ಎಲ್ಲರಿಗೂ ಕೂಡ ತಮ್ಮ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಅದಕ್ಕಾಗಿ ಅದೆಷ್ಟೇ ಖರ್ಚಾದರೂ ಭರಿಸಲು ತಯಾರಾಗಿರುತ್ತಾರೆ. ಒಟ್ಟಾರೆಯಾಗಿ ಸೌಂದರ್ಯವೇ ಸಂಪತ್ತು ಎಂಬಂತೆ ಜನರು ಬದುಕುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತಾವು ಧರಿಸುವ ಉಡುಪಿನಿಂದ ಹಿಡಿದು ಮುಖದ ಸೌಂದರ್ಯದವರೆಗೂ ಗಮನ ನೀಡುತ್ತಾರೆ.
ಮುಖ ಬೆಳ್ಳಗಾಗಲು ಅಥವಾ ಕಾಂತಿಯುತವಾಗಿ ಕಾಣಲು ನಾವು ಏನೆಲ್ಲಾ ಸೌಂದರ್ಯ ವರ್ಧಕಗಳನ್ನು ಉಪಯೋಗಿಸುತ್ತೇವೆ. ಆದರೆ ಕೆಲವರಿಗೆ ದಪ್ಪವಾದ ಹುಬ್ಬುಗಳಿರುವುದಿಲ್ಲ. ಅದಕ್ಕಾಗಿ ಪೆನ್ಸಿಲ್ ನ ಮೊರೆ ಹೋಗುತ್ತಾರೆ. ಅದಕ್ಕಿಂತ ಬೇರೆ ಏನಾದರೂ ಉಪಾಯ ಇದ್ದಿದ್ದರೆ ಉತ್ತಮ ಎಂದು ಎನಿಸುವುದು ಸಹಜ.
ಅದಕ್ಕಾಗಿ ಕೆಲವು ನೈಸರ್ಗಿಕ ವಿಧಾನಗಳು ಕೂಡ ಇದೆ. ಅದರಲ್ಲಿ ಮುಖ್ಯವಾಗಿ ತೈಲಗಳು ಪ್ರಮುಖ ಪಾತ್ರ ವಹಿಸುತ್ತದೆ.
ಹರಳೆಣ್ಣೆ: ಪ್ರೋಟೀನ್, ಜೀವಸತ್ವ, ಹಾಗೂ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹರಳೆಣ್ಣೆಯನ್ನು ಕ್ಯಾಸ್ಟರ್ ಆಯಿಲ್ ಎಂದು ಕರೆಯುತ್ತಾರೆ. ಇದನ್ನು ನೇರವಾಗಿ ಹುಬ್ಬುಗಳಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ನೀರಿನಲ್ಲಿ ತೊಳೆಯಬೇಕು. ಈ ತೈಲವನ್ನು ಪ್ರತಿದಿನ ಹುಬ್ಬುವಿಗೆ ಅನ್ವಯಿಸುವುದರಿಂದ ದಪ್ಪವಾದ ಹುಬ್ಬನ್ನು ಪಡೆದುಕೊಳ್ಳಬಹುದು.
ಆಲಿವ್ ಎಣ್ಣೆ: ಇದು ವಿಟಮಿನ್ ಇ ಮತ್ತು ಎ ಯನ್ನು ಹೊಂದಿರುತ್ತದೆ. ಕೇಶರಾಶಿಗೆ ಕೂಡ ಉತ್ತಮ ಔಷಧಿ ಆಗಿ ಇದು ಕೆಲಸ ಮಾಡುತ್ತದೆ. ಆಲಿವ್ ಎಣ್ಣೆಯನ್ನು ಹುಬ್ಬಿಗೆ ಹಾಕಿ ಸರಿಯಾಗಿ ಮಸಾಜ್ ಮಾಡಬೇಕು. ಒಂದೆರಡು ಗಂಟೆಗಳ ಕಾಲ ಅದನ್ನು ಇರಿಸಿ ನೀರು ಮತ್ತು ಫೇಸ್ ವಾಶ್ ನಿಂದ ತೊಳೆಯಬೇಕು. ದಿನಕ್ಕೆ ಒಂದು ಬಾರಿ ಮಾಡಿದರೆ ಮತ್ತು ಪ್ರತಿದಿನ ಮಾಡುತ್ತಾ ಹೋದರೆ ಹುಬ್ಬು ದಪ್ಪಗಾಗುತ್ತದೆ.
ತೆಂಗಿನ ಎಣ್ಣೆ ಕೂಡ ಇದಕ್ಕೆ ಉತ್ತಮ ಪರಿಣಾಮಕಾರಿ ತೈಲವಾಗಿದೆ. ಚಳಿಗಾಲದಲ್ಲಂತೂ ಚರ್ಮದ ಪೋಷಣೆಗೆ ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಈ ಎಲ್ಲಾ ತೈಲವನ್ನು ನಿರಂತರವಾಗಿ ಉಪಯೋಗಿಸುವುದರಿಂದ ಆಕರ್ಷಕವಾದ ಹುಬ್ಬು ನಮ್ಮದಾಗುತ್ತದೆ.
-ಅರ್ಪಿತಾ ಕುಂದರ್
Visit: Upayuktha Advertisements- A Dedicated place for Your Ads
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