ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಾವಗೀತೆ- ಮಮತೆಯ ಮಡಿಲಲಿ ಬೆಚ್ಚನೆ ಮಲಗಿಸಿ... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

-ವಿಶ್ವ ಅಮ್ಮಂದಿರ ದಿನದ ವಿಶೇಷ-



 ಸಾಹಿತ್ಯ : ಉದಯರವಿ ಕೋಂಬ್ರಾಜೆ

ಸಂಗೀತ ಸಂಯೋಜನೆ ಮತ್ತು ಗಾಯನ: ಶ್ರೀಮತಿ ಚಂದ್ರಿಕಾ ಬದ್ರೀನಾಥ್
ಸಂಕಲನ: ಮಯೂರಿ ಕೋಂಬ್ರಾಜೆ
ಅಮ್ಮ ಮಮತೆಯ ಮಡಿಲಲಿ ಬೆಚ್ಚನೆ ಮಲಗಿಸಿ ಅಮೃತ ಉಣಿಸಿದೆ ನೀನು.. ಹಣೆ ನೇವರಿಸಿ ಸಾಂತ್ವನ ಹೇಳುತ ಮುತ್ತನು ನೀಡಿದೆ ನೀನು.. ಎನ್ನಯ ಮೊದಲ ಪ್ರತಿ-ಹೆಜ್ಜೆಗಳಲ್ಲಿ ಕಣ್ಣಾಗಿರುವೆ ನೀನು.. ಎನ್ನಯ ತೊದಲಿಗೆ ಅರ್ಥವ ನೀಡುವ ಮಾತಾಗಿರುವೆ ನೀನು.. ಅಮ್ಮ ನಿನ್ನಯ ಸೆರಗಿನ ಋಣವ ಹೇಗೆ ತೀರಿಸಲಿ ನಾನು.. ಗುಮ್ಮನ ಓಡಿಸಿ ಎನ್ನಯ ಮನದಲಿ ಧೈರ್ಯವ ತುಂಬಿದೆ ನೀನು.. ಎನ್ನಯ ಸೋಲಲಿ ನೆರಳಾಗಿದ್ದು ಸರಿ- ದಾರಿಯ ತೋರಿದೆ ನೀನು.. ನಿನ್ನಯ ಖುಷಿಯನು ಎನ್ನಲಿ ಕಂಡು ಸಹನೆಯ ಸಾರಿದೆ ನೀನು.. ಕರುಣೆಯ ಕಡಲಲಿ ತೇಲುತ ಸಾಗುವ ನಿರ್ಭಯ ನೌಕೆಯು ನಾನು.. ಕಾಡುವ ಕಷ್ಟವ ಮೀರುತ ಸಾಗುವ ಭರವಸೆಯ-ಹುಟ್ಟು ನೀನು.. ಅಮ್ಮಾ ಎನ್ನುವ ಎರಡಕ್ಷರದಲೆ ಇದೆ ಎಲ್ಲಿಲ್ಲದ ಸ್ಫೂರ್ತಿ.. ಬಾಳಿನ ಹಾದಿಲಿ ಮುನ್ನಡೆಯಲು ಎನಗೆ ನೀನೆ ಸುಪ್ತ ದೀಪ್ತೀ.. © *ಉದಯರವಿ ಕೋಂಬ್ರಾಜೆ.



Post a Comment

ನವೀನ ಹಳೆಯದು