ದೇಸಿ ಗೋವುಗಳ ಸಾಕಣೆಯಿಂದ ಬರುವ ಹಾಲು ಒಂದು ಉಪ ಉತ್ಪನ್ನವೇ ಹೊರತು ಪ್ರಮುಖ ಉತ್ಪನ್ನವಲ್ಲ. ಗೋಮಯ, ಗೋಮೂತ್ರಗಳೇ ಪ್ರಧಾನ ಉತ್ಪನ್ನಗಳು ಎನ್ನುತ್ತಾರೆ ಈ ಸೋದರರಲ್ಲಿ ಒಬ್ಬರಾದ ಪ್ರವೀಣ್.
ಈ ಉತ್ಪನ್ನಗಳನ್ನು ತಯಾರಿಸಲು ಮಲೆನಾಡು ಗಿಡ್ಡ ಮತ್ತು ಹಳ್ಳಿಕಾರ್ ತಳಿಯ ದೇಸಿ ಹಸುಗಳ ಗೋಮಯವನ್ನೇ ಬಳಸಲಾಗುತ್ತದೆ. ಎಚ್‌ಎಫ್ ಅಥವಾ ಜೆರ್ಸಿ ತಳಿ ಹಸುಗಳ ಗೋಮಯದಿಂದ ತಯಾರಿಸಲು ಆಗದು ಎನ್ನುತ್ತಾರೆ.
ಪ್ರವೀಣ್, ಪ್ರತಾಪ್ ಮತ್ತು ಪ್ರದೀಪ್ ಎಂಬ ಈ ಮೂವರು ಸೋದರರು ತಮ್ಮ ಅನುಭವವನ್ನು ವಿವರಿಸುವುದು ಹೀಗೆ....
ಬೆಂಗಳೂರು ನಗರದಲ್ಲಿದ್ದುಕೊಂಡು ದೇಸಿ ಹಸುಗಳನ್ನು ಸಾಕುತ್ತಿರುವ ಶ್ರೀ ಕುಮಾರ ಸುಬ್ರಹ್ಮಣ್ಯ ಜಾಗೀರ್‌ದಾರ್ ಅವರೇ ತಮಗೆ ಈ ನಿಟ್ಟಿನಲ್ಲಿ ಪ್ರೇರಣೆಯಾಗಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಂಡು ನಮಗೂ ಮಾರ್ಗದರ್ಶನ, ಬೆಂಬಲ ನೀಡಿದ್ದಾರೆ ಎನ್ನುತ್ತಾರೆ ಈ ಸೋದರರು.
Tags: Gau maya deepa, Gau maya products, Cow dung products, ಗೋಮಯ ಉತ್ಪನ್ನಗಳು, ಕಲಾಕೃತಿಗಳು,
إرسال تعليق