(ಚಿತ್ರ ಕೃಪೆ: ಎಚ್‌ಆರ್ ಕಥಾ)
ಕಠಿಣ ಕೆಲಸ ಮತ್ತು ಚತುರ ಕೆಲಸ.
ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದ್ದಾರೆ, ಕೆಲಸದ ಬಗೆ ಅವರವರ ಮೇಲೆ ಅವರ ವೃತ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
ಯಾವುದೇ ಕೆಲಸವಿರಲಿ ಶ್ರದ್ಧೆ ಮತ್ತು ಮನಸ್ಸಿನಿಂದ ಮಾಡಿದರೆ ಅದು ಯಶಸ್ವಿಯಾಗುತ್ತದೆ.
ಕಠಿಣ ಶ್ರಮ + ಗುರಿ + ಸಮರ್ಪಣೆ = ಯಶಸ್ಸು success
ಯಶಸ್ಸಿನ ಎಲ್ಲಾ ಹಾದಿಗಳು ಒಂದಲ್ಲಾ ಒಂದು ಕಡೆಯಿಂದ ಕಠಿಣ ಪರಿಶ್ರಮವನ್ನು ಹಾದು ಬರಲೇಬೇಕು, ಹಾಗಂತ ಕಠಿಣ ಪರಿಶ್ರಮಮಾತ್ರದಿಂದ ಇಂದಿನ ಕಾಲದಲ್ಲಿ ಮುಂದೆ ಬರುವುದು ಸರಳವಲ್ಲ ಏಕೆಂದರೆ ಕಠಿಣ ಶ್ರಮ hard work ಗಿಂತಲೂ smart work ಸ್ಮಾರ್ಟ್ ವರ್ಕ್ ಬಹಳಷ್ಟು ಉಪಯುಕ್ತವಾಗಿದೆ, ಹಾಗಾದರೆ ಸ್ಮಾರ್ಟ್ ವರ್ಕ್ ಅಥವಾ ಚತುರತೆಯಿಂದ ಕೆಲಸ ಮಾಡುವುದಂದರೆ ಏನು ಅದನ್ನು ಹೇಗೆ ಅಳವಡಿಸುವುದು?
ಹಾರ್ಡ್ ವರ್ಕ್ ಎಂದರೆ ದೈಹಿಕ ಶ್ರಮ ಮತ್ತು ಹೆಚ್ಚಿನ ಪರಿಶ್ರಮದಿಂದ ನಿಗದಿತ ಅವಧಿಯಲ್ಲಿ ತೊಟ್ಟ ಕಾರ್ಯವನ್ನು ಪೂರ್ಣಗೊಳಿಸುವುದು, ಆದರೆ ಸ್ಮಾರ್ಟ್ ವರ್ಕ್ ಎಂದರೆ ಕಡಿಮೆ ದೈಹಿಕ ಶ್ರಮದಿಂದ, ಬುದ್ಧಿಯ ಚತುರತೆಯನ್ನು ಉಪಾಯೋಗಿಸಿ ಮಾಡುವ ಕೆಲಸವನ್ನು ಸರಳವಾಗಿಸಲು ಸರಳ ಉಪಾಯಗಳು ಮತ್ತು ಸರಿಯಾದ ಯೋಜನೆ planning ರೂಪಿಸಿ ನಿಗದಿತ ಸಮಯದ ಅವಧಿಗೂ ಮುನ್ನ ಸರಳವಾಗಿ ಮಾಡುವ ಕೆಲಸಕ್ಕೆ ಸ್ಮಾರ್ಟ್ ವರ್ಕ್ ಎನ್ನಬಹುದು.
ಇಂದಿನ ದಿನಮಾನಗಳಲ್ಲಿ ಎಲ್ಲರೂ ಗಡಿಯಾರದ ಹಿಂದೆ ಓಡುತ್ತಿದ್ದರೆ ಆದ್ದರಿಂದ ಎಲ್ಲರೂ ಈಗ ಸ್ಮಾರ್ಟ್ ವರ್ಕ್ ಬಯಸುತ್ತಾರೆ. Interview ಸಂದರ್ಶನಗಳಲ್ಲಿ ಹೆಚ್ಚಾಗಿ ಸ್ಮಾರ್ಟ್ ವರ್ಕ್ ಬಗ್ಗೆ ಕೇಳುತ್ತಾರೆ, ಹಾಗೆಯೇ ಸ್ಮಾರ್ಟ್ ವರ್ಕ್ ಮಾಡುವ ಕೆಲಸಗಾರರು ಬೇಗ ಮುಂದೆ ಬರುತ್ತಾರೆ.
