ಆಲಿಸಿ: ಮುಕ್ತಕಗಳು- ಕಲಿಯುಗದ ಮಹಿಮೆ
ರಚನೆ: ವಿಬಿ ಕುಳಮರ್ವ
ಸಂಗೀತ-ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ಕಲಿಯುಗದ ಮಹಿಮೆಯನು ನಿಮಗೊರೆಯುವೆನು ನಾನು
ನಲಿವಿರದ ಕಾಲವಿದು ಸುಜನ ಸಂತತಿಗೆ |
ಹಲವು ದುಷ್ಟರು ಬದುಕಿ ಸಜ್ಜನರು ಸಾಯುವರು
ಸುಲಿಯುವರು ಹಲವಿಧದಿ - ಪುಟ್ಟಕಂದ ||
ಕುತ್ತಿಗೆಯ ಹಿಸುಕುತ್ತ ಅಧಿಕಾರ ಪಡೆದಾಗ
ಉತ್ತಮರು ಸೋಲುವರು ಅಧಮರೀಸುವರು |
ಮತ್ತೆ ಚಿಂತಿಸಿ ಫಲವಿರದು ನರರ ಜೀವಿತದಿ
ಸತ್ತರೂ ಬೆಲೆಯಿರದು - ಪುಟ್ಟಕಂದ ||
-ವಿ.ಬಿ.ಕುಳಮರ್ವ , ಕುಂಬ್ಳೆ
ಇದನ್ನು ರಾಗ ಸಂಯೋಜನೆ ಮಾಡಿ ಹಾಡಿದವರು ಖ್ಯಾತ ಗಮಕಿ ಕಲಾಶ್ರೀ ವಿದ್ಯಾಶಂಕರ ಮಂಡ್ಯ
ಕಾಮೆಂಟ್ ಪೋಸ್ಟ್ ಮಾಡಿ