ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಲಾಕ್‌ಡೌನ್‌ ಮುಗಿಯುವ ವರೆಗೂ ಮಣಿಪಾಲದ ಕೊರಗ ಕುಟುಂಬಗಳಿಗೆ ಮಧ್ಯಾಹ್ನದ ಭೋಜನ ವಿತರಣೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಉಡುಪಿ ಶ್ರೀಕೃಷ್ಣ ಮಠದ ಸಹಯೋಗದಲ್ಲಿ ಹೋಮ್ ಡಾಕ್ಟರ್ಸ್‌ ಫೌಂಡೇಶನ್‌ ಉಪಕ್ರಮ


ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಿಂದ ಪ್ರಸಾದ ರೂಪದಲ್ಲಿ ಒದಗಿಸಿದ ಮಧ್ಯಾಹ್ನದ ಭೋಜನವನ್ನು  ಹೋಮ್ ಡಾಕ್ಟರ್ಸ್‌ ಫೌಂಡೇಶನ್‌ ವತಿಯಿಂದ ಇಂದು (ಮೇ 27 ಗುರುವಾರ) ಮಣಿಪಾಲದಲ್ಲಿರುವ ಕೊರಗ ಕಾಲನಿಯ 15 ಕುಟುಂಬಗಳ ಸುಮಾರು 60 ಜನರಿಗೆ ವಿತರಿಸಲಾಯಿತು.  

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಈ ಕುಟುಂಬಗಳಿಗೆ ಲಾಕ್‌ಡೌನ್‌ ಮುಗಿಯುವ ವರೆಗೂ ಮಧ್ಯಾಹ್ನದ ಭೋಜನವನ್ನು ತಲುಪಿಸುವ ಹೊಣೆಯನ್ನು ಹೋಮ್ ಡಾಕ್ಟರ್ಸ್‌ ಫೌಂಡೇಶನ್ ಹೊತ್ತುಕೊಂಡಿದೆ.

ಮಧ್ಯಾಹ್ನದ ಭೋಜನ ವಿತರಣೆಯ ವೇಳೆಯೇ ರಾತ್ರಿಯ ಭೋಜನಕ್ಕೂ ಅಗತ್ಯ ವ್ಯವಸ್ಥೆ ಮಾಡುವ ಉದ್ದೇಶವಿದೆ ಎಂದು ಫೌಂಡೇಶನ್‌ ಪ್ರಕಟನೆ ತಿಳಿಸಿದೆ.

ಭೋಜನವನ್ನು ತಲುಪಿಸಲು ಅಗತ್ಯವಿರುವ ವಾಹನ ಹಾಗೂ ಪಾತ್ರೆಗಳ ವ್ಯವಸ್ಥೆಯನ್ನು 'ಸ್ಪಂದನ' ಸಂಸ್ಥೆಯ ಮಾಲೀಕರಾದ ಜನಾರ್ದನ್‌ ವಹಿಸಿಕೊಂಡಿದ್ದಾರೆ.

ಫೌಂಡೇಶನ್‌ ಸದಸ್ಯರಾದ ಡಾ. ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಸವಿತಾ ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲ್‌, ವಿಜಯಲಕ್ಷ್ಮಿ ಹಾಗೂ ಶ್ರೀಕೃಷ್ಣ ಮಠದ ಪದಾಧಿಕಾರಿಗಳು ಮಣಿಪಾಲಕ್ಕೆ ತೆರಳಿ ಭೋಜನ ವಿತರಿಸಿದರು.

Post a Comment

ನವೀನ ಹಳೆಯದು