ದಕ್ಷತೆಯು ಇರಬೇಕು ಕಾಯಕದ ಹಾದಿಯಲಿ
ಇಕ್ಷುಚಾಪನ ಗೆಲಿವ ನಿರ್ಧಾರ ಬೇಕು |
ಚಕ್ಷುಗಳ ಕಾಂತಿಯಲಿ ಸಾಧಿಸುವ ಛಲಬೇಕು
ಕುಕ್ಷಿತುಂಬಲು ಸುಖದಿ - ಪುಟ್ಟಕಂದ ||
ಗುರುವಿನಲಿ ಇರಬೇಕು ದಕ್ಷತೆಯ ಪಡಿನೆಳಲು
ಸರಳ ಜೀವನದ ಹರಕಾರನೆನಿಸಲಿಕೆ |
ವಿರಳವಾಗಿಹರಿಂದು ಗುರುವರ್ಯ ಯೋಗಿಗಳು
ನೆರಳಾಗು ಗುರುವರನ - ಪುಟ್ಟಕಂದ ||
ಎಲ್ಲಿಗೂ ಸಲ್ಲದವ ಗುರುಕರುಣೆ ದೊರಕಿದರೆ
ಬಲ್ಲಿದನು ತಾನೆನಿಸಿ ಜನರ ತಿದ್ದುವನು |
ಫುಲ್ಲಲೋಚನ ಹರಸೆ ಸಲ್ಲದಿಹುದೆಲ್ಲಿಹುದು
ಖುಲ್ಲಮನವಿಲ್ಲದಿರೆ - ಪುಟ್ಟಕಂದ ||
( ಛಂದೋಬದ್ಧ ಮುಕ್ತಕ ತ್ರಯ)
ರಚನೆ:- ವಿ.ಬಿ.ಕುಳಮರ್ವ , ಕುಂಬ್ಳೆ
ಗಾಯನ:- ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