ಅ.24ರಂದು ತಮ್ಮ ಪಟ್ಟಾಭಿಷೇಕದ 53ನೇ ವರ್ಧಂತಿಯನ್ನು ಆಚರಿಸಿಕೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕುರಿತು ಮಂಡ್ಯದ ಖ್ಯಾತ ಗಮಕಿ ಕಲಾಶ್ರೀ ಸಿ.ಪಿ. ವಿದ್ಯಾಶಂಕರ್ ಅವರು ಹಾಡಿದ ಗೀತೆಯಿದು.
ಮೈಸೂರು-ಮಂಡ್ಯದ ಹೆಸರಾಂತ ಸಾಹಿತ್ಯ ವ್ಯಾಖ್ಯಾನಕಾರರಾದ ಡಾ. ಮೋಹನ್ ಕುಮಾರ್ ಅವರು ಈ ಗೀತೆಯನ್ನು ರಚಿಸಿದ್ದಾರೆ.
ದೂರದರ್ಶನದ ಚಂದನ ವಾಹಿನಿಯಲ್ಲಿ ಇಂದು ಬೆಳಗ್ಗೆ ಈ ಗೀತೆ ಪ್ರಸಾರವಾಗಿದ್ದು, ನಾಡಿನ ಲಕ್ಷಾಂತರ ಜನರು ವೀಕ್ಷಿಸಿದರು. ಕಲಾಶ್ರೀ ವಿದ್ಯಾಶಂಕರ್ ಅವರು ಸ್ವತಃ ಈ ಗೀತೆಯ ಧ್ವನಿಮುದ್ರಣವನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಉಪಯುಕ್ತ ಪಾಡ್‌ಕಾಸ್ಟ್ ಮೂಲಕ ಬಿತ್ತರಿಸಲಾಗುತ್ತಿದೆ.
ಅಜ್ಞಾತ ಬೋಧಕ
ಅದೋ ನೋಡಿ! ಅಲ್ಲಿ ಹಬ್ಬಿರುವ
ಅನಂತ ಮಬ್ಬಿನ ತುದಿಯಲ್ಲಿ!
ಕಿರಿಸೊಡರ ಕೈ ದೀವಿಗೆಯ ನೆಚ್ಚಿ
ಹಚ್ಚುತಿಹನಾ ಸೊಡರುಗಳ
ಅವಿವೇಕ,ಅಜ್ಞಾನ ತಿಮಿರ ತಿಂತಿಣೆಸೆ
ಅದರವುಗಳೊಡನೆ ಸೆಣಸು ತಿಹನು
ತಾಳ್ಮೆಯ ಉಸಿರಾಗಿ ಕಾಯ೯ವ ಮೈಕಸುವಾಗಿ
ತಾನು ಹಚ್ಚಿದ ಹಣತೆ ಬೆಳಗುತಿರೆ ಕಂಡು
ಮಾನಸಲೋಕದಲ್ಲಿ ಹಿಗ್ಗುವ
ಅವನವನೆ ಶಿಶು -ಶಿಲ್ಪಿ ಅವನವನೆ ಅಜ್ಞಾತ
ಮಹಾನ್ ಧಮ೯ದ, ಮrರ್ಮದ ಕರ್ಮಯೋಗಿ
ಅವನ ಹೆಸರನು ನಿಲಿಸೆ ಸ್ಮಾರಕದ ಶಿಲೆಯಿಲ್ಲ
ಅವನ ಕೃತಿಯನು ಹೊಗಳೆ ಕಾವ್ಯ ಮಾಲೆಯದಿಲ್ಲ
ಅವನ ಜಸಬಿತ್ತರಿಸೆ ಬಿರುದು ಬಾವಳಿಗಳಿಲ್ಲ
ಅವನಿಲ್ಲದೆ ಶಿಕ್ಷಣಕೆ ಉಸಿರಿಲ್ಲ-ರಸವಿಲ್ಲ
ಅಜ್ಞಾತ ಭೋಧಕ ಇದುವೆ ನನ್ನ ಮೆಚ್ಚುಗೆ ನಿನಗೆ.💐🙏
✍️ಕವಿತೆ ರಚನೆ: ವಿದ್ಯಾವಾಚಸ್ಪತಿ,ಪ್ರಭಾವಕರತ್ನ ಡಾ.ಎಚ್.ಪಿ.ಮೋಹನ್ ಕುಮಾರ್ ಶಾಸ್ತ್ರಿ.ಮಂಡ್ಯ-ಮೈಸೂರು.
ಆಲಿಸಿ, ಪ್ರತಿಕ್ರಿಯಿಸಿ...
ಕವಿ ಪರಿಚಯ:
ಡಾ. ಎಚ್.ಪಿ ಮೋಹನ್ ಕುಮಾರ್ ಅವರು, ಉಪನ್ಯಾಸಕರು, ಪ್ರಾಚಾರ್ಯರೂ ಆಗಿ ನಾನಾ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು.
ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಪಾರುಪತ್ತೇಗಾರ್ ಪಾರ್ಶ್ವನಾಥಯ್ಯ ಮತ್ತು ಇಂದ್ರಮ್ಮ ದಂಪತಿಗಳ ಪುತ್ರರಾಗಿ 1964ರ ಜುಲೈ 20ರಂದು ಜನಿಸಿದರು. ಎಂ.ಎ, ಎಂ.ಇಡಿ, ಪಿಎಚ್‌ಡಿ, ಎಲ್‌ಎಲ್‌ಬಿ ಸೇರಿದಂತೆ ಉನ್ನತ ಪದವಿಗಳನ್ನು ಪಡೆದಿರುವ ಈ ಹಿರಿಯ ವಿದ್ವಾಂಸರು ಮೈಸೂರಿನ ಬದರೀಪ್ರಸಾದ್ ಜೀ ಪದವಿ ಪೂರ್ವ ಕಾಲೇಜು, ಮಂಡ್ಯದ ಭಾರತೀನಗರದ ಶ್ರೀ ಚಾಂಷುಗರ್ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು. ಮಂಡ್ಯದ ಆತ್ರೇಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ/ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿದ್ಯಾಶ್ರಮ ಕಾಲೇಜು ಮೈಸೂರು, ವಿಜಯ ಚೇತನ ಪಿಯು ಕಾಲೇಜುಗಳಲ್ಲೂ ಪ್ರಾಚಾರ್ಯರಾಗಿ ಸಂಸ್ಥೆಗಳನ್ನು ಮುನ್ನಡೆಸಿದವರು.
ಬೆಂಗಳೂರಿನ ಪ್ರಹರಿ ಆರ್ಕೇಡ್ ಕಂಪನಿಯ ಜನರಲ್ ಮ್ಯಾನೇಜರ್ ಆಗಿ ಹೊಣೆಗಾರಿಕೆ ನಿಭಾಯಿಸಿದ್ದಾರೆ. ಪಿಇಎಸ್ ಅಮಾರ್ತ್ಯ ಇಂಟರ್‌ನ್ಯಾಷನಲ್ ಸ್ಕೂಲ್, ಸೇಂಟ್ ಫಿಲೋಮಿನಾ ಕಾಲೇಜುಗಳು ಬೆಂಗಳೂರು; ಮಾನಸ ಸರೋವರ ಪುಷ್ಕರಿಣಿ, ಮೈಸೂರು; ನಲಂದ ಇಂಟರ್‌ನ್ಯಾಷನಲ್ ಕೊಡಗು- ಒಟ್ಟು 25 ಶಿಕ್ಷಣ ಸಂಸ್ಥೆಗಳ ಜೊತೆ ಆರ್ಕೇಡ್ ಕೆ.ಸಿ.ಪಿ.ಯು ಮೈಸೂರಿನ ಹಿರಿಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಮೋಹನ್ ಕುಮಾರ್ ಅವರು ಈವರೆಗೆ ಕರ್ನಾಟಕದ 7 ಜಿಲ್ಲೆಗಳ (ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ) 3,20,000 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಲಕ್ಷಾಂತರ ಪೋಷಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಮಂಡ್ಯ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲಾ ಭಾರತ ವಿಕಾಸ ಪರಿಷದ್ ಅಧ್ಯಕ್ಷರಾಗಿ 5 ವರ್ಷ ಸೇವೆ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ 3 ವರ್ಷ ಸೇವೆ, ರಾಷ್ಟ್ರೋತ್ಥಾನ ಬಳಗ- ಮಂಡ್ಯದ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ.
ಮುಕ್ತ ಸಾಹಿತ್ಯ ಅಕಾಡೆಮಿ ಮಂಡ್ಯ ಜಿಲ್ಲೆಯ ಅಧ್ಯಕ್ಷರಾಗಿ, ಸಮ್ಯಕ್ತ್ವ ಸೇವಾ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ; ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘ ಮೈಸೂರು ಕಾರ್ಯದರ್ಶಿಯಾಗಿ ಕಳೆದ 25 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ.
ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ಕವಿಕಾವ್ಯ ಸಮ್ಮೇಳನಾಧ್ಯಕ್ಷರಾಗಿ, 2018ರ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಕರ್ನಾಟಕ ಜೈನ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೃತಿಗಳು: ಶ್ರವಣಬೆಳಗೊಳ ಜೈನ ಡೈರೆಕ್ಟರಿ, ಜೈನ ಧರ್ಮ ಸಂಕ್ಷಿಪ್ತ ಪರಿಚಯ, ಪೂರ್ಣಿಮ, ಸಂಜೆಯ ನೆರಳಿನಲ್ಲಿ, ಬಾಣಲೆಯ ಬೆಂಕಿಗೆ (ಕವನ ಸಂಕಲನಗಳು), ಕಾಚಕಿ, ಅನಂತ ಸಿರಿ, ಸಮ್ಯಕ್ತ್ವ ದರ್ಪಣ, ಅರ್ಚಕ ಶ್ರೀ, ನವಗ್ರಹ ಆರಾಧನೆ, ಜಿನ ವೈಭವ (ಸಂಪಾದನಾ ಗ್ರಂಥಗಳು); ನಾ ಕಂಡ ರಾಜಸ್ಥಾನ (ಪ್ರವಾಸ ಕಥನ); 841 ಪುಟಗಳ ಮಹಾ ಪುರಾಣ (ಮುದ್ರಣದಲ್ಲಿದೆ).
Tags: Dharmasthala, Dr D. Veerendra Heggade, DD Chandana, ಧರ್ಮಸ್ಥಳ, ಡಾ. ಡಿ. ವೀರೇಂದ್ರ ಹೆಗ್ಗಡೆ, ಗಾನ ನಮನ, ಗಮಕಿ ಕಲಾಶ್ರೀ ವಿದ್ಯಾಶಂಕರ್
ಕಾಮೆಂಟ್ ಪೋಸ್ಟ್ ಮಾಡಿ