ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಮನಸಿನಲಿ ನಿಂತಿರಲು ಮಂಜುನಾಥ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಆಲಿಸಿ: ಭಕ್ತಿಗೀತೆ- ಮನಸಿನಲಿ ನಿಂತಿರಲು ಮಂಜುನಾಥ

ಗಾಯಕರು: ಡಾ. ಎಸ್‌.ಪಿ ಬಾಲಸುಬ್ರಹ್ಮಣ್ಯಂಮನಸ್ಸಿನಲ್ಲಿ ನಿಂತಿರಲು ಮಂಜುನಾಥ
ಮಂಜಿನೊಲು ಮರೆಯುವುದು ಎಲ್ಲ ಕ್ಲೇಶ
                                    ||ಮನಸ್ಸಿನಲಿ||
ಮನೆಯೆ ಒಂದು ಪುಣ್ಯದ ಧರ್ಮಸ್ಥಳ||2||
ಮುದದಿಂದ ಒಲಿದಿರಲು ಮಂಜೇಶ
                                    ||ಮನಸ್ಸಿನಲಿ||

ಸತ್ಯ ಧರ್ಮ ನಿಷ್ಠೆಯಿಂದ ಪಾಲಿಸುವಾಗ
ಭಕ್ತಿಯಿಂದ ದೈವ ಪೂಜೆ ಮಾಡಿದಂತೆ
                                          ||ಸತ್ಯ||
ಅನ್ನದಾನ ವಸ್ತ್ರದಾನ ಮಾಡುವಾಗ||2||
ಧರ್ಮಸ್ಥಳ ಪ್ರಭು ದರ್ಶನ ಆದಂತೆ
                                   ||ಮನಸ್ಸಿನಲಿ||

ಶುಭ್ರವಾದ ಮನಸನು ಪಡೆದಿರುವಾಗ
ನೇತ್ರಾವತಿ ನೀರಸ್ನಾನ ಮಾಡಿದಂತೆ
                                  ||ಮನಸ್ಸಿನಲಿ||
ಆತ್ಮಸಾಕ್ಷಿ ಗಂಜಿಬಾಳ ಕಲೆಯುವಾಗ||2||
ಧರ್ಮಸ್ಥಳ ಯಾತ್ರೆಯ ಮಾಡಿದಂತೆ
                                  ||ಮನಸ್ಸಿನಲಿ||

ನೊಂದವರಿಗೆ ಸೇವೆಯನು ಮಾಡಿದಾಗ
ಮಂಜುನಾಥ ಸೇವೆಯನು ಮಾಡಿದಂತೆ
                               ||ನೊಂದವರಿಗೆ||
ತ್ಯಾಗವೆಂಬ ರಾಗವನ್ನು ಹಾಡಿದಾಗ||2||
ಮಂಜುನಾಥ ನಿಮಗೆ ಒಲಿವನಂತೆ
                                 ||ಮನಸ್ಸಿನಲಿ||

Post a Comment

ನವೀನ ಹಳೆಯದು