ಅಂತಹ ಸ್ಮಾರ್ಟ್ ವರ್ಕ್ ನಿತ್ಯ ನಮ್ಮ ಜೀವನದಲ್ಲಿ ಎಲ್ಲರಿಗೂ ಅವಶ್ಯಕತೆ ಬಿದ್ದೆ ಬೀಳುತ್ತದೆ, ಅದರೊಂದಿಗೆ ಚತುರತೆ ಬೆಳೆಸಲು ಇಂದಿನ ಟೆಕ್ನಾಲೊಜಿ technology ನಾವು ಅರಿತುಕೊಳ್ಳಬೇಕು. ಹಾಗಿದ್ದಾಗ ಮಾತ್ರ ಈ ಸ್ಪರ್ಧಾ ಯುಗದಲ್ಲಿ ಸ್ಪರ್ದಿಸಲು ಸಾಧ್ಯ.
ಅಬ್ರಾಹಂ ಲಿಂಕನ್ ಹೇಳಿದಂತೆ "ನನಗೆ 6 ಗಂಟೆ ಮರ ಕಡೆಯುವ ಕೆಲಸವನ್ನು ಕೊಟ್ಟರೆ ಅದರಲ್ಲಿ ನಾನು 4 ಗಂಟೆ ನನ್ನ ಕೊಡಲಿಯನ್ನು ಚೂಪಾಗಿಸಲು ಕಳೆಯುತ್ತೇನೆ"
ಇದರ ತಾತ್ಪರ್ಯವೇನೆಂದರೆ ಮಾಡುವ ಕೆಲಸ ತೀಕ್ಷ್ಣತೆಯಿಂದ ಮಾಡಿದರೆ ಅದು ಬೇಗ ಮತ್ತು ಸರಿಯಾಗಿ ಪೂರ್ಣಗೊಳ್ಳುತ್ತದೆ.
ಜಾಣ ಕಾಗೆಯ ಕಥೆ ಎಲ್ಲರಿಗೂ ತಿಳಿದಿದ್ದೆ, ಕಲ್ಲಿನ ಸಹಾಯದಿಂದ ಗಡಿಗೆ ತಳದಲ್ಲಿ ಇದ್ದ ನೀರನ್ನು ಮೇಲಕ್ಕೆ ಬರುವಂತೆ ಮಾಡಿ ನೀರು ಕುಡಿದು ದಾಹ ತೀರಿಸಿಕೊಂಡ ಕಾಗೆಯ ಕಥೆ, ಆದರೆ ಇಂದಿನ ಕಾಗೆ ಕಲ್ಲಿಗಾಗಿ ಅಲ್ಲಿ ಇಲ್ಲಿ ಹುಡುಕದೆ ಸ್ಟ್ರಾ ತಂದು ನೀರನ್ನು ಸರ್ರೆಂದು ಎಳೆಯಿತು.
ನಿಮ್ಮ ಬಾಸ್ ವೇಗವಾಗಿ ಮೀಟಿಂಗ್ ನೋಟ್ಸ್ ಹೇಳಿದರೆ ಅದನ್ನು ಮುಂಚೆ ಶಾರ್ಟ್ ಹ್ಯಾಂಡ್ ಉಪಯೋಗಿಸಿ ಬರೆದುಕೊಳ್ಳುತ್ತಿದ್ದರು, ಈಗ ಅದನ್ನು ರೆಕಾರ್ಡ್ ಮಾಡಿ ನಂತರ doc, ppt ಮಾಡಿಕೊಳ್ಳಬಹುದು, ಯಾವುದೇ ಅಂಶ ಕೂಡ ಮಿಸ್ ಆಗುವುದಿಲ್ಲ.
