ಹುಟ್ಟು ಹಬ್ಬದ ಶುಭಾಶಯಗಳನ್ನು ಸಂಸ್ಕೃತದಲ್ಲಿ ಸಲ್ಲಿಸಲು ಬಯಸುತ್ತಿದ್ದೀರಾ...? ಇಲ್ಲಿದೆ ನೋಡಿ ಅತ್ಯಂತ ಸುಂದರವಾದ ಶುಭಾಶಯಗೀತೆ... ಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂ ತನೋತು ತೇ ಸರ್ವದಾ ಮುದಂ
ಚಿನ್ಮಯಾ ಮಿಶನ್‌ನ ಅಂತಾರಾಷ್ಟ್ರೀಯ ಮುಖ್ಯಸ್ಥರಾಗಿದ್ದ ಪರಮಪೂಜ್ಯ ಗುರೂಜಿ ಸ್ವಾಮಿ ತೇಜೋಮಯಾನಂದ ಅವರು ಸುಮಾರು 20 ವರ್ಷಗಳ ಹಿಂದೆಯೇ ರಚಿಸಿದ ಈ ಶುಭಾಶಯ ಗೀತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖ್ಯಾತ ಗಾಯಕಿ ಹರಿಣಿ ರಾವ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಗೀತೆಯನ್ನು ಪ್ರಕಟಿಸಿದ್ದಾರೆ. ಸೆಪ್ಟೆಂಬರ್ 7ರಂದು ಅಪ್‌ಲೋಡ್ ಮಾಡಲಾದ ಈ ಗೀತೆಯನ್ನು ಈ ವರೆಗೆ 33,590ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
إرسال تعليق