ಕೊರೊನಾ ಸೋಂಕು ತಗುಲಿದರೆ ಸಾವು ನಿಶ್ಚಿತ ಎಂಬಂತೆ ದೃಶ್ಯ ಮಾಧ್ಯಮಗಳು ಬಿಂಬಿಸುತ್ತಿರುವ ಹೊತ್ತಿನಲ್ಲಿ, ಇಲ್ಲೊಂದು ವೀಡಿಯೋ ವಾಟ್ಸಾಪ್ ಮೂಲಕ ಬಂದಿದ್ದು, ಕ್ವಾರಂಟೈನ್‌ನಲ್ಲಿರುವ ಕೊರೊನಾ ಸೋಂಕಿತರು ಖುಷಿ ಖುಷಿಯಾಗಿಯೇ ಕಾಲ ಕಳೆಯುತ್ತಿರುವ ದೃಶ್ಯ ಕಾಣಿಸುತ್ತಿದೆ. ಇದು ಯಾವ ಊರಿನಲ್ಲಿ ನಡೆದಿರುವ ಘಟನೆ ಎಂದು ತಿಳಿದಿಲ್ಲ. ಇದೊಂದು ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ ವೀಡಿಯೋ ಆಗಿರುವುದರಿಂದ ಸಕಾರಾತ್ಮಕ ಭಾವನೆ ಮೂಡಿಸುವ ಸಲುವಾಗಿ ಇದನ್ನು ಉಪಯುಕ್ತ ನ್ಯೂಸ್ ತನ್ನ ಪಾಡ್‌ಕಾಸ್ಟ್ ಚಾನೆಲ್ ಮೂಲಕ ಹಂಚಿಕೊಳ್ಳುತ್ತಿದೆ.
ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಏನು ಬಂದರೂ ಎದುರಿಸುತ್ತೇವೆ ಎಂಬ ಹುಮ್ಮಸ್ಸು, ಆ ಮೂಲಕ ಕೊರೊನಾ ಮಹಾಮಾರಿಯ ವಿರುದ್ಧ ಗೆಲುವು ಎಲ್ಲರದಾಗಲಿ ಎಂಬ ಆಶಯದೊಂದಿಗೆ ಈ ವೀಡಿಯೋ ನಿಮಗಾಗಿ ಇಲ್ಲಿ ಬಿತ್ತರಿಸುತ್ತಿದ್ದೇವೆ.
ಕಾಮೆಂಟ್ ಪೋಸ್ಟ್ ಮಾಡಿ