ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ವರವ ಕೊಡು ಎನಗೆ ವಾಗ್ದೇವಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad
ವರವ ಕೊಡು ಎನಗೆ ವಾಗ್ದೇವಿ ನಿನ್ನ 

ಚರಣ ಕಮಲಂಗಳ ದಯಮಾಡು ದೇವಿ ||ಪಲ್ಲವಿ ||


ಶಶಿ ಮುಖದ ನಸು ನಗೆಯ ಬಾಲೆ 

ಎಸೆವ ಕರ್ಣದ ಮುತ್ತಿನ ಓಲೆ 

ನಸುವ ಸುಪಲ್ಲ ಗುಣಶೀಲೇ ದೇವಿ 

ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು || ೧ ||


ಇಂಪು ಸೊಂಪಿನ ಚಂದ್ರ ಬಿಂಬೆ

ಕೆಂಪು ತುಟಿ ನಾಸಿಕದ ರಂಭೆ

ಜೋಂಪು ಮದನನ ಪೂರ್ಣ ಶಕ್ತಿ ಗೊಂಬೆ

ಸಂಪಿಗೆಯ ಮುಡಿದಿಟ್ಟ ವಿದ್ಯಾ || ೨ ||


ರವಿ ಕೋಟಿ ತೇಜ ಪ್ರಕಾಶೇ ಮಹಾ 

ಕವಿಜನ ಹ್ರಿತ್ಕಮಲ ವಾಸೇ 

ಅವಿರಳ ಪುರಿ ಕಾಗಿನೆಲೆಯಾದಿ 

ಕೇಶವನ ಸುತನಿಗೆ ಸನ್ನುತ ರಾಣಿವಾಸೆ || ೩ ||


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು