ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಗಮಕ- ಶಿವಭಕ್ತಿಸಾರ; ವಾಚನ- ವ್ಯಾಖ್ಯಾನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಗಮಕಿಗಳ ಪರಿಚಯ: 

ಕಲಾಶ್ರೀ ಸಿ.ಪಿ.ವಿದ್ಯಾಶಂಕರ್, ಮಂಡ್ಯ:

ಕಳೆದ 35 ವರ್ಷಗಳಿಂದ ಮಂಡ್ಯದಲ್ಲಿ ನೆಲಸಿ ಗಮಕ, ಸಂಗೀತ ಕ್ಷೇತ್ರದಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ. ಮೂಲ ಹಾಸನ ಜಿಲ್ಲೆ ಚನ್ನರಾಯಪಟ್ಟಣ. ತಂದೆ- ಸಿ.ಆರ್.ಪಾಂಡುರಂಗ ಶಾಸ್ತ್ರಿಗಳು. ಸಂಗೀತ, ಸಾಮವೇದ ಸಂಸ್ಕೃತ ಪಂಡಿತರು. ತಾಯಿ ಕಮಲಮ್ಮ. ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದವವರು. ಕಾಲೇಜು ದಿನಗಳಲ್ಲೇ ಸುಗಮ ಸಂಗೀತ. ತಂಡ ಕಟ್ಟಿ ರಾಜ್ಯಾದ್ಯಂತ ಕಾರ್ಯಕ್ರಮ ನೀಡಿದ್ದಾರೆ. ಗಮಕದಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡು 1977 ರಲ್ಲಿ ಗಮಕ ಕಲಾ ಪರಿಷತ್ ನ ಗಮಕ ಪ್ರವೇಶ. ಪ್ರೌಢ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ. ತಂದೆಯಿಂದಲೇ ಶಾಸ್ತ್ರೀಯ ಸಂಗೀತದ ಶಿಕ್ಷಣ. ಪ್ರಸಿದ್ದ ಗಮಕ ಗುರುಗಳಾದ ವೀರಭದ್ರ ಶೆಟ್ಟರು. ಚ.ರ.ರಂಗಸ್ವಾಮಿ. ಹಾಗೂ ಗಮಕಿ ಬಾಂಬೆ ಕೃಷ್ಣಮೂರ್ತಿ. ಗಮಕ ಭೀಷ್ಮ ರಾಘವೇಂದ್ರ ರಾಯರ ಬಳಿ ಕಠಿಣ ತರಬೇತಿ ಪಡೆದು ರಾಜ್ಯಾದ್ಯಂತ ಯಶಸ್ವಿ ಗಮಕ ಕಾರ್ಯಕ್ರಮ ಗಳನ್ನು ನೀಡಿದ್ದಾರೆ.

ಆಕಾಶವಾಣಿ ಮದ್ರಾಸ್. ಬೆಂಗಳೂರು. ಹಾಸನ. ಮೈಸೂರು ಇವರ ಗಮಕ ವಾಚನ ಪ್ರಸಾರವಾಗಿ ಮೆಚ್ಚುಗೆ ಗಳಿಸಿದೆ. ಗಮಕ ಸೌರಭದಲ್ಲಿ ಭಾಗವಹಿಸಿದ್ದಾರೆ. ಚಂದನ ವಾಹಿನಿಯಲ್ಲಿ ಸಾದರಪಡಿಸಿದ ಗಮಕ ಶೈಲಿಯ ವಚನಾಮೃತ. ಯುಗಾವತಾರಿ ಬಸವ ದರ್ಶನ ದೇಶ ವಿದೇಶಗಳಲ್ಲಿ ಮನ್ನಣೆ ಪಡೆದಿದೆ. 2014 ರಲ್ಲಿ ಪ್ರತಿಷ್ಠಿತ ಕರ್ನಾಟಕ ಕಲಾಶ್ರೀ ಪ್ರಶಸ್ತಿ. ರಾಜ್ಯೋತ್ಸವ, ಸಂಸ್ಕೃತಿಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಗಮಕೋತ್ಸವ ಗಮಕ ಸಪ್ತಾಹ, ಯುಗಾದಿ ಪುರಸ್ಕಾರ, ಗಮಕ ಹಬ್ಬ ಕಾರ್ಯಕ್ರಮ ಗಳನ್ನು ಆಯೋಜಿಸುವುದರ ಮೂಲಕ ಗಮಕ ಕಲೆಯ ಪ್ರಸಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಹಿರಿಯ ಗಮಕಿ. ಪತ್ರಕರ್ತರು. ಗಾಯಕರು.


ಡಾ.ಪ್ರದೀಪ್ ಕುಮಾರ ಹೆಬ್ರಿ: ಮಹಾ ಕವಿಗಳು ಸಾಹಿತಿಗಳು. ಮಂಡ್ಯ.

ಯುಗಾವತಾರಿ ರಘುಕುಲೋತ್ತಮ, ಕಲ್ಪತರು, ಉಡುತಡಿಯ ಕಿಡಿ ಮಧ್ವಾಚಾರ್ಯ, ಸೇರಿದಂತೆ 10 ಮಹಾ ಕಾವ್ಯಗಳನ್ನು ರಚಿಸಿದ್ದಾರೆ. ಉತ್ತರ ಕರ್ನಾಟಕದ ಲ್ಲಿ ನಡರದಾಡುವ ಬಸವಣ್ಣ ಎಂದೇ ಪ್ರಖ್ಯಾತರು. 415ಕ್ಕೂ ಹೆಚ್ಚು ಕೃತಿಗಳನ್ನು ವಿವಿಧ ಕಲಾ ಪ್ರಕಾರಗಳಲ್ಲಿ ರಚಿಸಿರುವ ಹೆಗ್ಗಳಿಕೆ. ಗಮಕ ವ್ಯಾಖ್ಯಾನ. ಉಪನ್ಯಾಸ ಗಳನ್ನು ರಾಜ್ಯಾದ್ಯಂತ ನಿರಂತರ ನೀಡುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಸಾಹಿತ್ಯ ಸಂಸ್ಕೃತಿಯ ಸೇವೆಯ ಮೂಲಕ ನಾಡಿನ ಹೆಮ್ಮೆಯ ಸಾಹಿತಿ ವ್ಯಾಖ್ಯಾನಕಾರರಾಗಿದ್ದಾರೆ. ಏಳು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿರುವ ಡಾ.ಹೆಬ್ರಿಯವರದ್ದು ಅಪರೂಪ ಸಾರ್ಥಕ  ಸಾಹಿತ್ಯ, ಗಮಕ ಸೇವೆಯಾಗಿದೆ.



Post a Comment

ನವೀನ ಹಳೆಯದು