ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪ್ರೀತಿಯ ಕೋಟೆ ಕಟ್ಟೋಣ ಅಹಂ ದೂರ ತಳ್ಳೋಣ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ನಾನು ನೀನು ok ನಮ್ಮ ನಡುವೆ ಅಹಂ ಯಾಕೆ?

ವಿವಾಹ ಅನ್ನುವ ಒಂದು ಸಂಬಂಧದಿಂದ ಎರಡು ಜೀವಗಳು ಒಂದಾಗಿ ಒಬ್ಬರಿಗಾಗಿ ಇನ್ನೊಬ್ಬರು ಎನ್ನುವಂತೆ ಬದುಕುವುದು, ಪ್ರೀತಿ, ಮಮತೆ, ಕಾಳಜಿ, ಅಕ್ಕರೆ ಎಲ್ಲವೂ ಬೆಳೆದು ಸಂಬಂಧ ಗಟ್ಟಿಯಾಗುತ್ತಾ ಸಾಗುತ್ತದೆ.

ಮೂರು ಗಂಟು ಜೊತೆಗೆ ಇಬ್ಬರಿಗೂ ಮೂರು ಅಂಶಗಳು ಜವಾಬ್ದಾರಿಗಳನ್ನು ಬೆಸೆಯುತ್ತವೆ. ಒಂದು ಒಬ್ಬರ ಮೇಲೆ ಇನ್ನೊಬ್ಬರ ಪ್ರೀತಿ, ಪರಸ್ಪರ ಕಾಳಜಿ, ಒಬ್ಬರ ಮೇಲೆ ಮತ್ತೊಬ್ಬರಿಗೆ ದೃಢವಾದ ನಂಬಿಕೆ ಇರಬೇಕು ಪರಸ್ಪರ ಗೌರವ ನೀಡಬೇಕು. ಸಮಯ ತೆಗೆದು ಜೊತೆಗೆತೆಗೆ ಕಾಲಕಳೆದು ಒಬ್ಬರನೊಬ್ಬರು ಅರ್ಥೈಸಿಕೊಳ್ಳಬೇಕು.ಇವೆಲ್ಲವೂ ಸಂಬಂಧದ ಅಡಿಪಾಯಗಳು, ಹೀಗೆ ಒಂದೊಂದು ವಿಷಯಗಳಿಗೆ ಯಾರದೇ ತಪ್ಪಿದ್ದರು ಅವರು ಒಪ್ಪಿಕೊಂಡು ತಗ್ಗಬೇಕು. ಇಲ್ಲಿ ನಾನು ಮೇಲು ನೀನು ಕೀಳು ಎನ್ನುವ ಭಾವನೆ ಬೇಡ.   

ಅಂತಹ ಭಾವನೆಗಳೇ ಮುಂದೆ ಜಗಳಕ್ಕೆ ಮೂಲವಾಗುವವು, ಪರಸ್ಪರ ಸಹಕಾರ, ಇಷ್ಟ ಕಷ್ಟಗಳಬಗ್ಗೆ ಚಿಂತನೆ, ಪ್ರತಿಯೊಬ್ಬರ ವ್ಯಕ್ತಿಗತ ಸ್ವಾತಂತ್ರಕ್ಕೂ ಧಕ್ಕೆಯಾಗದಂತೆ ನೋಡಿಕೊಳ್ಳಿ ಹಾಗಂತ ಆ ವ್ಯಕ್ತಿಗತ ಸ್ವಾತಂತ್ರಗಳು ಪ್ರೀತಿ, ಮರ್ಯಾದೆ ಮೀರಿ, ಸಂಸ್ಕೃತಿಗೆ, ಸಮಾಜಿಕ ಮರ್ಯಾದೆ ಮೀರದಂತೆ ನಮ್ಮ್ ಸಂಸ್ಕೃತಿಯ ನೆಲೆಗಟ್ಟನ್ನು ಮೀರಿ ಪತಿಯಗಲಿ ಪತ್ನಿಯಗಲಿ ನಡೆದುಕೊಳ್ಳದೆ ಆ ಧರ್ಮವನ್ನು ಕಾಯುವ ಹೊಣೆ ಇಬ್ಬರಲ್ಲಿ ಇರುತ್ತದೆ. ಚಿಕ್ಕ ಜಗಳ ಮನಸ್ತಾಪ ಇದ್ದರೆ ಮನಬಿಚ್ಚಿ ಮಾತನಾಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಅದು ಬೆಳೆದು ದೊಡ್ಡದಾಗಿ ಬೆಳೆಯಲು ಬಿಡಬಾರದು.

ಇಂತಹ ಎಲ್ಲಾ ಕಟ್ಟು ನಿಟ್ಟುಗಳನ್ನು ನಮ್ಮ ದೇಶದಲ್ಲಿ ಗೌರವ ನೀಡಿ ಹೊಂದಿಕೊಂಡು ನಡೆಯುವುದಕ್ಕೆ ನಮ್ಮ ದೇಶದಲ್ಲಿ ಇದನ್ನು ಜನ್ಮ ಜನ್ಮಗಳ ಅನುಬಂಧ ಎಂದು ಹೇಳಲಾಗಿದೆ ಆದ್ದರಿಂದಲೇ ನಮ್ಮ ದೇಶದಲ್ಲಿ ವಿವಾಹ ಬಂಧಗಳು ಇಷ್ಟು ಗಟ್ಟಿಯಾಗಿ ಇರುವವು.

