ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅ.10-18: 'ಸೌಗಂಧಿಕಾ'ದಲ್ಲಿ ಎಸ್ ಕೆ ನಾಡಿಗರ ವ್ಯಂಗ್ಯಚಿತ್ರಗಳ ಪ್ರದರ್ಶನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮೂಲತಃ ಶಿವಮೊಗ್ಗದವರಾದ ಸತ್ಯನಾರಾಯಣರಾವ್ ಕೃಷ್ಣಸ್ವಾಮಿ ರಾವ್ ನಾಡಿಗರು 1928ರ ಮೇ 6ರಂದು ಜನಿಸಿದರು. ಶಿವಮೊಗ್ಗದಲ್ಲಿ ಶಿಕ್ಷಣ ಪಡೆದ ನಾಡಿಗರು ಐವತ್ತರ ದಶಕದಲ್ಲಿ "ಮಿನಿ ಮ್ಯಾಗ್" ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಉದ್ಯೋಗವನ್ನು ಆರಂಭಿಸಿದರು. ಬಾಲ್ಯದಲ್ಲಿಯೇ ವ್ಯಂಗ್ಯ ರೇಖೆಗಳ ಬೆನ್ನು ಹತ್ತಿದ ನಾಡಿಗರು ಏಕಲವ್ಯನಂತೆ ಗುರುವಿಲ್ಲದ ಕಲಾವಿದನಾಗಿ ಸುಧಾ' ಮಯೂರ' ಪ್ರಜಾಮತ' ವಿನೋದ 'ಉತ್ಥಾನ 'ಆಂಗ್ಲ ಪತ್ರಿಕೆಗಳಾದ ಇಲಸ್ಟ್ರೇಡ್ ವೀಕ್ಲಿ 'ಕಾರವಾನ್, ಕರ್ಮವೀರ ಸಹಿತ ಅನೇಕ ಪತ್ರಿಕೆಗಳಿಗಾಗಿ ನಗೆಬರಹ ಕಥೆ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದರು.

ಐವತ್ತರ ದಶಕದಲ್ಲಿ ತನ್ನ ಪ್ರತಿಭೆಯನ್ನು ವಿಸ್ತರಿಸಿ "ಬಣ್ಣದ ಚಿಟ್ಟೆ "ಕನಸಿನೊಳಗೊಂದು ಕನಸು' ಕನ್ಹಯ್ಯ ರಾಮ' ಎನ್ನುವ ಮೂರು ಕಾದಂಬರಿಗಳನ್ನು ರಚಿಸಿದರು. ಇವುಗಳಲ್ಲಿ ಕನ್ನಯ್ಯ ರಾಮ ಕಾದಂಬರಿಯು ಎಪ್ಪತ್ತರ ದಶಕದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಎಂ.ಎಸ್. ಸತ್ಯು ಅವರ ನಿರ್ದೇಶನದಲ್ಲಿ "ಕನ್ನೇಶ್ವರ ರಾಮ" ಎಂಬುವ ಹೆಸರಿನಲ್ಲಿ ಚಲನಚಿತ್ರವಾಗಿ ಬಿಡುಗಡೆಗೊಂಡಿತು.

ನಂತರ ಬೆಂಗಳೂರು ತೊರೆದ ನಾಡಿಗರು ಭದ್ರಾವತಿಯ ಮೈಸೂರು ಪೇಪರ್ ಮಿಲ್ ನಲ್ಲಿ ಡೆಪ್ಯುಟಿ ಅಕೌಂಟ್ ಆಫೀಸರ್  ಆಗಿ ಅಲ್ಲಿಯೇ ನಿವೃತ್ತಿ ಹೊಂದಿದ್ದರು. ಎಪ್ಪತ್ತರ ದಶಕದಲ್ಲಿ ಕರಾವಳಿಯ ಜನಪ್ರಿಯ ಪತ್ರಿಕೆಯಾದ ಉದಯವಾಣಿಯಲ್ಲಿ "ಏನಂತೀರಿ?? ಎನ್ನುತ್ತಲೇ ಕನ್ನಡಿಗರ ಮನಗೆದ್ದರು. 'ತುಷಾರ', 'ತರಂಗ'ಗಳಲ್ಲದೆ ರಾಜ್ಯ ಪತ್ರಿಕೆಗಳ ವಿಶೇಷಾಂಕಗಳ ಮೂಲಕವೂ ಓದುಗರಿಗೆ ಹಾಸ್ಯದೌತಣ ಉಣಬಡಿಸುತ್ತಿದ್ದರು.

