ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅಭಿಮತ: ಕೋವಿಡ್ ಎರಡನೇ ಅಲೆ ತಗ್ಗಿದರೂ ಸ್ವಯಂ ಶಿಸ್ತು- ನಿರ್ಬಂಧಗಳು ಕುಗ್ಗಬಾರದು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ದೇಶದಲ್ಲಿ, ರಾಜ್ಯದಲ್ಲಿ ಕೊರೊನಾ ಭಾರೀ ಇಳಿಕೆ- ಈ ಸುದ್ದಿ ಹೆಚ್ಚು ಅಪಾಯಕಾರಿ. ಯಾಕೆಂದರೆ ಇದನ್ನೇ ಸಿಹಿ ಸುದ್ದಿ ಅಂದು ಕೊಂಡು ಜೂನ್ 7ರ ಅನಂತರ ಸರಕಾರ ಲಾಕ್ ಡೌನ್, ಜನತಾ ಕರ್ಫ್ಯೂ ಎಲ್ಲವನ್ನು ಒಮ್ಮೆಲೇ ಹಿಂದೆಗೆದು ಮತ್ತೆ ಅದೇ ಅಶಿಸ್ತಿನ ಕೂಪಕ್ಕೆ ತಳ್ಳುವಂತಹ ನಿಧಾ೯ರ ತೆಗೆದುಕೊಂಡರೂ ಆಶ್ಚರ್ಯವಿಲ್ಲ. ನಮ್ಮ ಮನಸ್ಸುಗಳು ಅಷ್ಟೇ.

ಇಲ್ಲಿಗೆ ಎರಡನೆಯ ಅಲೆ ಮುಗಿಯಿತು; ಮೂರನೇ ಅಲೆಗೆ ತಯಾರಾಗೇೂಣ ಅನ್ನುವ ಹಾಗೇ ಜನರ ತಿರುಗಾಟ-ಹಾರಾಟ, ಚುನಾವಣೆ, ಸಭೆ-ಸಮಾರಂಭ ಮದುವೆ ಮುಂಜಿ ಎಲ್ಲದಕ್ಕೂ ತೆರೆದ ಬಾಗಿಲು.

ಜೂನ್ 7ರ ನಂತರದ ಕಥೆಯೇನು?

ಇನ್ನು ನಮ್ಮ ಮುಂದಿರುವ ದೊಡ್ಡ ಸವಾಲಿನ ಪ್ರಶ್ನೆ ಅಂದರೆ ಕೊರೊನಾ ಸ್ವಲ್ಪ ಮಟ್ಟಿಗೆ ಅಂಕೆ ಸಂಖ್ಯೆಯಲ್ಲಿ ಇಳಿದರೂ ಕೂಡಾ ಮುಂದಿನ ಹೆಜ್ಜೆಯನ್ನು ಅತ್ಯಂತ ಜಾಗೃತಿಯಲ್ಲಿ ಇಡಬೇಕಾದದ್ದೂ ಅತೀ ಅಗತ್ಯ. ಹಿಂದಿನ ಮೊದಲ ಅಲೆ ನಮಗೆ ಪಾಠವಾಗ ಬೇಕು. ಈ ನಿಟ್ಟಿನಲ್ಲಿ ಸರಕಾರ ತೆಗೆದು ಕೊಳ್ಳಬೇಕಾದ ತೀಮಾ೯ನ ಹೇಗಿರ ಬೇಕು. ಜನ ಸಾಮಾನ್ಯರಾದ ನಾವು ಸ್ವಲ್ಪ ಆಲೇೂಚನೆ ಮಾಡಬೇಕಾದದ್ದು ಸಕಾಲ.

1. ಒಂದಂತೂ ಸತ್ಯ ಸೊಂಕು ಎಷ್ಟೇ ಪ್ರಮಾಣದಲ್ಲಿ ಇಳಿದರೂ ಕೂಡಾ ಇದು ಶೇ.20ಕ್ಕಿಂತ ಕಡಿಮೆಯಾಗಲೂ ಸಾಧ್ಯವೇ  ಇಲ್ಲ. ಈ ಶೇ.20ರಷ್ಟನ್ನು ಮಗ್ಗುಲಲ್ಲಿ ಇಟ್ಟು ಕೊಂಡು ಸುಖ ನಿದ್ರೆ ಮಾಡುತ್ತೇವೆ ಅಂದರೆ ಇದೇ ಮೂರನೇ ಅಲೆಯಲ್ಲಿ ಚಿರ ನಿದ್ರೆಗೆ ದಾರಿ ಮಾಡಬಹುದೆಂಬ ಎಚ್ಚರ ನಮಗೆ ಇರಲೇ ಬೇಕು.

2. ಹಾಗೆಂದ ಮಾತ್ರಕ್ಕೆ ಮತ್ತೆ ಇದೇ ಲಾಕ್ ಡೌನ್ ಹೇರಿ ಜನರ ಆಥಿ೯ಕ ಚಟುವಟಿಕೆಗಳಿಗೆ ತಡೆಹಾಕುವುದು ಕೂಡಾ ಜನರ ಆಥಿ೯ಕ ದೃಷ್ಟಿಯಿಂದ ಹಿತಕರವಲ್ಲದ ನಿಧಾ೯ರವೂ ಆಗ ಬಹುದು.

