ಜಗದ್ಹುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ತೋಟಕಾಚಾರ್ಯ ಪರಂಪರೆಯ ಭಾವೀ ಉತ್ತರಾಧಿಕಾರಿ (ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಂದು ನಾಮಾಂಕಿತರಾದ) ಶ್ರೀ ಜಯರಾಮ ಮಂಜತ್ತಾಯರು ತಮ್ಮ ಸನ್ಯಾಸ ದೀಕ್ಷಾ ಪೂರ್ವಭಾವಿ ತೀರ್ಥ ಕ್ಷೇತ್ರ ಸಂಚಾರ ನಿಮಿತ್ತ ಗುರುವಾರ ಉಡುಪಿಗೆ ಭೇಟಿ ನೀಡಿದರು.
ಶ್ರೀ ಕೃಷ್ಣಮುಖ್ಯಪ್ರಾಣರ ದರ್ಶನ ಪಡೆದ ಬಳಿಕ ಶ್ರೀ ಮದನಂತೇಶ್ವರ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಅಲ್ಲಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಅದೃಶ್ಯ ಸನ್ನಿಧಾನದ ದರ್ಶನ ಪಡೆದು ಭಕ್ತಿ ಸಮರ್ಪಸಿದರು.
ಚಿತ್ರಕೃಪೆ: ಪರಶುರಾಮ ಭಟ್ ಕುಂಜಾರುಗಿರಿ
إرسال تعليق