ಆಲಿಸಿ: ಭಕ್ತಿಗೀತೆ- ರಂಗನಾಥನೆ ನಿಮ್ಮ ಕಾಣದೆ ಭಂಗಪಟ್ಟೆನೊ ಅನುದಿನ
ಗಾಯನ: ಶ್ರೀ ವಿದ್ಯಾಭೂಷಣರು
ರಂಗನಾಥನೆ ನಿಮ್ಮ ಕಾಣದೆ
ಭಂಗ ಪಟ್ಟೆನು ಬಹುದಿನಾ...||ರಂಗ||
ಮಂಗಳಾಂಗ ನಿಮ್ಮ ಪಾದವ
ಎನ್ನ ಕಂಗಳಿಗೇ ತೋರೋ...||ಮಂಗಳಾಂಗ||
||ರಂಗನಾಥನೆ||
ಭಂಗ ಪಟ್ಟೆನು ಬಹುದಿನಾ ...
ಕರಿಯ ಮೊರೆ ಲಾಲಿಸಿದಿ ಬೇಗನೆ
ನೆರೆದ ಸಭೆಯಲಿ ದ್ರೌಪದಿಗೆ
ಅಭಯವನಿತ್ತೇ ||ಕರಿಯ||
ಅಡವಿಯಲಿ ಅಹಲ್ಯೆಯ ಸಲಹಿದಿ
ಮುಚುಕುಂದನ ರಕ್ಷಿಸಿದೀ||ಅಡವಿ||
ಮುಚುಕುಂದನ ರಕ್ಷಿಸಿದೀ....
||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. ....
ಪುಟ್ಟ ಪ್ರಹ್ಲಾದನ ಸಲಹಿದಿ
ಪಟ್ಟವನು ವಿಭೀಷಣನಿಗೆ ಸಲ್ಲಿಸಿದಿ
||ಪುಟ್ಟ||
ದಟ್ಟ ಅಡವಿಲಿ ಬಂದ ಧ್ರುವನ
ಆದರಿಸಿ ಕಾಯ್ದ ರಂಗನಾಥ||ದಟ್ಟ||
ಆದರಿಸಿ ಕಾಯ್ದ ರಂಗನಾಥ....
||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. ...
ಎಷ್ಟು ಹೇಳಲಿ ನಿಮ್ಮ ಮಹಿಮೆಯ
ಸ್ರಿಷ್ಠಿ ಸ್ಥಿತಿ ಲಯವನ್ನು ಅಳೆದೆ, ರಂಗನಾಥಾ
||ಎಷ್ಟು||
ಈ ಪುಟ್ಟ ಪಾದವ ಎನ್ನ ಮನದಲಿ
ಇಟ್ಟು ದಯಮಾಡೊ ಕ್ರಷ್ಣಾ. ...||ಈ ಪುಟ್ಟ||
ಇಟ್ಟು ದಯಮಾಡೊ ಕ್ರಷ್ಣಾ. ....
||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. ...
ದಕ್ಷಿಣ ಮುಖವಾಗಿ ಪವಡಿಸಿದಿ ನೀ
ದೇವಶಿಖಾಮಣೀ ಏಳೈ...
ದೇವಶಿಖಾಮಣೀ ಏಳೈ....||ದಕ್ಷಿಣ||
ಬಂದ ಭಕ್ತರಿಗೆಲ್ಲಾ
ಅಭಯ ಹಸ್ತವ ಕೊಡುವಿ
ರಾಜೀವನೇತ್ರ ಹಯವದನ||ಅಭಯ||
ರಾಜೀವನೇತ್ರ ಹಯವದನಾ....
||ರಂಗನಾಥನೆ||
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