ನೀವು ಎಲ್ಲಿಗಾದರೂ ಹೋಗಬೇಕಾದರೆ ಗೂಗಲ್ ಮ್ಯಾಪ್ಸ್ ಬಳಸಿ ಟ್ರಾಫಿಕ್ ಇಲ್ಲದ ಸುಗಮ ಮಾರ್ಗವನ್ನು ಆಯ್ದುಕೊಂಡು ಅಲ್ಲಿಗೆ ಸಮಯಕ್ಕೆ ಸರಿಯಾಗಿ ತಲುಪುವುದು ಸ್ಮಾರ್ಟ್ ವರ್ಕ್.
ನೀವು ಸಾಕಷ್ಟು ನೋಟ್ಸ್ ಮಾಡುವುದು ಇದ್ದಾಗ, ಶೀಘ್ರವಾಗಿ ನೋಟ್ಸ್ ಬರೆದು ಓದಿಕೊಳ್ಳಬೇಕಾದಾಗ ನೀವು voice notes ಧ್ವನಿ ಸಹಾಯದಿಂದ ನೋಟ್ಸ್ ಬೇಗನೆ ಸಿದ್ಧಪಡಿಸಬಹುದು, ಇದು ಕೇವಲ ಪುನರಾವರ್ತನೆಗೆ ಅಣುವಾಗುತ್ತದೆ, ಆದರೆ ಮುಂಚೆ ನೀವು ಅದನ್ನು ಓದಿ ಬರೆದು ಇಟ್ಟುಕೊಂಡಿರಬೇಕು. voice ನೋಟ್ಸ್ ಮಾಡುವುದು ಒಂದು ಸ್ಮಾರ್ಟ್ ವರ್ಕ್.
ನಿಮ್ಮ ಬಾಸ್ ನಿಮಗೆ ಒಂದು ಕೆಲಸ ಹೇಳಿದರೆ ಹೇಳಿದನ್ನಷ್ಟೇ ಮಾಡುವುದು ಹಾರ್ಡ್ ವರ್ಕ್, ಸ್ಮಾರ್ಟ್ ವರ್ಕ್ ಎಂದರೆ ಅವರು ಹೇಳಿದ ಕೆಲಸ ತಲೆಯಿಂದ ಬುಡದವರೆಗೆ ಜಾಲಾಡಿಸಿ ವರದಿ ಕೊಡುವುದು ಸ್ಮಾರ್ಟ್ ವರ್ಕ್.
ಅಮ್ಮ ಬಜಾರಿಗೆ ಹೋಗಿ ಏನಾದರೂ ತರಲು ಅಥವಾ ರೇಟ್ ಕೇಳಲು ಕಳುಹಿಸಿದರೆ, ಅದನ್ನು ಕೇಳಿ ಬರುವುದು ವರ್ಕ್ ಆದರೆ ಎರಡು ಕಡೆ ವಿಚಾರಮಾಡಿ ಕ್ವಾಲಿಟಿ ಕ್ವಾನಟಿಟಿ ಬಗ್ಗೆ ತಿಳಿದು ಪರಿಶೀಲಿಸಿದ ನಂತರ ಖರೀದಿ ಮಾಡಿ ತರುವುದು ಸ್ಮಾರ್ಟ್ ವರ್ಕ್.
ಅಂತರಿಕ್ಷದಲ್ಲಿ ಸಾಧಾರಣ ಪೆನ್ನಿನಿಂದ ಬರೆಯಲು ಸಾಧ್ಯವಿಲ್ಲ ಆದ್ದರಿಂದ NASA ದವರು ಸಾವಿರಾರು ಡಾಲರ್ ಖರ್ಚು ಮಾಡಿ ಜೀರೋ ಗ್ರ್ಯಾವಿಟಿ ಪೆನ್ ತಯಾರು ಮಾಡಲು ಒಂದು ದಶಕದ ಕಾಲ ಕಳೆದು ಒಂದು ಪೆನ್ ತಯಾರು ಮಾಡಿದರು. ಆದರೆ ಅದೇ ಕೆಲಸಕ್ಕೆ ರಷ್ಯನ್ನರು ಪೆನ್ಸಿಲ್ ಉಪಯೋಗಿಸಿದರು.
