‘ಸಂಗೀತಾ’ ಕಂಪನಿಯ ಆಡಿಯೊ ಕ್ಯಾಸೆಟ್ಸ್ ಕೇಳುತ್ತ ಬೆಳೆದವರಾದರೆ ನೀವು ಈ ಸಾಕ್ಷ್ಯಚಿತ್ರವನ್ನು ನೋಡಲೇಬೇಕು!
ಒಂದುವೇಳೆ ಅಲ್ಲವಾದರೂ ನೋಡಬೇಕು. ಏಕೆಂದರೆ ಭಕ್ತಿಗೀತೆ, ಚಿತ್ರಗೀತೆ, ಜನಪದಗೀತೆ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ಹರಿಕಥೆ ಮುಂತಾದ ವಿವಿಧ ಪ್ರಕಾರಗಳ ಧ್ವನಿಸುರುಳಿಗಳಿಂದ ಕನ್ನಡ ಕೀರ್ತಿಪತಾಕೆಯನ್ನು ಬಾನೆತ್ತರದಲ್ಲಿ ಹಾರಿಸಿದ `ಸಂಗೀತಾ ಕ್ಯಾಸೆಟ್ಸ್'ನ ಎಚ್.ಎಂ. ಮಹೇಶ್ ಅವರ ಕಾರ್ಯಸಾಧನೆಯ ಅರಿವು ಕನ್ನಡಿಗರಿಗೆಲ್ಲ ಹೆಮ್ಮೆ.
ಅಪರೂಪದ ಮತ್ತು ಆಸಕ್ತಿಕರ ಮಾಹಿತಿಗಳನ್ನೆಲ್ಲ ಸೇರಿಸಿ ಸಮೃದ್ಧವಾಗಿ ಮಾಡಿದ್ದಾರೆ ಈ ಸಾಕ್ಷ್ಯಚಿತ್ರವನ್ನು. ಬಿಡುವು ಮಾಡಿಕೊಂಡು ತಪ್ಪದೇ ನೋಡಿ. ಸಂಗೀತ ರಸಾನುಭವದಲ್ಲಿ ಮಿಂದೆದ್ದ ಅನುಭವ ನಿಮ್ಮದಾಗುತ್ತದೆ.
(ಮಾಹಿತಿ ಹಂಚಿಕೊಂಡವರು: ಶ್ರೀವತ್ಸ ಜೋಷಿ, ವಾಷಿಂಗ್ಟನ್)
إرسال تعليق