ರಕ್ಷೆಯ ಕಟ್ಟಲು
ಬಂದಳು ತಂಗಿಯು
ಅಣ್ಣನ ಕೈಗಳಿಗೆ ||
ಬಲಗೈ ಹಿಡಿಯುತ
ಮುಂದಕೆ ಸೆಳೆಯುತ
ರಾಖಿಯ ತೋರಿದಳು||
ಕರವನು ಪಿಡಿಯುತ
ಕಟ್ಟಿಯೆ ಬಿಟ್ಟಳು
ಮಮತೆಯ ಸೂತ್ರವನು ||
ತಲೆಯನು ಎತ್ತುತ
ಹಣೆಯನು ಮುಟ್ಟುತ
ತಿಲಕವನಿರಿಸಿದಳು ||
ಅಣ್ಣನ ಪ್ರೀತಿಯ
ಉಡುಗೊರೆ ಪಡೆಯುತ
ತಂಗಿಯು ನಮಿಸಿದಳು ||
ಕಣ್ಮನ ಸೆಳೆಯುವ
ಸುಂದರ ರಾಖಿಯು
ಪ್ರೀತಿಯ ದ್ಯೋತಕವು||
ಇರಲೀ ಪ್ರೀತಿಯು
ಅನಂತ ಕಾಲಕು
ಕರುಳಿನ ಸಂಬಂಧ ||
ಹಗೆತನ ಮರೆಯುತ
ಜಗವನೆ ಗೆಲ್ಲಲು
ರಾಖಿಯೆ ಸೋಪಾನ ||
ಎಲ್ಲಾ ಸೋದರಿಯರಿಗೂ ರಕ್ಷಾ ಬಂಧನದ ಶುಭಾಶಯಗಳು.
ಓಂ ಸ್ವಸ್ತಿ 🕉✡
ರಚನೆ:-
ವಿ.ಬಿ.ಕುಳಮರ್ವ, ಕುಂಬ್ಳೆ
ಹಾಡಿರುವವರು: ಅವನಿಶ್ರೀ ಕುಳಮರ್ವ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