3. ಹಾಗಾದರೆ ಜೂನ್ 7ರ ನಂತರದಲ್ಲಿ ಸರ್ಕಾರ ತೆಗೆದುಕೊಳ್ಳಬೇಕಾದ ನಿರ್ಬಂಧದ ನಿರ್ಧಾರಗಳು ಹೇಗಿರಬೇಕು ಅಂದರೆ-

(ಅ). ಪ್ರತಿ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಮಾಡಿಕೊಟ್ಟು ಪ್ರತಿ ಗ್ರಾಹಕರು ಮಾಸ್ಕ್‌ ಧರಿಸಿ ಬರಲೇಬೇಕು. ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲೇಬೇಕು. ಇದನ್ನು ಪಾಲಿಸದ ಅಂಗಡಿಗಳು ಮತ್ತು ಅವರ ವ್ಯವಹಾರವನ್ನು ಕೊರೊನ ಸಂಪೂರ್ಣ ಮುಗಿಯುವ ತನಕ ಮುಚ್ಚಿ ಬಿಡುವ ಕಠಿಣ ನಿಯಮ ಜ್ಯಾರಿ ಮಾಡಿ ಅನುಷ್ಠಾನಗೊಳಿಸಬೇಕು.

(ಆ)ಇದನ್ನು ಪರಿಶೀಲಿಸಲು ಹಳ್ಳಿ ನಗರ ಪ್ರದೇಶಗಳಲ್ಲಿ ಕಾವಲು ಪಡೆ, ಸಂಚಾರಿ ಪಡೆ (flying squared) ನೇಮಿಸಬೇಕು. ಇದರಲ್ಲಿ ಸರಕಾರದ ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ಸೇರಿಸಿ ಕೊಳ್ಳ ಬೇಕು. ಪೊಲೀಸ್ ಇಲಾಖೆಯ ಸಹಾಯವಿರಬೇಕು. (ಚುನಾವಣಾ ಕಾಲದಲ್ಲಿ ನಡೆಸುವ ಬಂದೋಬಸ್ತಿನ ಹಾಗೆ) ಇವರ ಮೇಲ್ ವಿಚಾರಣೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ನಡೆಸಬೇಕು. ಇದು ಹೆಚ್ಚು ಪಾರದಶ೯ಕವೂ ಸಾವ೯ಜನಿಕರಿಗೂ ತಿಳಿಯುವಂತಿರ ಬೇಕು. ಇದರಿಂದ ಜನರಲ್ಲಿ ಜಾಗೃತಿ ಅರಿವು ಮೂಡುತ್ತದೆ.

3. ಬಸ್ಸು ರೃೆಲುಗಳಂತಹ ಸಾವ೯ಜನಿಕ ಸಾರಿಗೆ ವ್ಯವಸ್ಥೆಯಲ್ಲಿ 50% ಪ್ರಯಾಣಿಕರಿಗೆ ಕೂತು ತಿರುಗಾಡಲೂ ಅವಕಾಶ ಮಾಡಿಕೊಡಬೇಕು. ಖಾಸಗಿ ವಾಹನಗಳಲ್ಲಿ ಕೂಡಾ ಇದೇ ನಿಯಮ ಪಾಲಿಸಬೇಕು. ತಪ್ಪಿದಲ್ಲಿ ಪರವಾನಿಗೆ ರದ್ದು ಮಾಡುವ ಕಠಿಣ ಕ್ರಮ.

4. ಶಾಲಾ ಕಾಲೇಜುಗಳನ್ನು ಸದ್ಯಕ್ಕೆ on line ನಲ್ಲಿ ನಡೆಸುವುದು ಹೆಚ್ಚು ಸೂಕ್ತ. ಸಿನಿಮಾ ಮಂದಿರ ಕೂಡಾ ಸದ್ಯಕ್ಕೆ ತೆರೆಯುವುದು ಸೂಕ್ತವಲ್ಲ.

5. ಕೇೂವಿಡ್ ಪರೀಕ್ಷೆ  ಫಲಿತಾಂಶ ಚಿಕಿತ್ಸೆ ಪ್ರಮಾಣವನ್ನು ಇನ್ನಷ್ಟು ತೀವ್ರಗೊಳಿಸ ಬೇಕು. ಇಂದಿನ ತರದಲ್ಲಿ ಇಲ್ಲಿ ಎಲ್ಲಿಯೂ ನಿಲ೯ಕ್ಷ್ಯ ತೇೂರಿಸಲೇಬಾರದು

6. ಸಾವ೯ಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಜನ ಸೇರದಂತಹ ನಿಯಮ ಜ್ಯಾರಿ ಮಾಡಿ ಅದೇ ಕಾವಲು ಪಡೆ ವೀಕ್ಷಣೆ ತಂಡಗಳಿಗೆ ಜವಾಬ್ದಾರಿ ನೀಡಬೇಕು.

ಒಟ್ಟಿನಲ್ಲಿ ಈ ಎಲ್ಲಾ ಷರತ್ತು ನಿಯಮಗಳನ್ನು ಚಾಚು ತಪ್ಪದೇ ಅಳವಡಿಸಿದ್ದೇ ಆದಲ್ಲಿ ನಮ್ಮನಿಮ್ಮ ಆರೇೂಗ್ಯ ಆರ್ಥಿಕ ಬದುಕು ಮತ್ತೆ ಸುಸ್ಥಿರವಾಗಲೂ ಸಾಧ್ಯ. ಇಲ್ಲವಾದರೆ ಮತ್ತೆ ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ಸ್ಥಿತಿಗೆ ಬಂದರೂ ಆಶ್ಚರ್ಯ ಪಡ ಬೇಕಾಗಿಲ್ಲ. ಆಂತರ್ಯ ಜಾಗೃತಿಯೇ ಮನುಕುಲದ ರಕ್ಷಣೆ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು