ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಆನೆ ಬಂತೊಂದಾನೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಭಕ್ತಿಗೀತೆ- ದೇವರನಾಮ- ಆನೆ ಬಂತೊಂದಾನೆ

ರಚನೆ: ಶ್ರೀ ಪ್ರಸನ್ನ ವೆಂಕಟದಾಸರು

ಗಾಯನ: ಶ್ರೀ ಪುತ್ತೂರು ನರಸಿಂಹ ನಾಯಕ್


ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ

ದಾನವ ಕದಳಿಯಕಾನನ ಮುರಿಯುತ              ||ಪ||


ಗುಂಗುರುಗುರುಳ ನೀಲಾಂಗ ಚೆಲ್ವಾನೆ

ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ

ಬಂಗಾರದಣುಗಂಟೆ ಶೃಂಗಾರದಾನೆ

ಮಂಗಳ ತಿಲಕದ ರಂಗನೆಂಬಾನೆ                    ||೧||


ಕೆಳದಿ ಗೋಪಿಯರೊಳು ಗೆಳೆತನದಾನೆ

ಸುಲಭದಿಂದಲಿಯುವ ಎಳೆಮರಿ ಆನೆ

ಘಲಿರುಘಲಿರುರವದಿ ನಲಿದಾಡೋ ಆನೆ

ಮಲೆತವರೆದೆಮ್ಯಾಲೆ ತುಳಿದಾಡೋ ಆನೆ         ||೨||


ನಳಿನಜಭವರಿಗೆ ಸಿಲುಕದ ಆನೆ

ಒಲವಿಂದ ಭಕುತರ ಸಲಹುವ ಆನೆ

ಹಲವು ಕವಿಗಳೀಗೆ ನಿಲುಕದ ಆನೆ

ಬಲ ಪ್ರಸನ್ವೆಂಕಟ ನಿಲಯನೆಂಬಾನೆ  


Post a Comment

أحدث أقدم