ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಹ್ಯಾಪಿ ಫಾದರ್ಸ್ ಡೇ: ಅಮ್ಮ 'ಅವನಿ' ಆದರೆ ಅಪ್ಪ 'ಆಕಾಶ' ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಅಮ್ಮ ಜೀವವಿತ್ತರೆ ಅಪ್ಪ ಜೀವನ ಕಲಿಸುತ್ತಾರೆ. ಅಮ್ಮ "ಅವನಿ" ಆದರೆ ಅಪ್ಪ ಆಕಾಶ. ದಿನವಿಡೀ ಮನೆಯವರಿಗಾಗಿ ಶ್ರಮಿಸುವ ಆ ವ್ಯಕ್ತಿಗಾಗಿ ಬರೆದ ಈ ಸಾಲು ಇಂದು ಅಪ್ಪಂದಿರ ದಿನಗಾಗಿ.....


ಜಾತ್ರೆಯಲ್ಲಿ ಅಪ್ಪನ ತಲೆಯ ಮೇಲೆ ಕೂತು ಜಗತ್ತು ನೋಡೋವಾಗ, ಆನೆ ಮೇಲೆ ಅಂಬಾರಿ ಮಾಡುತ್ತ ಆಟ ಆಡುವಾಗ, ಬೇಕಾದ ಎಲ್ಲವನ್ನು ನಮ್ಮೆದುರಿಗಿಟ್ಟಾಗ ಅಪ್ಪ ಅಪ್ಪ ಮಾತ್ರವಲ್ಲ ಗೆಳೆಯನಾಗಿಯೂ ಕಂಡಿದ್ದ. ಅಪ್ಪ ಅಂದ್ರೆ ಆಕಾಶ ಎಂದು ಕೆಲವರೆಂದರೆ ಅಪ್ಪ ಎಂದರೆ ಭರವಸೆ ಎಂದು ಮತ್ತೊಬ್ಬ ನುಡಿಯುತ್ತಾನೆ. ಆದರೆ ಎಲ್ಲರ ವ್ಯಾಖ್ಯೆಯಲ್ಲೂ ಅಪ್ಪ ಒಬ್ಬ ಭಾವ ಜೀವಿಯಾಗಿ ಕಾಣುವುದು ತುಂಬಾ ವಿರಳ.  


ತನಗಾಗಿ ಕನಸ ಕೊಂದು, ತನ್ನವರ ಹಿತವನ್ನು ಸದಾ ಬಯಸುವ ಆ ಜೀವದ ಭಾವನೆಯನ್ನು ತನ್ನ ಮಕ್ಕಳೂ ಕೂತು ಕೇಳುವುದು ಕಡಿಮೆಯೇ ಬಿಡಿ. " ನಮಗಾಗಿ ಬಂಗಾರ ಖರೀದಿಸಿ ತಾನು ಮಾತ್ರ ಬಂಗಾರದ ಬಣ್ಣದ ಅಂಚಿನ ಪಂಚೆಯ ತೊಟ್ಟು ಸಮಾಧಾನ ಮಾಡಿಕೊಳ್ಳುವ ಅಪ್ಪ ಅದ್ಯಾಕೊ ಹಿಂದೆಯೇ ಉಳಿದುಬಿಟ್ಟ ಎಂದು ಎಲ್ಲೋ ಒಂದು ಕಡೆ ಕವಿ ಹೇಳುತ್ತಾರೆ. ವಾಸ್ತವ ಕೂಡ ಹೌದು.  


ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಪ್ಪ ಮನೆಯ ಯಜಮಾನ. ಆದರೆ ಇನ್ನು ಕೆಲವು ಕಡೆ ಕುಡುಕ ತಂದೆಯಾದರೆ ಅಲ್ಲಿ ತಾಯಿಯೇ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ದಿನವಿಡೀ ಕುಡಿದ ಮತ್ತಲ್ಲಿರೋ ಅಪ್ಪ ಇಂದಾದರೂ ಕುಡಿದು ಬರದೇ ಇರಲಿ. ಎಲ್ಲರ ಮನೆಯ ಮಕ್ಕಳಂತೆ ನಮಗೂ ಅಪ್ಪಂಗೂ ಶುಭಾಶಯ ಹೇಳೋ ಅವಕಾಶ ಸಿಗಲಿ ಅಂತ ಅದೆಷ್ಟು ಮಕ್ಕಳು ಬೇಡುತ್ತಿರುವರೋ,  ಅಪ್ಪನಿದ್ದು ಕೆಲವರ ಬದುಕು ಹೀಗಾದರೆ ತಂದೆಯನ್ನು ಕಳೆದುಕೊಂಡು ಈ ದಿನ ಭಾವನೆಯ ತೀವ್ರತೆಯಲ್ಲಿ ಕಳೆದು ಹೋಗುವ ಮಕ್ಕಳ ಪರಿಸ್ಥಿತಿ ಇನ್ನೊಂದು ರೀತಿ. ಒಟ್ಟಿನಲ್ಲಿ ಅಪ್ಪ ಎಲ್ಲರಿಗು ಭವಿಷ್ಯದ ಭರವಸೆ, ಪ್ರೀತಿಯ ಕಡಲು.


ಅದೇನೇ ಆಗಲಿ ಮಕ್ಕಳಿಗೆ ಉತ್ತಮ ತಂದೆಯಾಗಿ, ಒಬ್ಬ ತಂದೆಗೆ ಉತ್ತಮ ಮಕ್ಕಳಾದರೆ ಮಾತ್ರ ಈ ದಿನಕ್ಕೊಂದು ಅರ್ಥ, ಸಾರ್ಥಕತೆ‌ . ಒಂದು ವಾಕ್ಯದಲ್ಲಿ ಹೇಳುವುದಾದರೆ ಅಪ್ಪ ಎಂಬ ಅನಂತ ಶಕ್ತಿಗೆ ಈ ದಿನದ ಶುಭಾಶಯಗಳು....


ಹ್ಯಾಪಿ ಫಾದರ್ಸ್ ಡೆ.....

-ಅರ್ಪಿತಾ ಕುಂದರ್


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು