"ವಂದೇ ಮಾತರಂ"-- ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಡಿ ಹಚ್ಚಿದ, ಜಾತಿ-ಧರ್ಮಗಳನ್ನು ಮೀರಿ ಕೋಟ್ಯಾಂತರ ಜನರನ್ನು ಒಗ್ಗೂಡಿಸಿದ ಈ ಹಾಡು ಇಂದಿಗೂ ಚಿರನೂತನ. ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು, ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಬಡಿದೆಬ್ಬಿಸಿದ ಈ ಹಾಡಿನ ಸಾಲುಗಳು ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಸ್ಫೂರ್ತಿಯನ್ನೇ ನೀಡಿದವು. ಭಾರತೀಯರನ್ನು ಒಗ್ಗೂಡಿಸಿದ ಈ ಮಹಾನ್ ಮಂತ್ರದ ರಚನೆಕಾರ ಕವಿ- ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ. ತನ್ನ ಐತಿಹಾಸಿಕ ರಚನೆಗಳ ಮೂಲಕ ದೇಶದ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಹೊಂದಿದವರು ಇವರು.
ಕಾಮೆಂಟ್ ಪೋಸ್ಟ್ ಮಾಡಿ