ಕಳೆದ ಶತಮಾನದಲ್ಲಿ ಆಗಿ ಹೋದ ಅನೇಕ ಹಿರಿಯ ತಲೆಮಾರಿನ  ಕಲಾವಿದರ ಸಾಲಿನಲ್ಲಿರುವ ನಾಡಿಗರ ವ್ಯಂಗ್ಯಚಿತ್ರಗಳು ನಗೆ ಬುಗ್ಗೆಯಾಗಿ ಚಿಮ್ಮಿಸಿದ ನೆನಪು  ಸುಕ್ಕುಗಟ್ಟಿದ ಅನೇಕ ಮುಖಗಳಲ್ಲಿ ಇಂದು ಕೂಡ ನಗೆಯ ಹೊನಲು ಹರಿಸಬಲ್ಲಂತಹ ಶಕ್ತಿಯುಳ್ಳದ್ದು. ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯ ಚಿತ್ರಗಳನ್ನು ರಚಿಸಿರುವ ನಾಡಿಗರು ಸಾಮಾಜಿಕ ರಾಜಕೀಯ ಸಾಂಸಾರಿಕ ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಹಾಸ್ಯದ ಭಂಡಾರದ ನಗೆಯ ಹೂ ಗೊಂಚಲನ್ನು ನಮಗಿತ್ತವರು.

ಸಮಾನ ಮನಸ್ಕ ವ್ಯಂಗ್ಯಚಿತ್ರ ಕಲಾವಿದರನ್ನೊಳಗೊಂಡ ಅಖಿಲ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವನ್ನು ಸ್ಥಾಪಿಸಿ ಸ್ಥಾಪಕ ಅಧ್ಯಕ್ಷರಾದರು. ಉಡುಪಿಯಲ್ಲಿ ಎಪ್ಪತ್ತರ ದಶಕದಲ್ಲಿ ದೇಶದ ನಾನಾ ಮೂಲೆಗಳಿಂದ ವ್ಯಂಗ್ಯಚಿತ್ರಕಾರರನ್ನು ಆಹ್ವಾನಿಸಿ ಏರ್ಪಡಿಸಿದ್ದ ಸಮ್ಮೇಳನ ಗಮನಾರ್ಹ ದಾಖಲಾರ್ಹ. ಇದು ಭಾರತದ ಮೊದಲನೆಯ ವ್ಯಂಗ್ಯ ಚಿತ್ರಕಾರರ ಸಂಘ ಎನ್ನುವುದು ಉಲ್ಲೇಖನೀಯ ಮತ್ತು ಕನ್ನಡಿಗರಿಗೆ ಹೆಮ್ಮೆ ತಂದ ವಿಚಾರ. ನಾಡಿಗರ ಹಲವು ನಗೆ ಲೇಖನಗಳನ್ನು ಬಳಸಿ ಚಿತ್ರೀಕರಿಸಿದ ಚಿತ್ರಣಗಳು ದೂರದರ್ಶನ ಮತ್ತು ಅನೇಕ ಕನ್ನಡ ವಾಹಿನಿಗಳಲ್ಲಿ ಪ್ರಸಾರಗೊಂಡು ಮನಸೂರೆಗೊಂಡಿವೆ.

