ಸಕಲೇಶಪುರ ತಾಲೂಕಿನ ಹಳೇಕೆರೆ ಗ್ರಾಮದಲ್ಲಿ ಕೆಲವು ಸಮಯದಿಂದ ಬೆಳೆಹಾನಿ, ಜೀವಹಾನಿ ಮಾಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯವರು ಸೆರೆಹಿಡಿದಿದ್ದಾರೆ. ಸಾಕಾನೆಗಳ ಸಹಾಯದಿಂದ ನಡೆಸಿದ ಈ ಕಾರ್ಯಾಚರಣೆ ರೋಚಕವಾಗಿತ್ತು. ಕಾಡಾನೆ ಜತೆ ಕಾಳಗ ನಡೆಸಿದ ಸಾಕಾನೆಗಳು ಅದನ್ನು ಸೆರೆ ಹಿಡಿಯುವಲ್ಲಿ ನೆರವಾದವು.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದು, ಯಾವಾಗ ಸೆರೆ ಹಿಡಿಯಲಾಯಿತು ಎಂಬ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ.
ಕಾರ್ಯಾಚರಣೆಯಲ್ಲಿ ಭಾಗಿಯಾದವರ ಮುಖದಲ್ಲಿ ಮಾಸ್ಕ್‌ಗಳು (ಪ್ರಸ್ತುತ ಕೊರೊನಾ ಕಾಲವಾಗಿರುವುದರಿಂದ) ಕಾಣಿಸುತ್ತಿರುವುದರಿಂದ ಇದು ತೀರಾ ಇತ್ತೀಚಿನದ್ದೇ ಆಗಿರುವುದಂತೂ ನಿಜ.
ಉಪಯುಕ್ತ ನ್ಯೂಸ್ ಓದುಗರಿಗಾಗಿ ಉಪಯುಕ್ತ ಟಿವಿ ಯೂಟ್ಯೂಬ್ ಚಾನೆಲ್ ಮೂಲಕ ಈ ವೀಡಿಯೋವನ್ನು ಪ್ರಸ್ತುತಪಡಿಸಲಾಗುತ್ತಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