ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕಾವ್ಯ ಗ್ರಹಿಕೆಯಲ್ಲಿ ಹೆಣ್ಣಾದರೂ ಪರಿಣಾಮದಲ್ಲಿ ಗಂಡು: ಪ್ರೊ. ಬಿ.ಅರ್. ಪೊಲೀಸ್ ಪಾಟೀಲ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಮಂಗಳೂರು: 'ಕಾವ್ಯ ಗ್ರಹಿಕೆಯಲ್ಲಿ ಹೆಣ್ಣಾದರೂ ಪರಿಣಾಮದಲ್ಲಿ ಗಂಡು' ಎಂದು ಹಿರಿಯ ಸಾಹಿತಿ ನಾಟಕಕಾರ ಬಾಗಲಕೋಟೆ ಬನಹಟ್ಟಿಯ ಪ್ರೊ.ಬಿ.ಆರ್. ಪೊಲೀಸ್ ಪಾಟೀಲ್ ಅವರು ಅಭಿಪ್ರಾಯ ಪಟ್ಟರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಏರ್ಪಡಿಸಿದ್ದ ರಾಜ್ಯಮಟ್ಟದ ಬೃಹತ್ ಆನ್ಲೈನ್ ವೀಡಿಯೊ ಕವಿ ಸಮ್ಮೇಳನ 'ಕನ್ನಡ ಕವಿ ಕಾವ್ಯ ಕಲರವ' ದ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

ಜಗತ್ತಿನ ಎಲ್ಲಾ ಸಾಹಿತ್ಯ ಕೃಷಿಯನ್ನು ಗಮನಕ್ಕೆ ತೆಗೆದುಕೊಂಡರೆ ಅದರ ಮೂರನೇ ಎರಡು ಭಾಗ ಕಾವ್ಯವೇ ಆಗಿದೆ. ಕವಿತೆ ತಾಯಿಗೊಂದು ಮಗು,ತಂದೆಗೆ ಮಂದಹಾಸ, ಮಕ್ಕಳಿಗೆ ಅಚ್ಚುಮೆಚ್ಚಿನ ಅಜ್ಜನ ಕೋಲು, ಮುದುಕರಿಗೊಂದು ಊರುಗೋಲು, ಕೂಲಿಗದು ಕೆಲಸದ ಕರೆಗಂಟೆ, ಕೈದಿಗೆ ಬಿಡುಗಡೆಯ ಆದೇಶ ಮತ್ತು ಸಮುದಾಯಕ್ಕೊಂದು ಸೆಲ್ಫಿ' ಎಂದು ಮಾರ್ಮಿಕವಾಗಿ ಅವರು ವಿಡಂಬಿಸಿದರು.

ಇದಕ್ಕೂ ಮುನ್ನ ಸಮ್ಮೇಳನವನ್ನು ಮೈಸೂರಿನಿಂದಲೇ ಉದ್ಘಾಟಿಸಿದ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಂಚಾಲಕರಾದ ಡಾ.ಎಂ.ಜಿ.ಆರ್. ಅರಸ್ ಅವರು ಮಾತನಾಡಿ, ' ಅಮೆರಿಕವೂ ಸೇರಿ ವಿಶ್ವದ ನೂರು ಕನ್ನಡ ಕವಿಗಳನ್ನು ಒಂದೇ ವೇದಿಕೆಯಲ್ಲಿ ವಿಶಿಷ್ಟ ಕಾವ್ಯಕಾರಂಜಿ ಹರಿಸಿರುವುದು ಅದ್ಭುತವಾದ ಸಾಹಸ ಮತ್ತು ಇಂತಹದೊಂದು ಕಾರ್ಯವೈಖರಿಯ ಮೂಲಕ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಎಲ್ಲರಿಗೂ ಮಾದರಿಯಾಗಿದೆ' ಎಂದರು.  

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಾ.ವೀ.ಕೃಷ್ಣದಾಸ್  ಆಶಯ ಭಾಷಣ ಮಾಡಿದರು. 'ರಾಜ್ಯವ್ಯಾಪ್ತಿಯಲ್ಲಿ ನಡೆಸಲು ಉದ್ದೇಶಿಸಿದ ಸಮ್ಮೇಳನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ದೊರೆತು ಸಮ್ಮೇಳನ ಯಶಸ್ಸು ಕಾಣಲು ಸಾಧ್ಯ ಆಯಿತು ಎಂದು ಹೇಳಿದರು.

ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಹಾಗೂ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಅವರು ಗಣ್ಯರನ್ನು ಬರಮಾಡಿಕೊಂಡು ಸ್ವಾಗತಿಸಿದರು.

ಸಮ್ಮೇಳನದಲ್ಲಿ ಕವಿಗಳಾದ ಮುದ್ದು ಮೂಡುಬೆಳ್ಳೆ, ರಮಿತ ಕುತ್ತಾರ್, ಮಂಗಳೂರು, ಸತ್ಯವತಿ ಭಟ್ ಕೊಳಚಪ್ಪು, ಶಾಂತ ಚೌರಿ ವಿಜಯಪುರ, ಡಾ.ಅರುಣಾ ನಾಗರಾಜ್, ಮಂಗಳೂರು, ಮಾನಸ ವಿಜಯ್ ಕೈತಂಜೆ, ಶ್ರೀಮತಿ ಅರುಣಾ ಶ್ರೀನಿವಾಸ, ಉಜಿರೆ, ಅರುಂಧತಿ ರಾವ್ ಮಂಗಳೂರು, ಅಚ್ಯುತ ರಾವ್ ಚಿಕ್ಕಮಗಳೂರು, ದಾಕ್ಷಾಯಿಣಿ ಉದಗಟ್ಟಿ, ರಾಣಿಬೆನ್ನೂರು, ಬದ್ರುದ್ದೀನ್ ಕೂಳೂರು, ಮಂಗಳೂರು, ಸೋಮನಾಥ್ ಸಾಲಿಮಠ್, ಬಳ್ಳಾರಿ, ಡಾ.ಎಸ್.ವಿ.ಪ್ರಭಾವತಿ ಮಂಡ್ಯ, ಮಾನಸ ಪ್ರವೀಣ್ ಭಟ್, ಮೂಡಬಿದ್ರೆ, ಪಾರ್ವತಿ ಜೋರಾಂಪುರ್ ಮಠ್, ವಿಜಯಪುರ, ಸುರೇಶ್ ಎಂ.ಯಾದಗಿರಿ, ಡಾ.ಸುರೇಶ್ ನೆಗಳಗುಳಿ, ಬಿ.ವೆಂಕಟೇಶ್, ಬಸವನಗುಡಿ, ಬೆಂಗಳೂರು, ಆನಂದ ಹಕ್ಕೆನ್ನವರ ಬೆಳಗಾವಿ, ಸುಪ್ರಿಯಾ, ಮಂಗಳೂರು, ವಿದ್ವಾನ್ ಮಂಜುನಾಥ್ ಪುತ್ತೂರು, ವಿಶ್ವನಾಥ್ ನಾರಾಯಣ ಬೇಂದ್ರೆ,ಗದಗ, ಚಂದ್ರಪ್ರಭಾವತಿ ಮಂಗಳೂರು, ಸರೋಜಿನಿ ಕೆ.ಮಾವಿನ್ಮರ್, ವಿಜಯಪುರ ಜಿಲ್ಲೆ, ಎನ್. ಆರ್.ರೂಪಶ್ರೀ, ಮೈಸೂರು, ರಶ್ಮಿ ಸನಿಲ್ ಮಂಗಳೂರು, ಸೀತಾಲಕ್ಷ್ಮೀ ವರ್ಮಾ ವಿಟ್ಲ,ಕುಮುದಾ ಡಿ.ಶೆಟ್ಟಿ, ಮುಂಬೈ, ಮೊಹಮ್ಮದ್ ಹುಮಾಯೂನ್ ಎನ್ ಮೈಸೂರು, ಅನ್ನಪೂರ್ಣ ಹಿರೇಮಠ್, ಬೆಳಗಾವಿ ಜಿಲ್ಲೆ, ಮಹಾಂತೇಶ ವಿ.ಕೋಳಿವಾಡ, ಹುಬ್ಬಳ್ಳಿ, ಶಾರದಾ ಅಂಚನ್ ಮುಂಬೈ, ರಶ್ಮಿ ಭಟ್, ಕಾರ್ಘರ್, ಮುಂಬೈ, ಅನುರಾಧ ಎಂ.ಕುಲಕರ್ಣಿ, ಧಾರವಾಡ,


