ಆಲಿಸಿ: ಭಕ್ತಿಗೀತೆ- ರಂಗನಾಯಕ ರಾಜೀವ ಲೋಚನ
ಗಾಯಕರು: ಪುತ್ತೂರು ನರಸಿಂಹ ನಾಯಕ್
ರಂಗನಾಯಕ ರಾಜೀವ ಲೋಚನ
ರಮಣನೇ ಬೆಳಗಾಯಿತು ಏಳೆನ್ನುತಾ ।ಪ।
ಅಂಗನೇ ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತಾ ।।ಪ।।
ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು
ಅಕ್ಷಿ ತೆರೆದು ಬೇಗ ಈಕ್ಷೀಸೆಂದು
ಪಕ್ಷಿ ಜಾತಿಗಳೆಲ್ಲಾ ಚಿಲಿಪಿಲಿಗುಟ್ಟುತಾ
ಸೂಕ್ಷ್ಮದಲ್ಲಿ ನಿನ್ನ ಸ್ಮರಿಸುವವೋ ಕೃಷ್ಣ ।।ಪ।।
ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕರ ಮುಗಿದು ಓಲೈಪರು
ಘನಶುಕ ಶೌನಕ ವ್ಯಾಸ ವಾಲ್ಮೀಕರು
ನೆನೆದು ನೆನೆದು ಕೊಂಡಾಡುವರು ಹರಿಯೇ ।।ಪ।।
ಸುರರು ಕಿನ್ನರರು ಕಿಂಪುರುಷರು ಉರಗರು
ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದು ಉದಯಾಚಲದಲಿ ನಿಂದು
ಕಿರಣ ತೋರುವನು ಭಾಸ್ಕರನು ಶ್ರೀಹರಿಯೇ ।।ಪ।।
ಪದುಮನಾಭನೇ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತಾ ಪಾಡುತ್ತಾ
ದಧಿಯ ಕಡೆವರೇಳೋ ಮಧುಸೂಧನ ಕೃಷ್ಣಾ।।ಪ।।
ಮುರಮಥನನೇ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲೇ ಸ್ಮರಿಸಿ ಹಾರೈಪರು
ಪುರಂದರ ವಿಠಲ ನೀನೇಳೋ ಶ್ರೀ ಹರಿಯೇ।।ಪ।।
ರಚನೆ: ಶ್ರೀ ಪುರಂದರ ದಾಸರು
ಗಾಯನ: ಶ್ರೀ ವಿದ್ಯಾಭೂಷಣರು
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