ಎಲ್ಲರಿಗೂ ತಿಳಿದಿರುವಂತೆ ಮನುಷ್ಯ ಭಾವನಾತ್ಮಕ ಜೀವಿ. ಹಾಗೆಯೇ ದುರಾಸೆ ಜೀವಿ. ಒಂದು ಸಿಕ್ಕರೆ ಮತ್ತೊಂದು. ಮತ್ತೊಂದು ಸಿಕ್ಕರೆ ಮಗದೊಂದು ಎಂದೇ ಬಯಸುತ್ತಾ ಬಯಸುತ್ತಾ ಕಾಲ ಕಳೆಯುವವನು. ದಿನದ ಎಲ್ಲಾ ಒತ್ತಡಗಳ ಮಧ್ಯೆ ಅದೇನೊ ತನಗಾಗಿ ಬೇಕೆಂದು ಹವಣಿಸುವವನು.
ದಿನ ಬೆಳಗಾದರೆ ಸಾಕು. ಅಂದು ಮಾಡಬೇಕಾಗಿರುವ ಕೆಲಸ ತಲೆ ಕೊರೆಯುತ್ತದೆ. ಜಂಜಾಟದ ಬದುಕಿನಲ್ಲಿ ವಿರಾಮಕ್ಕಾಗಿ ಮನಸ್ಸು ಹವಣಿಸುತ್ತದೆ. ಮನಸ್ತಾಪ, ಗಲಾಟೆ, ಬೇಸರ, ಮುಗಿಯದ ಕೆಲಸಗಳು, ಬೇಡದ ಕ್ಷುಲ್ಲಕ ಭಾವನೆಗಳು. ಇವೆಲ್ಲದರ ಮಧ್ಯೆ ಮನಸ್ಸು ಬಿಕೋ ಎನಿಸುತ್ತಿರುತ್ತದೆ.
ಪುಸ್ತಕ ಓದುವುದು, ಸಂಗೀತ ಕೇಳುವುದು ಒತ್ತಡಕ್ಕೆ ನೂಕಲ್ಪಟ್ಟ ಅದೆಷ್ಟೋ ಮನಸ್ಸುಗಳನ್ನು ಶಾಂತ ರೂಪಕ್ಕೆ ತರುತ್ತದೆ. ಮನಸ್ಸು ಮಾಯಾವಿ. ಆದರೆ ಅದರ ನಿಯಂತ್ರಣ ನಮ್ಮ ಕೈಯಲ್ಲಿದ್ದರೆ ಬಹುಶಃ ಮನಸ್ಸು ದುರ್ಬಲವಾಗದು. ಅದಕ್ಕೆ ಜೀವನದ ಬಹುಮುಖ್ಯ ಅವಿಭಾಜ್ಯ ಅಂಗ ನಮ್ಮ ಮನಸ್ಸು ಸಂತೆಯಾಗದಿರಲಿ. ಅದು ಉತ್ತಮ ವಿಚಾರವ ಮಂಥಿಸುವ ಆಗರವಾಗಲಿ ಅಲ್ಲವೇ...?
-ಅರ್ಪಿತಾ ಕುಂದರ್
Visit: Upayuktha Advertisements- A Dedicated place for Your Ads
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