ರಾಧಾಶ್ಯಾಮ್ ಧಾರವಾಡ, ಸುಶೀಲ ಕೆ.ಪದ್ಯಾಣ ಕಾಸರಗೋಡು, ವೆಂಕಟೇಶ್ ಗಟ್ಟಿ, ಮಂಗಳೂರು, ಮಶಾಕ್ ಅಬ್ದುಲ್ ತಾಳಿಕೋಟೆ, ಕೋಲಾರ, ಕುಸುಮ ಎಸ್.ಮುದಿಗೌಡರ, ಹಾವೇರಿ, ಇಂದುಮತಿ ರಾಘವೇಂದ್ರ ಧಾರವಾಡ, ವ.ಉಮೇಶ್ ಕಾರಂತ್, ಮಂಗಳೂರು, ಸಮ್ಯಕ್ತ್ ಜೈನ್ ಕಡಬ, ವಿಶ್ವನಾಥ್ ಎನ್. ನೆರಳಕಟ್ಟೆ, ಸಂಧ್ಯಾ ಗಣಪತಿ ಭಟ್ ಉತ್ತರಕನ್ನಡ, ವಿಜಯ ಕಾನ ಪೆರ್ಲ ಕಾಸರಗೋಡು, ವಿದ್ಯಾಶ್ರೀ ಅಡೂರು, ಬೆಳ್ತಂಗಡಿ,ಶೈಲಾ ಎಸ್.ಭಟ್ ಬೆಳಗಾವಿ, ಫಣಿಶ್ರೀ ನಾರಾಯಣನ್ ಮೇರಿ ಲ್ಯಾಂಡ್ ಅಮೆರಿಕಾ, ವನಜಾಕ್ಷಮ್ಮ ಬಳ್ಳಾರಿ, ಶ್ಯಾಮಲಾ ಪ್ರಸನ್ನ ಕುಮಾರ್ ಕುಂಬಳೆ, ವೆಂಕಟ್ ಭಟ್ ಎಡನೀರು, ಸೌಮ್ಯ ಜಯರಾಮ್ ಬೆಂಗಳೂರು, ಪದ್ಮಾವತಿ ಮುದಿಗೌಡರ್ ಶಿವಮೊಗ್ಗ, ಕುಮಾರಿ ಸ್ಫೂರ್ತಿ ಸಾಗರ, ಅಬ್ದುಲ್ ಸಮದ್ ಬಾವ ಪುತ್ತೂರು, ಎಂ. ರಾಮಚಂದ್ರ ರಾವ್ ರಾಯಚೂರು, ವಾಣಿ ಲೋಕಯ್ಯ ಮಂಗಳೂರು, ನಾರಾಯಣ ನಾಯ್ಕ್ ಕುದುಕೋಳಿ ಕಾಸರಗೋಡು, ಎನ್. ಸುಬ್ರಾಯ ಭಟ್, ಮಂಗಳೂರು, ಸಲೀಂ ಬೋಳಂಗಡಿ, ಬಂಟ್ವಾಳ, ರೇಮಂಡ್ ಡಿಕುನಾ ತಾಕೊಡೆ, ಮಂಗಳೂರು, ಯಮನೂರಪ್ಪ ಶಂ. ಅರಬಿ ವಿಜಯಪುರ, ಶಿವಾಜಿ ಮೊರೆ, ವಿಜಯಪುರ, ಪ್ರಭಾವತಿ ಶೆಟ್ಟಿ ಕಾವಡಿ, ಉಡುಪಿ, ಶೋಭಾ ಜೆ. ಶೆಟ್ಟಿ ಮುಂಬೈ, ಶೇಷಪ್ಪ ಬಿ.ಬಂಬಿಲ ಮಂಗಳೂರು,ಅಶೋಕ ಎನ್ ಕಡೇಶಿವಾಲಯ, ಹಮೀದ ಬೇಗಂ ದೇಸಾಯಿ ಸಂಕೇಶ್ವರ, ಬೆಳಗಾವಿ, ಪಂಕಜಾ ಕೆ.ಮುಡಿಪು ಬಂಟ್ವಾಳ, ಮಂಜುಳಾ ರಾವ್ ವಾಷಿಂಗ್ಟನ್ ಅಮೆರಿಕ, ಗುಣಾಜೆ ರಾಮಚಂದ್ರ ಭಟ್ ಮಂಗಳೂರು, ಸುಧಾ ನಾಗೇಶ್ ಮಂಗಳೂರು, ಇಂದಿರಾ ಶೆಟ್ಟಿ ಮೈಸೂರು. ವಿಘ್ನೇಶ್ ಭಿಡೆ ಮಂಗಳೂರು, ಅಶ್ವಥ್ ಬರಿಮಾರ್ ಬಂಟ್ವಾಳ,ಹಂಸರಾಗ ಶೆಟ್ಟಿ ಪುತ್ತೂರು, ರೇಖಾ ನಾರಾಯಣ್ ಪಕ್ಷಿಕೆರೆ, ಲಕ್ಷ್ಮೀ ವಿ ಭಟ್ ತಲಂಜೇರಿ ಮಂಜೇಶ್ವರ, ಪ್ರೇಮಲತಾ ಸಿ ಎಸ್ ಚಿಪ್ಪಾರು ಮಂಜೇಶ್ವರ, ಹೇಮಲತಾ ಪೂರ್ಣಪ್ರಕಾಶ್ ಮಡಿಕೇರಿ, ಲತೀಶ್ ಎಂ.ಸಂಕೊಳಿಗೆ, ಅರ್ಚನಾ ಎಂ ಬಂಗೇರ, ಕುಂಪಲ, ಶ್ರೀಮತಿ ತ್ರಿವೇಣಿ ಭದ್ರಾವತಿ, ಗೀತಾ ಭದ್ರಣ್ಣವರ್ ಧಾರವಾಡ, ಶುಭ ವರ್ಣೇಕರ್ ಬೆಂಗಳೂರು, ಪ್ರಮೋದ ಸುರೇಂದ್ರ ಮಾಡ ಥಾಣೆ ಮಹಾರಾಷ್ಟ್ರ, ವಾಣಿ ರಾವ್ ಕಿನ್ನಿಗೋಳಿ, ಅನಂತ ಸತ್ಯ ಸಂಜೀವ ಕುಳಾಯಿ, ಮಂಜುಳಾ ಬಿ.ಕೆ. ತುಮಕೂರು, ಸಂಜಯ ಜಿ ಕುರಣೆ, ಕಾಗವಾಡ, ಬೆಳಗಾವಿ, ವೇದ ಶೆಟ್ಟಿ ಕಾಳಾವರ ಕುಂದಾಪುರ, ಜಯಲಕ್ಷ್ಮೀ ಶರತ್ ಶೆಟ್ಟಿ ಮಂಜೇಶ್ವರ, ಅಕ್ಷಯ ಆರ್ ಶೆಟ್ಟಿ ಮಂಗಳೂರು, ವಿಜೇಶ್ ದೇವಾಡಿಗ, ಸುಧಾ ಎನ್ ತೇಲ್ಕರ್ ಅನಂತಪುರ, ಹೈದರಾಬಾದ್, ಬಿಟ್ಟೀರ ಚೋಂದಮ್ಮ ಶಂಭು ಬೆಂಗಳೂರು, ಶೋಭಾ ಶರ್ಮ, ಈರಣ್ಣ ಶೆಟ್ಟರ, ಧಾರವಾಡ, ಶ್ರೀಮತಿ ಸರೋಜಾ ಜಯಂತ್, ಏಳಿಂಜೆ, ಮಂಗಳೂರು, ವಿಜಯಲಕ್ಷ್ಮೀ ಅಶೋಕ ಬಸವ ತೆಲಂಗಾಣ ಹೈದರಾಬಾದ್ ಅವರುಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿ ಮೆಚ್ಚುಗೆಗೆ ಪಾತ್ರರಾದರು.

ಕೋವಿಡ್ ಸಾಂಕ್ರಾಮಿಕ ವ್ಯಾಪಿಸುತ್ತಿರುವ ಈ ಕಾಲ ಘಟದಲ್ಲಿ ಯಾವುದೇ ಸಾರ್ವಜನಿಕ ಸಮಾರಂಭ ನಡೆಸದೇ ಡಿಜಿಟಲ್ ಮಾಧ್ಯಮದ ಮೂಲಕವೇ ಸಮ್ಮೇಳನ ನಡೆಸಿ ಟೀವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮ್ಮೇಳನ ನಡೆಸಿದ ಮಂಗಳೂರು ತಾಲೂಕು ಪರಿಷತ್ತಿನ ಕಾರ್ಯ ಅನೇಕರ ಪ್ರಶಂಸೆಗೆ ಪಾತ್ರವಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು