ಪಾದಕ್ಕೆರಗುವೆನಾ ಗುರುಗಳ ಪಾದಕ್ಕೆರಗುವೆನಾ ..
ಆಷಾಢಪೂರ್ಣಿಮೆಯ ಪರ್ವದಿನದಿ
ಪೇಜಾವರ ಮಠದ ಗುರು ಸುಪೂಜ್ಯರಾ
ಅಧೋಕ್ಷಜ ಯತಿಗಳ ಪರಂಪರಾಗತರ
ವಿಶ್ವೇಶತೀರ್ಥರ ಕರಸಂಜಾತರ
ಮಧ್ವೇಶಕೃಷ್ಣನ ಪಾದ ಸೇವಿಪರ
ವಿಶ್ವಪ್ರಸನ್ನತೀರ್ಥಾರ್ಯರಾ ....ಪಾದಕ್ಕೆರಗುವೆನಾ
ಸಾವಿರ ಹಸುಗಳ ಕಾಯ್ವ ಗೋಮಿನರ
ವ್ಯಾಸ - ದಾಸ ವಾಙ್ಮಯ ವಿಶಾರದರ
ಪರಮವೈರಾಗ್ಯ ಸುಜ್ಞಾನ ಮೂರ್ತಿಗಳಾ
ರಾಮವಿಠಲನ ಬಿಡದೆ ಪೂಜಿಪರಾ..
ಪಾದ..
ಪ್ರಸನ್ನವದನರು ವಿಶ್ವವಂದ್ಯರೂ
ಭಕುತ ಜನರ ಹಿತವ ಪೊರೆವರು
ದೇಶ -ಧರ್ಮವೆ ಉಚ್ಚವೆಂಬರು
ಲೋಕದೊಳಿತಿನ ಕಾಯಕ ನಿರತರಾ...ಪಾದ...
ಗೋಮಿನಃ : ಸಹಸ್ರಾಧಿಕ ಗೋವುಗಳ ಪೋಷಕರು
ಮಹಾಭಾರತ ಶಾಂತಿ ಪರ್ವದಲ್ಲಿ ವ್ಯಾಸರು ಬಳಸಿದ ಶಬ್ದ
-ಗೀತ ಸಾಹಿತ್ಯ: ಜಿ ವಾಸುದೇವ ಭಟ್ ಪೆರಂಪಳ್ಳಿ
ರಾಗ ಸಂಯೋಜನೆ, ಗಾಯನ: ಶ್ರೀಮತಿ ಗಾರ್ಗಿ ಸುದೀಪ್
ಚಿತ್ರಕೃಪೆ: ಕೃಷ್ಣಭಟ್ ಪೇಜಾವರ ಮಠ
ಅವನೀಶ್, ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು
ಕಾಮೆಂಟ್ ಪೋಸ್ಟ್ ಮಾಡಿ