ಇವರ ಸಂಸಾರದಲ್ಲಿ ಇವರ ಪತ್ನಿ ವಿಶಾಲಕ್ಷಮ್ಮ ಮತ್ತು ಮೂವರು ಪುತ್ರರು. ರವೀಂದ್ರ ನಾಡಿಗ್. ಕೃಷ್ಣಸ್ವಾಮಿ ನಾಡಿಗ್. ಶಶಿಧರ ನಾಡಿಗ್. ಎಂಬತ್ತರ ದಶಕದಲ್ಲಿ ನಾಡಿಗರು ದೇಹಾಂತ್ಯಗೊಂಡರೂ ಅವರು ರಚಿಸಿರುವ ವ್ಯಂಗ್ಯಚಿತ್ರಗಳು ಸಾಹಿತ್ಯ ಕೃತಿಗಳು ಅಜರಾಮರ. ಗತಿಸಿರುವ ಅವರ ನೆನಪುಗಳನ್ನು ಮಾಡುತ್ತಾ ಕನ್ನಡ ಸಾರಸ್ವತ ಲೋಕಕ್ಕೆ ಅವರು ನೀಡಿರುವ ಅಮೂಲ್ಯವಾದ ಅರುವತ್ತರಿಂದ ಎಪ್ಪತ್ತರ ದಶಕದಲ್ಲಿ "ಮಯೂರ" ಪತ್ರಿಕೆಗಾಗಿ ಅವರು ರಚಿಸಿರುವ ಪ್ರಕಟಿಸಿರುವ  ಕೆಲವು ವ್ಯಂಗ್ಯ ರೇಖೆಗಳನ್ನು "ನಾಡಿಗರಿಗೊಂದು ನಮನ" ಎನ್ನುವಂತೆ ಸೌಗಂಧಿಕಾ ದಲ್ಲಿ ಏರ್ಪಡಿಸುತ್ತಿದ್ದೇವೆ. 


ನಾಡಿಗರ ಹಿರಿಮಗ ರವೀಂದ್ರ ನಾಡಿಗರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಸಾವಿರದ 1961ರಲ್ಲಿ ಜನಿಸಿದ ರವೀಂದ್ರರು ಭದ್ರಾವತಿಯಲ್ಲಿ ಶಿಕ್ಷಣ ಪೂರೈಸಿ ಬಳಿಕ ಮಣಿಪಾಲದ ಉದಯವಾಣಿಯಲ್ಲಿ ಉದ್ಯೋಗಿಯಾಗಿದ್ದು ಸದ್ಯ ಉಪಸಂಪಾದಕ ವೃತ್ತಿಯಿಂದ ನಿವೃತ್ತರಾಗಿರುತ್ತಾರೆ. ನಾಡಿಗರಂತೆ ಇವರು ನಗೆಬರಹ, ಪತ್ತೇದಾರಿ ಕಥಾನಕವನ್ನು ರಚಿಸಿದ್ದು ಇವುಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಎರಡು ಸಾವಿರದ ಎಂಟರಲ್ಲಿ ನಾಡಿಗರ ನಿಧನದ ನಂತರ ಉದಯವಾಣಿಯಲ್ಲಿ ನಾಡಿಗರ "ಏನಂತೀರಿ?' ಕಾಲಂ ಅನ್ನು ಮುಂದುವರಿಸಿ ಸುಮಾರು ಹತ್ತು ವರ್ಷಗಳ ಕಾಲ ಸಹಸ್ರಾರು ವ್ಯಂಗ್ಯ ಚಿತ್ರಗಳನ್ನು ರಚಿಸಿ ಓದುಗರ ಹೃದಯ ಗೆದ್ದವರು. ಹವ್ಯಾಸಿ  ಚಿತ್ರಕಾರನಾಗಿ ಹಲವು ಪತ್ರಿಕೆಗಳ ಓದುಗರಿಗೆ ಚಿರಪರಿಚಿತ ಹೆಸರು ರವೀಂದ್ರ ನಾಡಿಗರು. ಇವರ ಪತ್ನಿ ರಾಧಾ ಮತ್ತು ಪುತ್ರ ರಕ್ಷಿತ್ ನಾಡಿಗ್.

