ಭಕ್ತಿಗಾನ: ಸ್ವಾಮಿ ಮುಖ್ಯಪ್ರಾಣ, ನಿನ್ನ ಮರೆವರ ಗಂಟಲ ಗಾಣ
ಗಾಯನ: ಶ್ರೀ ವಿದ್ಯಾಭೂಷಣರು
ಸ್ವಾಮಿ ಮುಖ್ಯಪ್ರಾಣ, ನಿನ್ನ ಮರೆವರ ಗಂಟಲ ಗಾಣ ನೀ ಹಿಡಿದ್ಯೋ ರಾಮನ ಚರಣ, ನೀ ನ್ಹೌದೌದೊ ಜಗತ್ಪ್ರಾಣ ||ಸ್ವಾಮಿ||
ಸಂಜೀವಿನಿ ಪರ್ವತವ, ನೀ ನಂಜದೆ ತಂದ್ಯೋ ನೀನು ಅಂಜನೆಸುತ ಸದಾಕಾವ, ಹೃ- ತ್ಕಂಜವಾಸ ಸರ್ವಜೀವ ||ಸ್ವಾಮಿ||
ಏಕಾದಶಿಯ ರುದ್ರ, ನೀ ಒಯ್ದ್ಯೋ ರಾಮರ ಮುದ್ರ ಸಕಲವಿದ್ಯಾಸಮುದ್ರ, ನೀ ನ್ಹೌದೌದೋ ಬಲಭದ್ರ ||ಸ್ವಾಮಿ||
ವೈಕುಂಠದಿಂದ ಬಂದು, ನೀ ಪಂಪಾಕ್ಷೇತ್ರದಿ ನಿಂದು ಯಂತ್ರೋದ್ಧಾರಕನೆಂದು, ಪು- ರಂದರವಿಠಲ ಸಲಹೆಂದು ||ಸ್ವಾಮಿ||
ಕಾಮೆಂಟ್ ಪೋಸ್ಟ್ ಮಾಡಿ