ವ್ಯಕ್ತಿಗತ ಸ್ವತಂತ್ರ, ಇಗೋ ಬೆಳೆದರೆ ಅವು ಜಗಳಗಳಾಗಿ ಬೆಳೆದು ದಾಂಪತ್ಯದಲ್ಲಿ ಬಿರುಕು ಬಿಡಬಾರದು.

ಒಬ್ಬ ವ್ಯಕ್ತಿಗೆ ಏನಾದರೂ ಆದರೆ ತಾಯಿ, ತಂಗಿ, ತಂದೆ ಎಲ್ಲರೂ ಚಿಂತಿಸುವುದು ಸಹಜ ಅದು ಕರುಳಿನ ಸಂಬಂಧ ಅದರೆ ವಿವಾಹ ಬಂಧ ಏನು ಸಂಬಂಧವಿಲ್ಲದ ವ್ಯಕ್ತಿಗಳನ್ನು ಬಾಳಿನ ಉದ್ದಕ್ಕೂ ಜೊತೆಯಾಗಿರಿಸುವ ಪವಿತ್ರ ಬಂಧ.

ಇಂತಹ ಪವಿತ್ರ ಬಂಧಕ್ಕೆ ಪ್ರೀತಿ ಒಂದೇ ಮೂಲಾಧಾರ, ಪ್ರೀತಿ ನಿಸ್ವಾರ್ಥ, ಅಮರ, ಅಪಾರ ಪ್ರೀತಿಯಿಂದ ಕೋಟೆಯ ಕಟ್ಟಿ ಅದರೊಳು ವಾಸಿಸುವ ಪ್ರೇಮ ಪಕ್ಷಿಗಳಿಗೆ ಪ್ರೀತಿ ವೃದ್ಧಿಸಬೇಕು.

ಗಂಡ ಹೆಂಡತಿ ಇಬ್ಬರು ಸರಿಸಮಾನರು ಯಾರು ಹೆಚ್ಚಲ್ಲ ಯಾರು ಕಡಿಮೆಯಲ್ಲ. ಬಂಡಿಯ ಎರಡು ಗಾಲಿಗಳ ಮೇಲೆ ಅವರ ಜೀವನ ಚಕ್ರ ಸಾಗುವುದು, ಒಂದರಲ್ಲಿ ಹೆಚ್ಚು ಕಡಿಮೆಯಾದರೆ ಬಂಡಿ ಬಿದ್ದು ಹೋಗುತ್ತದೆ. ಇಂಥಹ ಸಂಬಂಧ ಇರುವಾಗ ದಂಪತಿಗಳ ನಡುವೆ ಪ್ರೀತಿಯೇ ಇರಬೇಕು, ಇಬ್ಬರ ನಡುವೆ ನಾನು ಹೆಚ್ಚು ಎನ್ನುವ ಭಾವನೆ ಯಾರಿಗಾದರೂ ಬಂದರೆ ಅವರ ಸುಮಧುರ ಪ್ರೀತಿಯ ನಡುವೆ ಅಹಂ ಬಂದಂತೆ, ಅಹಂ ಮನುಷ್ಯನನ್ನು ತಿನ್ನುತ್ತದೆ.



ವಿದ್ಯ, ರೂಪ, ಸಂಪತ್ತು ಯಾವುದರಲ್ಲಿ ಒಬ್ಬರು ಹೆಚ್ಚು ಒಬ್ಬರು ಕಡಿಮೆ ಇರಬಹುದು ಆದರೆ ಅವುಗಳು ನಿರ್ಮಲ ಪ್ರೀತಿಯ ಮಧ್ಯ ಬರಬಾರದು. ಅದುವೇ ಸುಖ ದಾಂಪತ್ಯಕ್ಕೆ ಕಾರಣ. ತುಸು ಕೋಪ, ಸಣ್ಣ ಪುಟ್ಟ ಜಗಳ ಸಹಜ ಅದ್ರಲ್ಲಿ ಯಾರಾದರೂ ಒಬ್ಬರು ತಗ್ಗಿದರೂ ಜಗಳ ಮುಗಿಯುತ್ತೆ ನಾನೇಕೆ ತಗ್ಗಬೇಕು ಎನ್ನುವುದು ಅಹಂನ ಲಕ್ಷಣ.ಇವುಗಳು ಬೆಳೆದರೆ ಅದು ಜಗಳಗಳಿಗೆ ಹಾದಿ ಮಾಡಿ ಕೊಡುತ್ತದೆ.

ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಇದೆ ಆದರೆ ಅದಕ್ಕಿಂತಲು ಮಾನಸಿಕವಾಗಿ ಮನಗಳು ಒಂದಾಗಬೇಕು, ಮಾನಸಿಕ ಸಂಬಂಧಗಟ್ಟಿಯಾಗಬೇಕು. ಜಗಳಕ್ಕೆ ಹಾದಿ ಮಾಡಿಕೊಡದೆ ಸರಿಯಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಇಬ್ಬರಲ್ಲಿ ಇರುತ್ತದೆ. ಎರಡು ಕೈ ಸೇರಿದರೆ ಚಪ್ಪಾಳೆ ಆದರೆ ಗಂಡ ಹೆಂಡತಿಯ ಒಂದೊಂದು ಕೈ ಸೇರಿದರೆ ಸುಖ ಸಂಸಾರ. ಪಾಣಿಗ್ರಹಣ ಎಂದರೆ ಇಬ್ಬರೂ ಜೊತೆಯಾಗಿ ಸಹಕಾರದಿಂದ ನಡೆಯುವುದು.

ಪ್ರೀತಿಯ ಕೋಟೆಯನ್ನು ಭದ್ರವಾಗಿ ಕಟ್ಟಿ ಪ್ರೀತಿ ಅನ್ನುವ ಮಧುರ ಬಾಂಧವ್ಯದಿಂದ ಅದನ್ನು ಭದ್ರ ಪಡಿಸಿ ಅಹಂ ಎಂಬ ಅಸ್ತ್ರದಿಂದ ಅದರಲ್ಲಿ ಬಿರುಕು ಮೂಡಿಸಬೇಡಿ. ಮಾತು ಆಡಿದರೆ ಹೋಯಿತು ಮುತ್ತು ಹೊಡೆದರೆ ಹೋಯಿತು ಮನಸು ಒಮ್ಮೆ ಚೂರಾದರೆ ಅಂಟಿಕೊಳ್ಳುವುದು ಕಷ್ಟ ಅದಕ್ಕಾಗಿ ಅಹಂ ಅನ್ನು  ಮದ್ಯದಲ್ಲಿ ತಂದು ಆ ಭದ್ರಕೋಟೆಯನ್ನು ಮುರಿಯಬೇಡ.

ಒಬ್ಬರಿಗಿಂತಲು ಒಬ್ಬರೂ ಮೇಲು ಕೀಳು ಎನ್ನುವ ಭಾವನೆ ಬರದೆ ಇರಬೇಕು. ಇನ್ನೊಬ್ಬರೊಂದಿಗೆ ಹೋಲಿಕೆ ಬೇಡ. ಇಬ್ಬರ ಮನಸ್ಸು ಒಂದಾದ ಮೇಲೆ ಜಗಳದ ಮಾತೆಲ್ಲಿ.

ಅಹಂ ಅನ್ನೋ ಈ ಎರಡು ಅಕ್ಷರ ಸುಖ ಸಂಸಾರಕ್ಕೆ ಮುಳ್ಳುಇದ್ದಂತೆ, ಸುಂದರವಾಗಿರುವ ಗುಲಾಬಿಯ ಹೂವಿನ ಕೆಳಗೆ ಮುಳ್ಳು ಇರುತ್ತವೆ ಅದನ್ನು ಪ್ರೇಮದ ಪ್ರತೀಕ ಎಂದು ತೆಗೆದುಕೊಂಡಾಗ ಅದರೊಂದಿಗೆ ಮುಳ್ಳು ಕೂಡ ತೆಗೆದುಕೊಳ್ಳುತ್ತೇವೆ .ಅದರಂತೆ ಪ್ರೀತಿಯ ಜೊತೆಗೆ ಸಣ್ಣ ಪುಟ್ಟ ಕೋಪ ತಾಪ ಸಹಜ ಅದು ಇಗೋ ಆಗಬಾರದು. ಇಂತಹ ಇಗೋದಿಂದ ಎಷ್ಟೋ ಸಂಸರಗಳು ಒಡೆದು ಹೋಗಿವೆ ಅದು ವಿಚ್ಛೇದನಕ್ಕೆ ಕರೆದೊಯ್ದು ದಂಪತಿಗಳನ್ನು ಅಗಲಿ. ಸುಖ ಸಂಸಾರದ ಮಧ್ಯ ಇಗೋ ಅನ್ನುವ ಪದಕ್ಕೆ ಜಾಗ ನೀಡದೆ ಇರುವುದೇ ಶ್ರೇಯಸ್ಸು.

ಹೇಗೆ ಇಗೋ ಅಸ್ತ್ರ ಪ್ರೀತಿಯ ಭದ್ರಕೋಟೆಯನ್ನು ಮುರಿಯಲು ಬಿಡಬಾರದು ಅಷ್ಟು ಗಟ್ಟೆಯಾಗಬೇಕು ಪ್ರೇಮ ಸಂಬಂಧ ಜನ್ಮ ಜನ್ಮಗಳ ಅನುಬಂಧ.

-ಹೇಮಾ ವೆಂಕಟೇಶ್ ಹಂದ್ರಾಳ, ಬಾಗಲಕೋಟೆ

Tags: Ego, Love, Relationship, ಅಹಂಕಾರ, ಪ್ರಿತಿ, ಸಂಬಂಧ, ಬಾಂಧವ್ಯ

Post a Comment

ನವೀನ ಹಳೆಯದು