ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮೋಹನಕಲ್ಯಾಣಿ ನವರಸ ಮಾಧುರ್ಯ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಕರ್ನಾಟಕ ಶಾಸ್ತ್ರೀಯ ಸಂಗೀತದ ಅತ್ಯಾಕರ್ಷಕ ರಾಗಗಳಾದ ಮೋಹನ ಮತ್ತು ಕಲ್ಯಾಣಿ ರಾಗಗಳ ಸಂಗಮದಿಂದ ಆದ ರಾಗವೇ "ಮೋಹನಕಲ್ಯಾಣಿ". ಮುತ್ತಯ್ಯ ಭಾಗವತರ ಪ್ರಖ್ಯಾತ ರಚನೆ "ಭುವನೇಶ್ವರಿಯ ನೆನೆ ಮಾನಸವೇ..." ಕೃತಿ ಈ ರಾಗದಲ್ಲೇ ಇರುವುದು. ಖ್ಯಾತ ವಯಲಿನ್ ವಾದಕ ಲಾಲ್‌ಗುಡಿ ಜಿ.ಜಯರಾಮನ್ ಅವರು ಮೋಹನಕಲ್ಯಾಣಿ ರಾಗದಲ್ಲಿ ರಚಿಸಿದ ಒಂದು ತಿಲ್ಲಾನ ಅತ್ಯಂತ ಪ್ರಸಿದ್ಧವಾದುದು. ವಿವಿಧ ನೃತ್ಯಕಲಾವಿದರು, ನೃತ್ಯಾಭ್ಯಾಸಿಗಳು ಇದರ ನೃತ್ಯಸಂಯೋಜನೆ ಮಾಡಿ ಅನೇಕ ಕಡೆಗಳಲ್ಲಿ ಪ್ರಸ್ತುತಪಡಿಸಿರುವುದರಿಂದ ಇದು ವಿಶ್ವವಿಖ್ಯಾತವೇ ಆಗಿದೆ. 


ಇಲ್ಲಿ ಆ ತಿಲ್ಲಾನವನ್ನು ಲಾಲ್‌ಗುಡಿ ಜಿ.ಜಯರಾಮನ್ ಅವರ ವಯಲಿನ್ ಪ್ರಸ್ತುತಿಯಲ್ಲಿ (“ ಡ್ಯಾನ್ಸ್ ಆಫ್ ಸೌಂಡ್ " ಆಲ್ಬಮ್‌ನಿಂದ) ಮಾತ್ರವಲ್ಲದೆ, ಬೇರೆ ಎಂಟು ಜನ ಕಲಾವಿದರು ವಿವಿಧ ವಾದ್ಯಗಳಲ್ಲಿ ಪ್ರಸ್ತುತಪಡಿಸಿರುವುದನ್ನೂ ಜೋಡಿಸಿ ಈ ಸಂಕಲನವನ್ನು ಮಾಡಲಾಗಿದೆ. ಸುಮಾರು 40 ನಿಮಿಷಗಳ ಈ ನವರಸಧಾರೆ ನಿಮ್ಮನ್ನು ಮುದಗೊಳಿಸುತ್ತದೆಂಬ ಆಶಯವಿದೆ. 🎵🎶


1. ವಯಲಿನ್: ಲಾಲ್‌ಗುಡಿ ಜಿ.ಜಯರಾಮನ್ 🎼

2. ವೀಣೆ: ಜಯಂತಿ ಕುಮರೇಶ್ 🎼

3. ಮ್ಯಾಂಡೊಲಿನ್: ಯು.ಶ್ರೀನಿವಾಸ್ 🎼

4. ಕೊಳಲು: ಸಿಕ್ಕಿಲ್ ಸಹೋದರಿಯರು 🎼

5. ಸಿತಾರ್: ಶಿವರಾಮಕೃಷ್ಣರಾವ್ 🎼

6. ನಾದಸ್ವರ: ಮಾಂಬಳಂ ಶಿವಕುಮಾರ್ 🎼

7. ಫ್ಯೂಷನ್: ವಿಜಯ್ ಮಾಧುರ್ & ಶ್ರೀವಾಣಿ ಕಾಕುಂಜೆ 🎼

8. ಎಲೆಕ್ಟ್ರಿಕ್ ಗಿಟಾರ್: ಸೌಮ್ಯಾ ವರದಾ 🎼

9. ಸ್ವರಾಂಜಲಿ: ಸಮೂಹ ಪ್ರಸ್ತುತಿ 🎼


[ ಆಡಿಯೊ ಸಂಗ್ರಹ/ಸಂಕಲನ : ಶ್ರೀವತ್ಸ ಜೋಶಿ ]



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು