಿದೆ.






ಹುಣಸೂರಿನ ಸಂದೀಪ್ ಮಂಜುನಾಥ್ ಅವರ ಕುಟುಂಬ ಹುಣಸೂರಿನಲ್ಲಿ ಪೂಜಿಸಿದ ಮಣ್ಣಿನ ಗಣಪತಿ.



ಬೆಂಗಳೂರಿನ ಆರ್‌ಆರ್‌ ನಗರದ ಲಕ್ಷ್ಮಿ ಅವರ ನಿವಾಸದಲ್ಲಿ ಪೂಜಿತ ಗೋಮಯ ಗಣೇಶ


Post a Comment

أحدث أقدم