ಒಂದು ಸತ್ಯ ಏನೆಂದರೆ ಅವಶ್ಯಕತೆಯೇ ಸಂಶೋಧನೆಯ ತಾಯಿ. ಬೇಡಿಕೆ ಮತ್ತು ಅವಶ್ಯಕತೆಗಳನ್ನು ಶೀಘ್ರ ಗತಿಯಲ್ಲಿ ಪೂರೈಸಲು ಮಾನವನ ಸಂಶೋಧನೆಗಳೇ ಸಾಕ್ಷಿ. ಇವೆಲ್ಲವೂ ಸ್ಮಾರ್ಟ್ ಇನ್ವೆಂಟ್ ಅಂತ ಹೇಳಬಹುದು.
ಒಂದು ಬಾರಿ ಇಬ್ಬರು ಮರ ಕಡೆಯುವವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು, ಸ್ಪರ್ಧೆ ಏನೆಂದರೆ ಮುಂಜಾನೆಯಿಂದ ಮುಸ್ಸಂಜೆವರೆಗೆ ಯಾರು ಹೆಚ್ಚು ಕಟ್ಟಿಗೆ ಕಡೆಯುತ್ತಾರೆ ಎಂದು, ಇಬ್ಬರು ಆರಂಭಮಾಡಿದರು, ಮೊದಲನೆಯವನು ಬಿಡುವಿಲ್ಲದೆ ಕಟ್ಟಿಗೆ ಕಡೆಯುತ್ತಿದ್ದನು, ಎರಡನೆಯವನು ಮಧ್ಯದಲ್ಲಿ ಬಿಡುವು ತೆಗೆದುಕೊಳ್ಳುತ್ತಿದ್ದ, ಸಂಜೆ ಹೊತ್ತು ಸ್ಪರ್ಧೆ ಮುಗಿದಾಗ ಎರಡನೆಯವನ ಕಟ್ಟಿಗೆ ದುಪಟ್ಟು ಇತ್ತು. ಏಕೆಂದರೆ ಅವನು ವಿಶ್ರಾಂತಿ ಪಡೆದಾಗಲೆಲ್ಲಾ ಅವನು ತನ್ನ ಕೊಡಲಿಯನ್ನು ಚೂಪಾಗಿಸುತ್ತಿದ್ದನು, ಆದ್ದರಿಂದ ದುಪಟ್ಟು ಕಟ್ಟಿಗೆ ಕಡೆಯಲು ಸಾಧ್ಯವಾಯಿತು ಮೊದಲೆಯವನು ಮಾಡಿದ್ದು ಹಾರ್ಡ್ ವರ್ಕ್, ಎರಡನೆಯವನು ಮಾಡಿದ್ದು ಸ್ಮಾರ್ಟ್ ವರ್ಕ್.
Necessity is the mother of invention
ಹೇಗೆ ಪ್ರತಿನಿತ್ಯ ಜೀವನದಲ್ಲಿ ಸ್ಮಾರ್ಟ್ ವರ್ಕ್ ನಿಮ್ಮನ್ನು ಯಶಸ್ವಿಯಾಗಿ ಮುಂದೆ ಬರಲು ಸಹಾಯ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ ವರ್ಕ್ ಮಾಡುವವರು ತಮ್ಮ ಕಾರ್ಯಗಳಲ್ಲಿ ಸಫಲರಾಗಿ ಇರುವ ಸಮಯವನ್ನು ಸಾರ್ಥಕ ರೂಪದಲ್ಲಿ ಬಳಸಿ ನಂತರ ರಿಲ್ಯಾಕ್ಸ್ ಆಗಿರುತ್ತಾರೆ.
Strategy ಅಂದರೆ ಸರಿಯಾದ ಯೋಜನೆ, ಯೋಚನೆ ಮತ್ತು ನಿರ್ವಹಣೆ ಸ್ಮಾರ್ಟ್ ವರ್ಕ್ಗೆ ಬೇಕಾಗುವ ಅಂಶಗಳು.
- ಹೇಮಾ ವೆಂಕಟೇಶ್ ಹಂದ್ರಾಳ, ಬಾಗಲಕೋಟೆ
ಕಾಮೆಂಟ್ ಪೋಸ್ಟ್ ಮಾಡಿ