ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವಿಶೇಷ: ದೀಪಾವಳಿಗಾಗಿ ಅಂದದ ತೇಲುವ ಹಣತೆಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad
ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಅರಿವನ್ನು ಮೂಡಿಸುವ ಹಬ್ಬದ ಖುಷಿಯನ್ನು ಕಲಾತ್ಮಕವಾಗಿ ಹೆಚ್ಚಿಸುವ ಸರಳ ವಿಧಾನವೊಂದನ್ನು ಕರಕುಶಲ ಕಲೆಗಾರ್ತಿ, ಉಪಯುಕ್ತ ನ್ಯೂಸ್‌ನ ಓದುಗರಾದ ಹೇಮಾ ವೆಂಕಟೇಶ ಹಂದ್ರಾಳ ಅವರು ಹೇಳಿಕೊಟ್ಟಿದ್ದಾರೆ.

ಕಡಿಮೆ ಎಣ್ಣೆ ಬಳಸಿ ಹೆಚ್ಚು ಹೊತ್ತು ಬೆಳಕು ನೀಡುವ ತೇಲುವ ಹಣತೆಗಳನ್ನು ನಾವೇ ತಯಾರಿಸಿಕೊಳ್ಳಬಹುದು. ಹೊಂಬಣ್ಣದ ಬೆಳಕು ಬೀರುವ ಸುಂದರ ಹಣತೆಗಳನ್ನು ಹೀಗೆ ತಯಾರಿಸಿಕೊಳ್ಳಬಹುದು. ಓವರ್ ಟು ಹೇಮಾ ವೆಂಕಟೇಶ ಹಂದ್ರಾಳ:-ಈ ಅಂದದ ತೇಲುವ ಹಣತೆಗಳನ್ನು ತಯಾರಿಸಲು ನಾನು ಬಳಸಿಕೊಂಡಿದ್ದು ಇಷ್ಟೆ. ಕೆಲವು ಕುಂದಣಗಳು, ಹರಳುಗಳು ಮತ್ತು ಅಡುಗೆಗೆ ಬಳಸುವ ಬಣ್ಣದ ಪುಡಿ. ಇವನ್ನೆಲ್ಲ ಗಾಜಿನ ಬೌಲ್‌ನಲ್ಲಿ ಹಾಕಿಟ್ಟುಕೊಳ್ಳಿ.

ಪ್ಲಾಸ್ಟಿಕ್ ಹಾಳೆಯೊಂದನ್ನು ತೆಗೆದುಕೊಂಡು ವೃತ್ತಾಕಾರದಲ್ಲಿ ಕತ್ತರಿಸಿ ಅದರಲ್ಲೊಂದು ಸಣ್ಣ ರಂಧ್ರ ಮಾಡಿಟ್ಟುಕೊಳ್ಳಿ. ಇದು ಕ್ಯಾಂಡಲ್‌ನ ಬತ್ತಿ ಅಥವಾ ಎಣ್ಣೆಯಲ್ಲಿ ಅದ್ದಿದ ಹತ್ತಿಯ ಬತ್ತಿಯನ್ನು ತೂರಿಸಿ ಇಡುವುದಕ್ಕಾಗಿ.

ಇನ್ನು ಬೌಲ್‌ಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಬಳಿಕ ನಿಧಾನವಾಗಿ ಕೆಲವು ಸ್ವಲ್ಪ ಎಣ್ಣೆಯನ್ನು ಸುರಿಯಿರಿ. ಬತ್ತಿಯನ್ನು ಇರಿಸಿದ ಪ್ಲಾಸ್ಟಿಕ್ ಅಥವಾ ಗಾಜಿ ಹಾಳೆಯ ಮೇಲೆ ಒಂದು ಹನಿ ಎಣ್ಣೆ ಹಾಕಿರಿ. ನಂತರ ನಿಮ್ಮ ಮನೆಯ ದೀಪವನ್ನು ಬೆಳಗಿ ದೀಪಾವಳಿ ಸಂಭ್ರಮವನ್ನು ಆಚರಿಸಿಕೊಳ್ಳಿ.

-ಹೇಮಾ ವೆಂಕಟೇಶ್ ಹಂದ್ರಾಳ, ಬಾಗಲಕೋಟPost a Comment

أحدث أقدم