ಅಪ್ಪ ಮತ್ತು ಮಗನ ಬಾಂಧವ್ಯದ ಬದುಕಿನ ಕಾಲಘಟ್ಟದ ವ್ಯಂಗ್ಯಚಿತ್ರಗಳ ಪ್ರದರ್ಶನದ ವೇದಿಕೆ "ಸೌಗಂಧಿಕಾ" ಇದೊಂದು ಅಪೂರ್ವ ಅವಕಾಶ. ನಾಡಿಗ್ ಕಾರ್ಟೂನ್  ನಿತ್ಯನೂತನ, ನ್ಯೂ(ಸ್) -ಸೆನ್ಸ್ ಹೆಸರಿನೊಂದಿಗೆ ಸೆನ್ಸೆಕ್ಸ್ ಕುಸಿದು ಪಾತಾಳಕ್ಕೆ ಬಿದ್ದಿರುವ ಕರೋನಾ ಕಾಲಘಟ್ಟದ ಈ ಕಲ್ಚರಲ್ ಸೆನ್ಸ್ ನಿಮಗೆ ಇಷ್ಟವಾಗಬಹುದು ಎಂದು ನಿಮ್ಮೆಲ್ಲರನ್ನು ಪ್ರೀತಿಯಿಂದ ಈ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿದ್ದೇನೆ. ಕರೋನಾದ ನಿಯಮಗಳನ್ನು ಪಾಲಿಸಿ ಈ ವ್ಯಂಗ್ಯ ಚಿತ್ರಗಳನ್ನು ವೀಕ್ಷಿಸಬಹುದು. ಸಮಯ ಮುಂಜಾನೆ ಹತ್ತರಿಂದ ಸಂಜೆ ಆರು ಗಂಟೆಯ ವರೆಗೆ.

ಅಕ್ಟೋಬರ್ ಹತ್ತರಂದು ಅಪರಾಹ್ನ ಮೂರು ಗಂಟೆಗೆ ಸರಿಯಾಗಿ ಈ ಕಾರ್ಯಕ್ರಮ ಉದ್ಘಾಟನೆಯಾದರೆ ಹದಿನೆಂಟರಂದು ಭಾನುವಾರ ಸಂಪನ್ನಗೊಳ್ಳಲಿದೆ. ಪುತ್ತೂರಿನ ಸಂತ ಫಿಲೋಮಿನಾ ಪ್ರೌಢ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿದ್ದು ಕೊಂಡು ಸಹಸ್ರಾರು ಚಿತ್ರ ಕಲಾವಿದರನ್ನು ನಾಡಿಗೆ ನೀಡಿರುವ ಹಿರಿಯ ನಿವೃತ್ತ ಕಲಾ ಶಿಕ್ಷಕರಾದ ಶ್ರೀ ಎಂ. ಎಸ್. ಪುರುಷೋತ್ತಮ ಅವರು ಈ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.

ಮಾಣಿ ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವುದಾದರೆ ಪುತ್ತೂರಿನಿಂದ ಸುಳ್ಯದ ಕಡೆ ಆರು ಕಿಲೋಮೀಟರ್ ಪಯಣಿಸಿದಾಗ ಸೌಗಂಧಿಕ ನರ್ಸರಿ ಮತ್ತು ಗ್ಯಾಲರಿ ಜೊತೆಗಿದೆ. ದೂರವಾಣಿ  9900409380.

Tags: SK Nadig, Cartoon Exhibition,ಎಸ್‌,ಕೆ ನಾಡಿಗ್, ವ್ಯಂಗ್ಯಚಿತ್ರಗಳ ಪ್ರದರ್ಶನ,

Post a Comment

ನವೀನ ಹಳೆಯದು