~~~~~~~~
ಮಾತೆಂಬುದಕೆ ಬೆಳ್ಳಿ ಪರ್ಯಾಯವೆನ್ನುವರು
ವೀತರಾಗದ ಮೌನ ಬಂಗಾರವಂತೆ |
ಜೋತುಬೀಳಲು ಬೇಡ ಬಿಳಿ ಹಳದಿ ಲೋಹಕ್ಕೆ
ಸೋತು ಬೆಲೆ ಕಳೆಯದಿರು - ಪುಟ್ಟಕಂದ ||
ಮಾತಿನಲಿ ಇಹಪರವು ಮೌನದಲಿ ಪಾಂಡಿತ್ಯ
ಭೂತವೈದರಲಿಹುದು ಜೀವಭಾವಗಳು |
ನೀತಿಯಲಿ ಸತ್ಪಥವು ಸೋಲದಂತಿರಬೇಕು
ನೇತಿಗಳೆ ಮೌಢ್ಯವನು - ಪುಟ್ಟಕಂದ ||
ನೂರಾರು ಮಾತುಗಳ ಮೀರುವುದು ಮೋನಸಿರಿ
ಸಾರವಿಹ ಭಾವಗಳ ಬಿಂಬಿಸುತ ಮೊಗದಿ |
ನೇರವರ್ತನೆಯಲ್ಲಿ ಪಾರವನು ಕಾಣುವುದು
ಭೂರಮೆಯ ವೈಶಿಷ್ಟ್ಯ - ಪುಟ್ಟಕಂದ ||
(ಗಜಪ್ರಾಸವಿರುವ ಛಂದೋಬದ್ಧ ಆಶು ಮುಕ್ತಕ ತ್ರಯ)
ವಿ.ಬಿ.ಕುಳಮರ್ವ , ಕುಂಬ್ಳೆ ✍️
ರಾಗ ಸಂಯೋಜನೆ ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