ಆಶುಕವನ ರಚನೆ:- ವಿ.ಬಿ.ಕುಳಮರ್ವ, ಕುಂಬ್ಳೆ
ರಾಗಸಂಯೋಜನೆ ಮಾಡಿ ಹಾಡಿದವರು:- ಗಮಕಿ ಕಲಾಶ್ರೀ ವಿದ್ಯಾಶಂಕರ ಮಂಡ್ಯ
ಕನಕ-ಪುರಂದರ
~~~~
ಕನಕದಾಸರ ಭಕುತಿ ದಾಸ ಪುರಂದರ ಮುಕುತಿ
ಒಂದರೊಳಗೊಂದು ಅವಿನಾಭಾವ ಶಕುತಿ||
ಉಡುಪಿ ಕೃಷ್ಣನ ಭಜಿಸಿ ಇಷ್ಟಾರ್ಥ ಸಾಧಿಸಿದ
ಕನಕದಾಸರ ನಮಿಸಿ ಧನ್ಯನಾದೆನು ನಾನು|
ವಿಠಲ ದೇವರ ನಮಿಸಿ ಹೊಗಳಿ ಹಾಡಿದ ದಾಸ
ಪುರಂದರರ ವಂದಿಸುತ ಕೃತಕೃತ್ಯನಾದೆ||
ದಾಸರಿಬ್ಬರು ಒಂದೆ ನಾಮಾಂಕಿತವು ಬೇರೆ
ನೋಡಲಿಬ್ಬರದು ಚಿಂತನೆಯು ಒಂದೇ |
ಹಾಡಿದರು ಭಜಿಸಿದರು ಸ್ತುತಿಸಿದರು ಮನಸಾರೆ
ಸಂಭ್ರಮದಿ ಸಡಗರದಿ ಭಕುತಿ ಸಾಗರದಿ ||
ಕಾಗಿನೆಲೆಯಾದಿ ಕೇಶವನ ನಂಬಿ ಭಜಿಸಿದರೆ
ಬೇಗನೇ ತಾನೊಲಿದು ಹರಸುವನು ಶ್ರೀ ವಿಠಲ|
ರಾತ್ರಿ ಹಗಲೆನದೆ ಹಸಿವು ತೃಷೆ ದಣಿವಿರದೆ
ಮೈಮರೆತು ಹಾಡಿದರು ಹರಿಯ ದಾಸರಿವರು||
-ಕುಳಮರ್ವ
ತಾ -೨-೧೨-೨೦೨೦
إرسال تعليق