ಹಲಸಿನ ಎಲೆಯಿಂದ ಮೂಡೆ ತಯಾರಿಸಿ ಅದರಲ್ಲಿ ಇಡ್ಲಿ ಹಿಟ್ಟನ್ನು ಹಾಕಿ ಬೇಯಿಸಿ ತಿಂಡಿ ತಯಾರಿಸುವ ಪದ್ಧತಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಜನಪ್ರಿಯವಾಗಿದೆ. ವಿಶೇಷವಾಗಿ ಹಬ್ಬ-ಹರಿದಿನಗಳಲ್ಲಿ ಮೂಡೆ ಬಳಕೆ ಹೆಚ್ಚು. ಅದಕ್ಕಾಗಿ ಸ್ವಚ್ಛಗೊಳಿಸಿದ ಅಗಲವಾದ ಹಲಸಿನ ಎಲೆಗಳನ್ನು ಸಂಗ್ರಹಿಸಿ ಕಡ್ಡಿಗಳಿಂದ ಅವುಗಳನ್ನು ಜೋಡಿಸಿ ಮೂಡೆ ಹೆಣೆಯೋದು ಒಂದು ವಿಧಾನ.
ಆದರೆ ಹೊಲಿಗೆ ಯಂತ್ರ ಬಳಸಿ ಮೂಡೆಗಳನ್ನು ಹೊಲಿಯೋದು ಇನ್ನೂ ವಿಶೇಷ. ಹೊಲಿದು ತಯಾರಿಸಿದ ಮೂಡೆಗೆ ಬಲ ಜಾಸ್ತಿ. ಹಿಟ್ಟು ಹೊರಚೆಲ್ಲುವ ಸಾಧ್ಯತೆ ಕಡಿಮೆ. ಹೀಗಾಗಿ ಹೊಲಿದು ತಯಾರಿಸುವ ಮೂಡೆ ಕೂಡ ಕರಾವಳಿಯಲ್ಲಿ ಬಳಕೆಯಲ್ಲಿದೆ. ಅಂತಹ ಒಂದು ವೀಡಿಯೋ ಇಲ್ಲಿದೆ ನೋಡಿ.
ಕಾಮೆಂಟ್ ಪೋಸ್ಟ್ ಮಾಡಿ