(ಚಿತ್ರ ಕೃಪೆ: ಎಎನ್‌ಐ ಟ್ವಿಟರ್ ಹ್ಯಾಂಡಲ್)
ಅಮೆರಿಕದ ನ್ಯೂಯಾರ್ಕ್‌ನ ಪ್ರಸಿದ್ಧ ಸ್ಥಳವಾದ ಟೈಮ್ ಸ್ಕ್ವೇರ್‌ನಲ್ಲಿ ಆಗಸ್ಟ್ 15ರಂದು ಭಾರತದ 74ನೇ ಸ್ವಾತಂತ್ರ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು.
********
ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಐತಿಹಾಸಿಕ ಟೈಮ್ ಸ್ಕ್ವೇರ್‌ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿನ ಭಾರತೀಯ ಸಮುದಾಯದವರು 200ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಅಮೆರಿಕದ ಧ್ವಜದ ಜತೆಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಹಾಡಿದರು.
74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ನಾವು ಇಲ್ಲಿ ಸೇರಿದ್ದೇವೆ. ನಮ್ಮ ತಾಯ್ನಾಡಿನ ವೈಭವವನ್ನು ಜಗತ್ತಿಗೆ ಸಾರಲು ಇಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಲು ನಿರ್ಧರಿಸಿದೆವು' ಎಂದು ಭಾಗವಹಿಸಿದವರಲ್ಲಿ ಒಬ್ರು ತಿಳಿಸಿದರು.
ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ರಣಧೀರ್ ಜೈಸ್ವಾಲ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಶ್ (ಎಫ್‌ಐಎ) ಮಾಜಿ ಅಧ್ಯಕ್ಷ ಅಲೋಕ್ ಕುಮಾರ್ ಈ ಕಾರ್ಯಕ್ರಮ ಆಯೋಜಿಸಿದ್ದರು.
ಈ ವೀಡಿಯೋ ನೋಡಿ:
إرسال تعليق