ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ವರವ ಕೊಡೇ ಚಾಮುಂಡಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ಭಕ್ತಿಗೀತೆ- ವರವ ಕೊಡೇ ಚಾಮುಂಡಿ


ಚಾಮುಂಡಿ ದೇವಿ ಚಾಮುಂಡಿ||2||

ವರವ ಕೊಡೆ ಚಾಮುಂಡಿ ವರವ ಕೊಡೆ ||2||
ಸೆರಗೊಡ್ಡಿ ಬೇಡುವೆನೂ ವರವ ಕೊಡೆ
ವರವ ಕೊಡೆ
ಒಲವಿಂದ ನೀನೆನಗೆ ,ವರ ನೀಡಿ ಸಲಹದಿರೆ||2||
ನಿನ್ನಾಣೆ ನಾ ನಿನ್ನ‌ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

ಕುಂಕುಮವು ಅರಸಿನವು
ಹೊಳೆವಂತ ಕರಿಮಣಿಯು||ಕುಂಕುಮ||
ಸ್ಥಿರವಾಗಿ ಇರುವಂತೆ ವರವ ತೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ ||ವರವ||

ಬಾಗಿಲಲಿ ತೋರಣ
ಮದುವೆ ಮುಂಜಿ ನಾಮಕರಣ||ಬಾಗಿಲಲಿ||
ಯಾವಾಗಲು ಆಗುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

ಹೆಸರುಳ್ಳ ಮನೆ ಕಟ್ಟಿ
ಹಸು ಕರುಗಳ ಸಾಲು ಕಟ್ಟಿ||ಹೆಸರು||
ವಂಶವ್ರಧ್ಧಿ ಆಗುವಂತೆ ವರವ ಕೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ ||ವರವ||

ಮನೆಯಲ್ಲಿ ಹರುಷ ಕೊಟ್ಟು
ಮನದಲ್ಲಿ ಶಾಂತಿ ಕೊಟ್ಟು||ಮನೆಯ||
ಭಕ್ತಿ ಹ್ರದಯ ತುಂಬುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||


Post a Comment

ನವೀನ ಹಳೆಯದು