ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಕನ್ನಡ ಸಂಪತ್ತು (ಕಿರಿಯರ ಕವನ) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


    

ಕನ್ನಡ ನುಡಿಯೇ ನಮ್ಮುಸಿರು  

ಕನ್ನಡ ನುಡಿಯೇ ನಿಜದೊಸರು || ಪಲ್ಲವಿ || 


ಕನ್ನಡವೆಂಬುದೆ ಸವಿನುಡಿಯು  

ಕನ್ನಡವೆಂಬುದೆ ಹಿತನುಡಿಯು |  

ಕನ್ನಡವೆಂಬುದೆ ಕತ್ತುರಿಯು 

ಕನ್ನಡವೆಂಬುದೆ ತವನಿಧಿಯು || 


ಕನ್ನಡದಲಿ ನಾ ಬರೆಯುವೆನು  

ಕನ್ನಡದಲಿ ನಾ ತಿಳಿಯುವೆನು | 

ಕನ್ನಡದಲಿ ನಾ ಉಲಿಯುವೆನು  

ಕನ್ನಡದಲಿ ನಾನೋದುವೆನು || 


ಕನ್ನಡವೆಂಬುದು ಅಪ್ಪಟ ಸತ್ಯ 

ಕನ್ನಡವೆಂಬುದು ಸಂಸ್ಕೃತಿ ನಿತ್ಯ || 

 

ಕನ್ನಡವೆಂಬುದು ಹೃದಯದ ಭಾಷೆ  

ಕನ್ನಡವೆಂಬುದು ಕಳೆವುದು ದೋಷ || 


ಕನ್ನಡ ಕಲಿತರೆ ಕೌಶಲ ಸಿದ್ಧಿ 

ಕನ್ನಡ ಕಲಿತರೆ ಜೀವನ ಶುದ್ಧಿ | 

ಕನ್ನಡ ಕಲಿತರೆ ಬೆಳೆವುದು ಬುದ್ಧಿ  

ಕನ್ನಡ ಕಲಿತರೆ ತಿಳಿವಿನ ವೃದ್ಧಿ ||  


ಕನ್ನಡ ಭಾಷೆಯ ಕಲಿಯಲು ಸುಲಭ 

ಕನ್ನಡ ಭಾಷೆಯ ಬರೆಯಲು ಸುಲಭ | 

ಕನ್ನಡ ವಾಙ್ಮಯ ಸಿದ್ಧಿಯು ಸುಲಭ 

ಕನ್ನಡ ವಾಙ್ಮಯ ಕೈವಶ ಸುಲಭ ||  


ಓದಿರಿ ಕನ್ನಡ ಬರಹಗಳ 

ಹಾಡಿರಿ ಕನ್ನಡ ಕವನಗಳ || 


ಎಳೆಯಿರಿ ತಾಯಿಯ ತೇರನ್ನು 

ಬೆಳೆಯಿರಿ ಪಸರಿಸಿ ಲೋಕವನು ||     


ರಚನೆ:- ಶ್ರೀ ವಿ.ಬಿ.ಕುಳಮರ್ವ, ಕುಂಬ್ಳೆ

ರಾಗ-ಸಂಗೀತ-ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು