ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಬದುಕಲ್ಲಿ ಹಾಸ್ಯ ಪ್ರಜ್ಞೆ ಎಷ್ಟು ಮುಖ್ಯ....? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 



ಜಗತ್ತಲ್ಲಿ ಅನೇಕ ರೀತಿಯ ಜನರಿರುತ್ತಾರೆ. ಹೇಗೆಂದರೆ ಕೆಲವರು ಸದಾ ನಗುಮೊಗದವರಾಗಿ ಇನ್ನು ಕೆಲವರು ಸದಾ ಅಳುಮುಂಜಿಗಳಾಗಿ...., ಇನ್ನೂ ಕೆಲವರು ಸದಾ ಕೋಪಿಷ್ಠರಾಗಿ, ಮತ್ತೂ ಕೆಲವರು ಸಹನಾಮಯಿಗಳಾಗಿ.....ಹೀಗೆಲ್ಲ. ಜೀವನದಲ್ಲಿ ಬಹುಶಃ ಎಲ್ಲರೂ ಕೂಡ ಇಂತಹ ಅನೇಕ ಬಗೆಯ ಜನರೊಡನೆ ಒಮ್ಮೆಯಾದರೂ ವ್ಯವಹರಿಸಿರುತ್ತಾರೆ.  

ಆದರೆ ಓಡುತ್ತಿರುವ ಜಗತ್ತಲ್ಲಿ ಮನುಷ್ಯನಿಗೆ ನಗಲೂ ಸಮಯ ಇಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ನಗು ಎಷ್ಟು ದುಬಾರಿ ಗೊತ್ತೇ? ಸಿಡುಕು ಮುಖಗಳ ಸಂಖ್ಯೆಯೇ ಜಾಸ್ತಿ. 

ಇದರ ನಡುವೆ ಮನುಷ್ಯನಿಗೆ ಹಾಸ್ಯ ಪ್ರವೃತ್ತಿ ಎಂಬುವುದು ಸಹಜವಾಗಿ ಬಂದಿರುತ್ತದೆ. ಪ್ರತೀ ಬಾರಿ ಎಲ್ಲಾ ವಿಷಯದಲ್ಲೂ ನಗುವನ್ನು ರಚಿಸುವ ಅದ್ಭುತ ಹಾಸ್ಯಗಾರ ನಮ್ಮೊಳಗೊಬ್ಬನಿದ್ದರೆ ಅದೇನೋ ಮನರಂಜನೆ, ಖುಷಿ. ಮನಸ್ಸು ಬಿಕೋ ಎನ್ನುತ್ತಿದ್ದಾಗ ಮನಸ್ಸು ಅವನ ಜೊತೆ ಮಾತಾಡಲು ಹವಣಿಸುತ್ತದೆ ಕಾರಣ ಅವನ ಹಾಸ್ಯಪ್ರಜ್ಞೆಗಿರುವ ಶಕ್ತಿ ಅಂತಹುದು. ಇನ್ನೂ ಕೆಲವರು ಇರುತ್ತಾರೆ ಅವರು ಏನೂ ಕಾಮಿಡಿ ಮಾಡಲ್ಲವಾದರೂ ನೋಡಿದೊಡನೆ ಕಿಸಕ್ಕನೆ ನಕ್ಕು ಬಿಡುತ್ತೇವೆ.

ನಮ್ಮ ಜೊತೆಗಿರುವವರನ್ನು ನಗಿಸುವ ಸಣ್ಣ ಕಲೆ ನಮ್ಮಲ್ಲಿದ್ದರೆ ನಗುವಿಗೆ ಬೇರೆ ಕಾರಣ ಬೇಕಿಲ್ಲ ಅಲ್ಲವೇ....ಹಾಸ್ಯಮಯ ತುಣುಕುಗಳು ಬದುಕಲ್ಲಿ ಇರಲೇಬೇಕು ನಾವು ನಕ್ಕು ನಮ್ಮವರ ನಗಿಸಲು.....ಏನಂತೀರಾ..?


-ಅರ್ಪಿತಾ ಕುಂದರ್

(ಉಪಯುಕ್ತ ನ್ಯೂಸ್)

Post a Comment

ನವೀನ ಹಳೆಯದು