ಮಂಗಳೂರು: ಪಣಂಬೂರಿನಿಂದ ತಣ್ಣೀರುಬಾವಿಗೆ ಹೋಗುವ ಕುದುರೆಮುಖ ರಸ್ತೆಯ ಬದಿಯಲ್ಲಿ ಗುತ್ತಿಗೆ ಕಾರ್ಮಿಕರು ಬೇಜವಾಬ್ದಾರಿಯಿಂದ ತೋಡಿಟ್ಟ ಹತ್ತು ಅಡಿ ಆಳದ ಗುಂಡಿಗೆ ಇಂದು ಬೆಳಗ್ಗೆ ಬಿದ್ದ ಪುಟ್ಟ ಕರುವೊಂದನ್ನು ನಿಖಿಲ್ ಪೂಜಾರಿ ಅವರು ತಮ್ಮ ಸ್ನೇಹಿತರ ಜತೆಗೂಡಿ ಮೇಲಕ್ಕೆತ್ತಿ ರಕ್ಷಿಸಿದರು. ಕರು ಗುಂಡಿಗೆ ಬಿದ್ದು ಒದ್ದಾಟ ನಡೆಸುತ್ತಿದ್ದಾಗ ಆ ಮಾರ್ಗವಾಗಿ ಸಾಗುತ್ತಿದ್ದ ನಿಖಿಲ್ ಪೂಜಾರಿ ಅವರಿಗೆ ಇದು ಕಾಣಿಸಿತು. ಕೂಡಲೇ ಅವರು ಮೂರ್ನಾಲ್ಕು ಮಂದಿ ಸ್ನೇಹಿತರ ನೆರವಿನೊಂದಿಗೆ ಗುಂಡಿಗೆ ಇಳಿದು ಕರುವನ್ನು ಮೇಲಕ್ಕೆತ್ತಿದರು. ಬಳಿಕ ಆದರ ಆರೈಕೆ ಮಾಡಿ ಕರುವನ್ನು ಅದರ ವಾರಸುದಾರರಿಗೆ ಒಪ್ಪಿಸಲಾಗಿದೆ.
ನಿಖಿಲ್ ಪೂಜಾರಿಯವರ ಈ ಕಾರ್ಯಕ್ಕೆ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗಿವೆ.
ಕಾಮೆಂಟ್ ಪೋಸ್ಟ್ ಮಾಡಿ