ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಕಾವ್ಯ-ಗಾಯನ: ಷಡ್ವೈರಿಗಳು - ಮುಕ್ತಕಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad
       ಕಾಮ 

       ~~~ 

ಕಾಮನೆಗೆ ಹಾಕು ಕಡಿವಾಣವನು ಎಲೆ ಮನುಜ 

ಧಾಮದೊಳು ನೆಮ್ಮದಿಯ ಹೊಂದಲಿದು ಸಹಜ |  

ನೇಮವನು ಮರೆಯದಿರೆ ಜೀವನದಿ ಅನುದಿನವು  

ಸೋಮಶೇಖರನೊಲಿಗು - ಪುಟ್ಟಕಂದ ||  

      ಕ್ರೋಧ 

      ~~~ 

ಕ್ರೋಧವನು ಸಹನೆಯಲಿ ಹಿಡಿತದೊಳಗಿರಿಸಿದರೆ 

ವ್ಯಾಧ ಬರೆದೊರೆದ ಕಾವ್ಯಫಲ ನಿನಗಕ್ಕು | 

ವೇದವೇ ವಶವಕ್ಕು ನಿನ್ನಲ್ಲಿ ಛಲವಿರಲು 

ಮಾಧವನ ಮರೆಯದಿರು - ಪುಟ್ಟಕಂದ || 

         ಲೋಭ 

        ~~ 

ಲೋಭವೆಂಬುದು ಹೊಲ್ಲ ನೀನದರ ತೊರೆದುಬಿಡು  

ಲಾಭವಿಲ್ಲದರಲ್ಲಿ ಬದುಕಿನೊಳು ನಿನಗೆ | 

ಶೋಭಿಸದು ಬದುಕಿನಲಿ ಒಳಿತು ಬಯಸುವ ಜನಕೆ 

ಈ ಭವವು ನಶ್ವರವು - ಪುಟ್ಟಕಂದ || 

         ಮೋಹ 

        ~~ 

ಮೋಹವೆಂಬುದು ಹೊಲ್ಲ ನಿಷ್ಕಾಮ ಮಾನವಗೆ  

ಸೋಹಮೆನೆ ದೇವರನು ಪೂಜಿಸುವ ಜನಕೆ | 

ದಾಹವಿರಬೇಕು ನಮ್ಮೊಳಗೆ ದೇವನೊಲುಮೆಗೆ

ಊಹನೆಗು ನಿಲುಕದಂತೆ - ಪುಟ್ಟಕಂದ || 

         ಮದ 

        ~~~ 

ಮದವೆಂದರದುವೆ ಅಹಮಿಕೆಯು ಜನಮಾನಸಕೆ  

ಮುದದಿಂದ ಪೇಳುವೆನು ಅದು ನಿನಗೆ ಹೊಲ್ಲ | 

ಹೃದಯದೊಳಗಿನ ಕದವ ತೆರೆಯದಿರು ನೀನದಕೆ 

ಸದರದಲಿ ನಾನೊರೆವೆ - ಪುಟ್ಟಕಂದ || 

          ಮತ್ಸರ 

        ~~~ 

ಮತ್ಸರವು ನಿನಗೇಕೆ ಕೆಡುವೆ ನೀನದರಿಂದ  

ಕುತ್ಸಿತವು ಮನುಜರನು ಸದೆಬಡಿವ ಕೇಡು | 

ದುಸ್ಸಹವು ಬುಧಜನರ ಕೂಟದಲಿ ಕರುಬುವಿಕೆ  

ವತ್ಸ ಪೇಳುವೆ ನಿನಗೆ - ಪುಟ್ಟಕಂದ || 

     ವಿ.ಬಿ.ಕುಳಮರ್ವ , ಕುಂಬ್ಳೆರಾಗಸಂಯೋಜನೆ ಮಾಡಿ ಹಾಡಿದವರು: ಗಮಕಿ ಕಲಾಶ್ರೀ ವಿದ್ಯಾಶಂಕರ ಮಂಡ್ಯ


Post a Comment

ನವೀನ ಹಳೆಯದು