ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕೊರೋನಾ ಕಾಟಕ್ಕೂ ಕುಟುಕುವ ಜೇನಿಗೂ ಎತ್ತಣ ಸಂಬಂಧ? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಸಾಂಕ್ರಾಮಿಕದ ಕಾಲದಲ್ಲಿ ಜೇನಿಗೆ ಹೆಚ್ಚುತ್ತಿರುವ ಬೇಡಿಕೆ


ಪ್ರಕೃತಿ ನಮಗೆ ಸದಾ ವಿಸ್ಮಯಕಾರಿ. ಪ್ರತಿ ವಿಷಯದಲ್ಲೂ ಮಾನವ ಊಹಿಸಿಕೊಳ್ಳಲೂ ಆಗದಂತೆ ನವೀನತೆ ತೋರುವುದು ಸೃಷ್ಠಿಯ ವೈಶಿಷ್ಠ್ಯ. ಇಂತಹ ಪ್ರಕೃತಿಯಲ್ಲಿ ಮಾನವನರಿಯದ ಸಹಸ್ರ ಸಹಸ್ರ ವಿಸ್ಮಯಗಳಿವೆ. ಅವುಗಳಲ್ಲಿ ಜೇನುಹುಳುವು ಒಂದು. ಜೇನು ಹುಳುವಿನ ಜೀವನವೇ ಮಾನವ ಕುಲಕ್ಕೆ ಮೊದಲ ಪಾಠ. ಈ ಜೇನನ್ನು ಗಮನಿಸಿ ಮನುಷ್ಯ ಕಲಿಯುತ್ತಿರುವ ಪಾಠಗಳು ಅನೇಕ. ಇಂದಿಗೂ ಹಲವು ಸೋಜಿಗವನ್ನೊಳಗೊಂಡ ಜೇನು ಮಾನವ ಸಾಮರ್ಥ್ಯಕ್ಕಿಂತ ತಾವು ಹಲವು ಪಟ್ಟು ಉತ್ಕೃಷ್ಠವೆಂದು ನಿರೂಪಿಸುತ್ತಲೇ ಬಂದಿವೆ.    

ವಿಸ್ಮಯಕಾರಿ ಜೇನು:

ಹಲವಾರು ಔಷಧೀಯ ಗುಣಗಳ ಆಗರವಾಗಿರುವ ಜೇನುತುಪ್ಪ ಆಗತಾನೆ ಹುಟ್ಟಿದ ಮಗುವಿನಿಂದ ಹಿಡಿದು ಅಂತಿಮ ಹಂತದಲ್ಲಿರುವ ವೃದ್ದರವರೆಗೂ ಸರಳವಾಗಿ ಜೀರ್ಣವಾಗುವ ಸರಳ ನೈಸರ್ಗಿಕ ಪರಿಪೂರ್ಣ ಆಹಾರ.  

ಜೇನಿನಲ್ಲಿರುವ ಔಷಧೀಯ ಗುಣಗಳಿಂದಾಗಿ ಆಯುರ್ವೇದೀಯ ಚಿಕಿತ್ಸೆಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಜೇನು ಹಲವು ಖಾಯಿಲೆಗಳಿಗೆ ರಾಮಬಾಣವಾಗಿದೆ. 

ಜೇನಿನಲ್ಲಿರುವ ಪೋಷಕಾಂಶಗಳು ಮಾನವನ ದೇಹಕ್ಕೆ ಚೇತೋಹಾರಿಯಾಗಿವೆ.  ನಿರಂತರ ಜೇನು ಸೇವನೆಯಿಂದ ದೇಹ ಸೌಂದರ್ಯ ಹೆಚ್ಚುವುದರ ಜೊತೆಗೆ ಮುಖದ ಕಾಂತಿ ವೃದ್ದಿಸುತ್ತದೆ.  

ಕೊರೋನಾ ಮತ್ತು ಜೇನು:

ಪ್ರಪಂಚವನ್ನೇ ಆವರಿಸಿರುವ ಕೊರೊನಾ ರೋಗಕ್ಕೆ ದೇಹದ ನಿರೋದಕ ಶಕ್ತಿ  ಸೂಕ್ತ ಮದ್ದು ಎಂಬುದು ಎಲ್ಲರ ಅಭಿಪ್ರಾಯ. ನಿಯಮಿತ ಜೇನಿನ ಸೇವನೆಯಿಂದ ದೇಹವು ನಿರೋಧಕ ಶಕ್ತಿಯನ್ನು ಗಳಿಸುತ್ತದೆ ಎಂಬುದು ಅದರಲ್ಲಿರುವ ಹಲವಾರು ಗುಣಗಳಿಂದ ಸಾಬೀತಾಗಿದೆ. 

ಭಯಂಕರ ಕೊರೋನಾ ರೋಗವನ್ನು ಪತ್ತೆ ಹಚ್ಚಲು ನಾವು ಇಂದು ಆರ್‌ಟಿಪಿಸಿಆರ್, ಸಿ. ಟಿ. ಸ್ಕ್ಯಾನ್‌ನಂತಹ ಹಲವಾರು ಪರೀಕ್ಷೆಗಳಿಗೆ ಒಳಪಡಿಸುತ್ತಾರೆ. ಆದರೆ ಜೇನುಹುಳುಗಳ ಕಲಿಕಾ ಸಾಮರ್ಥ್ಯವನ್ನು ಅರಿಸ್ಟಾಟಲ್ ಕಾಲದಲ್ಲಿಯೇ ಅರಿತಿರುವ ವಿಜ್ಞಾನಿಗಳು ಇದೇ ಜ್ಞಾನವನ್ನು ಬಳಸಿ ನಾವು ಕೊರೋನಾ ಪತ್ತೆ ಹಚ್ಚಬಹುದು ಎಂದು ನಿರೂಪಿಸಿದಾಗ ವಿಶ್ವವೇ ಅಚ್ಚರಿಯಿಂದ ಜೇನುಹುಳುಗಳನ್ನು ಗಮನಿಸುತ್ತಿದೆ. 

ಕಲಿಕೆ ಹೇಗೆ?

ಕಲಿಕೆಗಾಗಿ ಆರಿಸಿದ ಸದೃಡ ಹಾಗು ಎಳೆಯ ಜೇನುಹುಳುಗಳನ್ನು ಪ್ರಯೋಗಾಲಯದಲ್ಲಿರಿಸಿ ಪ್ರತಿ ಬಾರಿ ಅವುಗಳಿಗೆ ವೈರಸ್ ವಾಸನೆಯನ್ನು ಅನುಭವಕ್ಕೆ ತಂದು ಆ ವಾಸನೆಗೆ ಅವು ಸ್ಪಂದಿಸಿದಾಗ ಅವುಗಳಿಗೆ ಬಹುಮಾನವಾಗಿ ಸಕ್ಕರೆ ದ್ರಾವಣ ನೀಡಲಾಯಿತು. ಇದನ್ನು ಹಲವಾರು ಬಾರಿ ಪುನರಾವರ್ತಿಸಿದಾಗ ಅವಗಳಿಗೆ ಕಲಿಕೆ ಮನನವಾಯಿತು, ನಂತರದಲ್ಲಿ ಕೇವಲ ವೈರಸ್ ವಾಸನೆ ಸುಳಿವು ಸಿಕ್ಕ ಕೂಡಲೇ ಅವುಗಳು ತಮ್ಮ ನಾಲಿಗೆ ಹೊರಚಾಚಲು ಪ್ರಾರಂಭಿಸಿದವು. ಈ ಸಂಶೋಧನೆಯನ್ನು ನೆದರ್ಲ್ಯಾಂಡಿನ ವಾಗೆನಿಂಜಿನ್ ವಿಶ್ವವಿದಾಲಯವು ಕೈಗೊಡಿದೆ.

ಜೇನಿನಲ್ಲಿ ಕಲಿಕೆಯ ಚರಿತ್ರೆ:

ಸುಮಾರು 20 ವರ್ಷಗಳ ಹಿಂದೆಯೇ ಜೇನುಗಳನ್ನು ಈ ರೀತಿ ತರಬೇತಿ ನೀಡಿ ಯುದ್ದಭೂಮಿಗಳಲ್ಲಿ ಶತ್ರುಗಳು ಅಡಗಿಸಿಟ್ಟಿರುವ ಬಾಂಬು ಹಾಗೂ ಡೈನಾಮೇಟ್ ಪತ್ತೆಹಚ್ಚಲು ಬಳಸಿಮೊಂಡಿರುವ ಉದಾಹರಣೆಗಳಿವೆ.

ಕೊನೆಯದಾಗಿ:

ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಜೇನಿಗೆ ಕರೋನಾ ಪ್ರಾರಂಭವಾದ ಮೇಲೆ ಬೇಡಿಕೆ ಹೆಚ್ಚಾಗುತ್ತಿದೆ. ಆರೋಗ್ಯದ ಮೇಲೆ ಕಾಳಜಿ ಹೆಚ್ಚಿದಂತೆಲ್ಲಾ ಶುದ್ದ ಜೇನು ಕೇಳುವವರ ಸಂಖ್ಯೆ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ಕೃಷಿಗೆ ಆಗಮಿಸುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಈ ಸಂದರ್ಭದಲ್ಲಿ ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ನೀಡುವ ಹಾಗೂ ಉದ್ಯೋಗ ಭರವಸೆ ನೀಡುವ ಏಕೈಕ ಕೃಷಿ ಉಪಕಸುಬು ಜೇನುಕೃಷಿಯೆಂಬ ಏಕೈಕ ಆಶಾಕಿರಣ.

-ಡಾ. ಪಿ. ಆರ್. ಬದರಿಪ್ರಸಾದ್

ಸಹಾಯಕ ಪ್ರಾಧ್ಯಾಪಕರು

ಕೃಷಿ ಮಹಾವಿದ್ಯಾಲಯ, ಗಂಗಾವತಿ 

Tags: Honey bee, Bee Keeping, ಜೇನು ಸಾಕಣೆ, ಜೇನ್ನೊಣ, ಕೊರೊನಾ


Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

ನವೀನ ಹಳೆಯದು