ಕಾಲೇಜು ಅಂದ ಮೇಲೆ ಕೇಳಬೇಕೆ... ನಮ್ಮ ಗುಂಪಿನ ಸ್ನೇಹಿತರು, ನಮ್ಮ ಜೊತೆ ಆತ್ಮೀಯವಾಗಿ ಬೆರೆಯೋ ಉಪನ್ಯಾಸಕರು, ಮುರಿತದ ಅಸೈನ್ಮೆಂಟ್ ವರ್ಕ್ ಗಳು, ಎಲ್ಲರ ಬುತ್ತಿಗೆ ಕೈ ಹಾಕಿ ತಿನ್ನೋ ಲಂಚ್ ಟೈಮ್... ವ್ಹಾವ್ ಒಂದೇ ಎರಡೇ.. ಅದೆಷ್ಟು ಸಂಭ್ರಮದ ಸವಿ ಅನುಭವಗಳು...
ಆದರೆ ಇನ್ನೇನೋ ಶಿಕ್ಷಣ ಮುಗಿಸಿ ವೃತ್ತಿಗೆ ಹೊರಡಬೇಕಾದವರು ಅದೆಷ್ಟೋ ಮಂದಿ. ಇದೇ ಕೊನೆ ವರ್ಷ... ಸೂಪರ್ ಆಗಿ ಕಾಲೇಜು ಜೀವನ ಅನುಭವಿಸಿ ಬಿಡಬೇಕು ಎನ್ನುವಷ್ಟರಲ್ಲಿ ಮಹಾಮಾರಿ ಕೊರೋನಾ ಎಲ್ಲವನ್ನು ಬಲಿತೆಗೆದುಕೊಂಡಿತ್ತಲ್ಲವೆ?
ಈಚೆ ಶಿಕ್ಷಣವೂ ಅಲ್ಲ, ಆಚೆ ವೃತ್ತಿಯೂ ಅಲ್ಲ. ಎಕ್ಸಾಂ ಬಗ್ಗೆ ಅದೇನೂ ಗೊತ್ತಿಲ್ಲ. ಪರೀಕ್ಷೆ ಬರೆಯದೆ ಮುಂದಿನ ಸೆಮಿಸ್ಟರ್ ಪಾಠ ಕೇಳುತ್ತಿರುವ ಅದ್ಭುತ ವಿದ್ಯಾರ್ಥಿಗಳು ಎಂದರೆ ಅದು ನಾವೇ?
ಮನಸ್ಸಿನ ಮೂಲೆಯಲ್ಲಿ ಸಣ್ಣದೊಂದು ನಂಬಿಕೆ ಅದೇ ರೀತಿ ಬೇಡಿಕೆ ಕಾಲೇಜು ಮುಗಿಸಿ ಹೋಗುವ ಮುನ್ನ ಒಂದು ಬಾರಿಯಾದರೂ ಅದೇ ಕಾಲೇಜಲ್ಲಿ ಪಾಠ ಕೇಳಬಲ್ಲೆವೋ ಏನೋ ಎಂದು...!
-ಅರ್ಪಿತಾ ಕುಂದರ್
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