ನಾನು ಇತ್ತೀಚೆಗೆ ಪೌರ್ನಾಚುರಲ್ ಉತ್ಪನ್ನಗಳ ಪೆಟ್ಟಿಗೆಯೊಂದನ್ನು ಖರೀದಿಸಿದೆ. ಅವರು ಜೇನುತುಪ್ಪದ ಗಾಜಿನ ಬಾಟಲಿಗಳನ್ನು ಸುಂದರವಾಗಿ ಪ್ಯಾಕ್ ಮಾಡಿದ್ದರು ಎಂದು ನಾನು ಹೇಳಲೇಬೇಕು !!
"ಫ್ಲೇವರ್ ಇನ್ಫ್ಯೂಸ್ಡ್ ಜೇನು" - ಇದು ನನಗೆ ಸಂಪೂರ್ಣವಾಗಿ ಹೊಸದು.. ನಾನು ಯಾವಾಗಲೂ ಕಚ್ಚಾ ಜೇನುತುಪ್ಪವನ್ನೆ ಬಳಸುತ್ತಿದ್ದೆ. ಜೇನುತುಪ್ಪವನ್ನು ಅಡುಗೆಗೆ ಬಳಸುವಲ್ಲಿ ಈ ಆಯಾಮವನ್ನು ನಾನು ಎಂದಿಗೂ ನೋಡಿರಲಿಲ್ಲ. ಹಾಗಾಗಿ ಈ ಬಗೆಯ ಜೇನುತುಪ್ಪದಲ್ಲಿ ಕರಿದ ತಿನಿಸಿನ ಪಾಕ ವಿಧಾನವನ್ನು ನಿಮ್ಮ ಜತೆ ಹಂಚಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ.
ಸೇವಿಸಿದಾಗ, ದಾಲ್ಚಿನ್ನಿಯ ಪರಿಮಳದೊಂದಿಗೆ ಜೇನುತುಪ್ಪದ ಸಿಹಿಯೂ ಬೆರೆತಿರುವುದು ಬಾಯಲ್ಲಿ ನೀರೂರಿಸುತ್ತದೆ. ನಿಮ್ಮ ಬಾಯಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಇರುವ ವಿಶಿಷ್ಟ ರುಚಿಯನ್ನು ನೀಡುತ್ತದೆ. ಜೇನುತಿಂದ ಬಳಿಕವೂ ಸ್ವಲ್ಪ ಹೊತ್ತು ಬಾಯಲ್ಲೇ ಉಳಿಯುವ ರುಚಿಯ ಛಾಯೆ ಖುಷಿ ನೀಡುತ್ತದೆ. ಇದರ ರುಚಿ ಮತ್ತು ಪರಿಮಳವನ್ನು ಅನುಭವಿಸಿಯೇ ತಿಳಿಯಬೇಕು.
ದಾಲ್ಚಿನ್ನಿ ತುಂಬಿದ ಜೇನುತುಪ್ಪದೊಂದಿಗೆ ಗೋಡಂಬಿಯನ್ನು ಹುರಿಯಲು ನಾನು ಪ್ರಯತ್ನಿಸಿದೆ.
ಈ ಅದ್ಭುತವಾದ ದಾಲ್ಚಿನ್ನಿ ತುಂಬಿದ ಜೇನುತುಪ್ಪವನ್ನು ಪೌರ್ನಾಚುರೇಲ್‌ನಿಂದ ಮಾಡಲು ಪ್ರಯತ್ನಿಸಿ. ಮತ್ತು ಅದು ನಿಮಗೆ ಹೇಗೆ ರುಚಿಸಿತು ಅಂತ ಅನುಭವವನ್ನು ಹಂಚಿಕೊಳ್ಳಿ.
-ದೀಪ್ತಿ ಗಣಪತಿ
إرسال تعليق