ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಈ ಕತೆ ಕೇಳಲು ದೊರೆವುದು ಜನರಿಗೆ ದೋಷದ ಪರಿಹಾರ... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



Photo courtesy: Namma Kudla


ಒಂದು - ನಮ್ಮ ನಿಮ್ಮ ಕತೆ!!

ಗಣಪತಿ ಹಬ್ಬದ ದಿನ ರಾತ್ರಿ ಗಣಪತಿ ಬಿಡುವ ಕಾರ್ಯಕ್ರಮ ಎಲ್ಲರ ಮನೆಯಲ್ಲಿ.  ನಾವು ಅವರ ಮನೆಗೆ, ಅವರು ನಮ್ಮನೆಗೆ.  ಹೀಗೆ ಹೋಗುವಾಗ ಯಾವುದೋ ಗುಂಗಿನಲ್ಲಿ ಅಚಾನಕ್ ಆಗಿ ಕರೆಂಟ್ ಕಂಬದ ಆಚೆಕಡೆ, ತೆಂಗಿನ ಮರದ ಗರಿಗಳ ಸಂಧಿಯಿಂದ ಚೌತಿ ಚಂದ್ರ ಕಣ್ಣಿಗೆ ಬೀಳ್ತಾನೆ!!

ಶಾಪ ಗ್ಯಾರಂಟಿ!!

ಏನು?

ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಕಳ್ಳತನದ ಅಪವಾದ ಬರಲಿ!!

'ಭಾದ್ರಪದ ಶುಕ್ಲದ ಚೌತಿಯಂದು

ಚಂದಿರನ ನೋಡಿದರೆ ಅಪವಾದ ತಪ್ಪದು..'

**

ಎರಡು - ಕಾರಣ ಕತೆ!!

ಗಣೇಶ ಚತುರ್ಥಿಯ ಹಬ್ಬದಂದು ಪೂಜೆ ಸ್ವೀಕರಿಸಿ ಭಕ್ತರು ಕೊಟ್ಟ ಕಡುಬು, ಚಕ್ಕಲಿ, ಪಾಯಸಾದಿ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಬಾಸ್ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕ!! ಒಂದು ಯು ಟರ್ನ್‌ನಲ್ಲಿ ಲೋಡ್ ಜಾಸ್ತಿಯಾಯ್ತು ಬ್ರೇಕ್ ಹಿಡೀಲಿಲ್ಲ!!  ಹೊಟ್ಟೆಯ ಭಾರದಿಂದ ಗಣಪ ಆಯ ತಪ್ಪಿ ಬಿದ್ದ. ಹೊಟ್ಟೆ ಒಡೆದು ಹೋಯ್ತು!! ಅಲ್ಲೇ ಇದ್ದ ಒಂದು ಸರ್ಪವನ್ನು ಹೊಟ್ಟೆಗೆ ಬಿಗಿದು ಗಂಟು ಹಾಕಿ ಸರಿ ಮಾಡಿಕೊಂಡನಂತೆ.  ಬಂದು ಕೈ ಹಿಡಿದು ಸಮಾಧಾನ ಮಾಡಬೇಕಿದ್ದ  ಗಗನ ಸಂಚಾರಿ ಚಂದ್ರ ಅಕ್ಸಿಡೆಂಟ್ ಆದಾಗ ಹತ್ತಿರ ಬಾರದೆ ಮೊಬೈಲ್‌ನಲ್ಲಿ ವೀಡಿಯೋ ಮಾಡುವವರ ತರಹ ದೂರವೇ ನಿಂತುಕೊಂಡ!! ಅಷ್ಟೇ ಆಗಿದ್ರೆ ಕತೆ ವಿಶೇಷ ಇರ್ತಿರಲಿಲ್ಲ!! ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ!! ಅದರಿಂದ ಗಣಪನಿಗೆ ಸಿಟ್ಟು ಬಂತು.  ಕತೆ ಕ್ಲೈಮ್ಯಾಕ್ಸಿಗೆ ಬಂತು!! ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ  ಅಂತ ಶಪಿಸಿದನಂತೆ!! ಆ ಕತೆ ಅಲ್ಲಿಗೆ ಮುಗಿಯಿತು, ಶುಭಂ ಆಗದೆ!!

ಕಡುಬು, ಚಕ್ಕಲಿ, ಮೋದಕ ಎಲ್ಲ ತಿಂದಿದ್ದು ಗಣಪ, ನಕ್ಕವನು ಚಂದ್ರ, ಆದರೆ, ಶಾಪ ಮಾತ್ರ ಚಂದ್ರನನ್ನು ನೋಡಿದವರಿಗೆ!!

*

ಮೂರು - ಪರಿಹಾರದ ಕತೆ!!

ಒಂದ್ಸಲ ಕೃಷ್ಣ ಅದೇ ಬಾದ್ರಪದ ಶುಕ್ಲದ ಚೌತಿಯ ದಿನ ಈ ಚಂದ್ರನನ್ನು ನೋಡಿ ಬಿಟ್ಟ!!

ಮತ್ತೊಂದು ಕತೆ ಶುರುವಾಯಿತು!!

ಬಾಲ್ಯದಲ್ಲಿ ಬೆಣ್ಣೆ ಕದ್ದು ಮಕ್ಕಳಾಟ ಮಾಡುತ್ತಿದ್ದ ಕೃಷ್ಣನಿಗೆ ದೊಡ್ಡವನಾದ ಮೇಲೆ ಒಂದು ಕ್ರಿಮಿನಲ್ ಕಳ್ಳತನದ ಅಪಾದನೆ ಬಂತು!!

ಚೌತಿಯ ಚಂದ್ರನ ದರುಶನದಿಂದ ಕಾಡಿತು ಕೃಷ್ಣಗೆ ಅಪವಾದ.

ಏನು ಅಪವಾದದ ಆ ಕತೆ!? ಅಪವಾದ ಪರಿಹಾರ ಹೇಗಾಯ್ತು? ನಿರಪರಾಧಿ ಅಂತ ತೀರ್ಮಾನ ಆಗಿದ್ದು ಹೇಗೆ? 

ಈ ಎಲ್ಲ ಪ್ರೆಶ್ನೆಗಳಿಗೆ ಕೆಳಗಡೆ ಇರುವ ಲಿಂಕ್ ಒತ್ತಿ ತಾಳಮದ್ದಳೆ 'ಜಾಂಬವತಿ ಕಲ್ಯಾಣ' ಅಥವಾ 'ಶಮಂತಕೋಪಾಖ್ಯಾನ' ಕೇಳಿ!!

ನಾವು ನೀವು ಅವತ್ತು ಚೌತಿಯ ದಿನ ಆಕಸ್ಮಿಕವಾಗಿ ಚಂದ್ರನನ್ನು ನೋಡಿದ್ವಲ್ಲಾ......! ಅದಕ್ಕೂ ಶಾಸ್ತ್ರೀಯ ಪರಿಹಾರ ಈ ಜಾಂಬವತಿ ಕಲ್ಯಾಣ  ಕೇಳುವುದು!! 

ಕೇಸ್ ಇಲ್ಲ, ಎಫ್.ಐ.ಆರ್.ಇಲ್ಲ, ಬೇಲ್ ಬೇಡ, ವರ್ಷಾನುಗಟ್ಟಳೆ ಕೋರ್ಟ್ ಇಲ್ಲ!! ಸರಳ ಪರಿಹಾರ:

ಈ ಕತೆ ಕೇಳಲು ದೊರೆವುದು ಜನರಿಗೆ ದೋಷದ ಪರಿಹಾರ.

ಕೇಳಲು ಯೂಟೂಬ್ ಲಿಂಕ್ ಅಕ್ಷತೆ:


https://youtu.be/EmAwi9_uSmE


ತಾಳಮದ್ದಲೆ ಕಲಾವಿದರು:

ಮನೆಯಂಗಳದಲ್ಲಿ ತಾಳಮದ್ದಲೆ

ಸ್ಥಳ : ಕುಮರಿಗದ್ದೆ - ಸಿಗದಾಳ್

ದಿನಾಂಕ 11/5/2016

ಪ್ರಸಂಗ:  ಜಾಂಬವತಿ ಕಲ್ಯಾಣ

ಭಾಗವತರು : ಪ್ರಸನ್ನ ಭಟ್, ಬಾಳಕಲ್ ಮತ್ತು ಶಿವಶಂಕರ್ ಹೆಚ್.ಜಿ.

ಮದ್ದಲೆ: ಎನ್.ಜಿ.ಹೆಗ್ಗಡೆ, ಯಲ್ಲಾಪುರ ಮತ್ತು ಹೆಚ್.ಎಸ್.ಗಣೇಶ್‌ಮೂರ್ತಿ, ಹುಲುಗಾರು

ಕೃಷ್ಣ: ವಾಸುದೇವ ರಂಗಭಟ್, ಮಧೂರು,

ಕೃಷ್ಣ : ಹರೀಶ್ ಬೋಳಂತಿಮೊಗರು

ಜಾಂಬವಂತ : ಗಣಪತಿ ಭಟ್, ಸಂಕದಗುಂಡಿ,

ಸತ್ರಾರ್ಜಿತ : ನಿಸ್ರಾಣಿ ರಾಮಚಂದ್ರ ಹೆಗಡೆ, ನಿಸ್ರಾಣಿ

ಬಲರಾಮ  : ಎಂ.ಎಸ್.ಜನಾರ್ದನ, ಮಂಡಗಾರು

ಬಲರಾಮ : ಎಂ.ಎಲ್.ರಾಮಚಂದ್ರ ರಾವ್, ಕುಮರಿಗದ್ದೆ

ನಾರದ : ಸೀತಾರಾಮಚಂದು ಹೆಗಡೆ, ಶಿರಸಿ

ನಾರದ : ಅರವಿಂದ ಸಿಗದಾಳ್, ಮೇಲುಕೊಪ್ಪ

ವನ ಪಾಲಕ : ಜಿ.ಆರ್.ಅಶೋಕ, ಕುಮರಿಗದ್ದೆ.

*

ಕಾರ್ಯ ಸಿದ್ದಿಯ, ಒಳ್ಳೆ ಬುದ್ದಿಯ ಕೊಡುತಿರಲಿ ಎಲ್ಲರಿಗೂ ಹರಸುತ ಆ ಹರಸುತ!!

ಗಣಪತಿ ಒಲುಮೆಗೆ ಪಾತ್ತರಾಗಲು ಇದುವೆ ಸುಲಭ ವಿಧಾನ..!!

ಕೇಳಿದ ಮೇಲೆ ಒಂದು ಪ್ರತಿಕ್ರಿಯೆ ಕೊಡಿ.

ನಮಸ್ಕಾರಗಳು

-ಅರವಿಂದ ಸಿಗದಾಳ್, ಮೇಲುಕೊಪ್ಪ

Post a Comment

ನವೀನ ಹಳೆಯದು