ಬೇಕಾಗುವ ಸಾಮಾಗ್ರಿಗಳು:
ತುಪ್ಪ -3 ಟೇಬಲ್ ಸ್ಪೂನ್
ಬೂರಾ ಸಕ್ಕರೆ/ಸಕ್ಕರೆ ಪುಡಿ- 4 ಟೇಬಲ್ ಸ್ಪೂನ್
ಗೋಧಿ/ರಾಗಿ ಹಿಟ್ಟು - 4 ಟೇಬಲ್ ಸ್ಪೂನ್
ತೆಂಗಿನ ತುರಿ -1/2 ಬೌಲ್
ಮಾಡುವ ವಿಧಾನ:
ತೆಂಗಿನ ತುರಿಯನ್ನು ಸಣ್ಣ ಉರಿಯಲ್ಲಿ 7-8 ನಿಮಿಷ ಹುರಿದು ತಣ್ಣಗಾದ ನಂತರ ಪುಡಿ ಮಾಡಿ ಇಟ್ಟುಕೊಳ್ಳಿ.
ಒಂದು ಬೌಲ್‌ನಲ್ಲಿ ದಪ್ಪಗಿರುವ ತುಪ್ಪ ಹಾಕಿ ನಸು ಹಳದಿ ಬಣ್ಣ ಬರುವ ತನಕ ಚೆನ್ನಾಗಿ ಕಲಸಿ.
ಅದಕ್ಕೆ ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ.
ಈಗ ಅದಕ್ಕೆ ಗೋಧಿ/ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಇದಕ್ಕೆ ಹುರಿದ ತೆಂಗಿನ ತುರಿ ಪುಡಿಯನ್ನು ಸೇರಿಸಿ ಚೆನ್ನಾಗಿ ನಾದಿದರೆ ಕುಕ್ಕೀಸ್ ಹಿಟ್ಟು ತಯಾರು.
ಒಲೆಯ ಮೇಲೆ ದಪ್ಪ ಬಾಣಲೆಯನ್ನು (ಸ್ಟಾಂಡ್ ಸಹಿತ) ಮುಚ್ಚಿ ಹದ ಉರಿಯಲ್ಲಿ ಬಿಸಿಯಾಗಲು ಇಡಿ.
ಸಣ್ಣ ಉಂಡೆಗಳನ್ನು ತೆಗೆದು ಕೈಯಲ್ಲಿ ಒತ್ತಿ ಬೇಕಾದ ಆಕಾರ ಕೂಡಿ.
ಒಂದು ತಟ್ಟೆಗೆ ತುಪ್ಪ ಸವರಿ 6-7 ಕುಕ್ಕೀಸ್ ಗಳನ್ನು ನಡುವೆ ಅಂತರವಿರುವಂತೆ ಇಡಿ.
ಈಗ ಬಿಸಿಯಾದ ಬಾಣಲೆಯಲ್ಲಿ ಕುಕ್ಕೀಸ್ ನ ತಟ್ಟೆ ಇಟ್ಟು, ಉರಿ ಸಣ್ಣದು ಮಾಡಿ ಮುಚ್ಚಿಡಿ.
15 ನಿಮಿಷದಲ್ಲಿ ಬಾಣಲೆಯಿಂದ ತೆಗೆದು ತಣ್ಣಗಾಗಲು ಬಿಡಿ. ಒಂದೊಂದಾಗಿ ತಟ್ಟೆಯಿಂದ ತೆಗೆದರೆ ಗರಿಗರಿಯಾದ ಕೋಕೋನಟ್ ಕುಕ್ಕೀಸ್ ತಯಾರು.

- ಸೌಮ್ಯ ವಿಜಯ ಮುರಾರಿ
ಕಾಮೆಂಟ್ ಪೋಸ್ಟ್ ಮಾಡಿ