ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮೈಸೂರು: ಲಾ ಗೈಡ್ ಬಳಗದಿಂದ ಲಾಕ್‌ಡೌನ್‌ ನೆರವು, 500 ವಕೀಲರಿಗೆ ದಿನಸಿ ಕಿಟ್‌ ವಿತರಣೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಮೈಸೂರು: ಕೊರೊನಾ ಮಹಾಮಾರಿ ಹಾವಳಿಯಿಂದಾಗಿ ಮೈಸೂರಿನಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್, ಕಠಿಣ ನಿಯಮಗಳ ಕಾರಣ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇದಕ್ಕೆ ವಕೀಲ ಸಮುದಾಯ ಸಹ ಹೊರತಾಗಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ ವಕೀಲರಿಗೆ ಮೈಸೂರಿನ ಲಾ ಗೈಡ್ ಪತ್ರಿಕಾ ಬಳಗದಿಂದ ಸಹಾಯ ಹಸ್ತ ನೀಡಲಾಯಿತು.

ಮೈಸೂರಿನ ಏರ್‌ಲೈನ್ಸ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾ ಗೈಡ್ ಕಾನೂನು ಪತ್ರಿಕೆ ಸಂಪಾದಕ‌ ವಕೀಲರು ಆದ ಹೆಚ್ ಎನ್ ವೆಂಕಟೇಶ್‌ ಅವರ ವತಿಯಿಂದ 500 ಜನ ವಕೀಲರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಅಕ್ಕಿ ಗೋಧಿ ರವೆ ಸಕ್ಕರೆ ಅಡುಗೆ ಎಣ್ಣೆ ಸೇರಿದಂತೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಒಳಗೊಂಡ ದಿನಸಿ‌ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್, ವಕೀಲರಾದ ಹರೀಶ್ ಹೆಗ್ಡೆ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಜಿ ವಿ ರಾಮಮೂರ್ತಿ ಹಿರಿಯ ವಕೀಲರಾದ ಎಸ್ ಲೋಕೇಶ್ ಗಿರಿಜೇಶ್ ಹೊಯ್ಸಳ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಇದೇ ವೇಳೆ ಮಾತನಾಡಿದ ಸಂಸದ ಪ್ರತಾಪಸಿಂಹ ಲಾ ಗೈಡ್ ಕಾನೂನು ಮಾಸಪತ್ರಿಕೆಯ ಬಳಗದ ಕಾರ್ಯವನ್ನು ಶ್ಲಾಘಿಸಿದರು. ಎಲ್ಲಾ ವಕೀಲರು ಸ್ಥಿತಿವಂತರಾಗಿರುವುದಿಲ್ಲ. ಲಾಕ್‌ಡೌನ್‌ನಿಂದ ಎಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸಿರುವುದು ಅತ್ಯಂತ ಮಾನವೀಕ ಕಳಕಳಿಯ ವಿಚಾರವೆಂದು ತಿಳಿಸಿದರು.

ತಮ್ಮ ಸಹದ್ಯೋಗಿಗಳ ನೆರವಿಗೆ ಧಾವಿಸಿದ ಲಾಗೈಡ್ ಕಾನೂನು ಮಾಸಪತ್ರಿಕೆ ಸಂಪಾದಕರು ವಕೀಲರು ಆದ ಹೆಚ್ ಎನ್ ವೆಂಕಟೇಶ್ ಅವರಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಹಾಗೂ ನೊಂದವರಿಗೆ ಸಹಾಯ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.  

ಇದೇ ವೇಳೆ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನನ್ನ ಕೆರಿಯರ್‌ನಲ್ಲೇ ಇದೊಂದು ಮರೆಯಲಾಗದ ಕಾರ್ಯಕ್ರಮ. ಇನ್ನು 25 ರಿಂದ 30 ವರ್ಷ ನಾನು ಸೇವೆಯಲ್ಲಿರುತ್ತೇನೆ. ಆದರೆ ಈ ಕಾರ್ಯಕ್ರಮ ಸದಾ ನನ್ನ ನೆನಪಿನಲ್ಲಿರುತ್ತದೆ ಎಂದು ತಿಳಿಸಿದರು. ನನ್ನ ಸೇವಾ ಅವಧಿಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಇಂತಹ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳು ಹಣವಿರುವವರು ಸಹಾಯ ಮಾಡುತ್ತಾರೆ. ಆದರೆ ಮೈಸೂರಿನಲ್ಲಿ ಎಲ್ಲರೂ ಪರಸ್ಪರ ಸಹಾಯಕ್ಕೆ ಧಾವಿಸುತ್ತಾರೆ. ಇಂತಹ ಮೈಸೂರಿನಲ್ಲಿ ನನಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಮೈಸೂರು ಹಾಗೂ ಇಲ್ಲಿನ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಪಿ ಡಾ ಎ ಎನ್ ಪ್ರಕಾಶ್ ಗೌಡ ಮಾತನಾಡಿ, ಲಾಗೈಡ್ ವೆಂಕಟೇಶ್ ಅವರು ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ವಕೀಲ ಸಮುದಾಯದ ಬಗ್ಗೆ ವಿಶೇಷ ಕಾಳಜಿ ಪ್ರೀತಿ ಹೊಂದಿದ್ದರೆ. ವಕೀಲರಿಗಾಗಿಯೇ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಹ ಅವರು ಸಾಕಷ್ಟು ಜನರಿಗೆ ನೆರವಾಗಿದ್ದಾರೆ. ನಾನು ಹಿಂದೆ ಸಹಾ ಅವರ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ನಿಜಕ್ಕೂ ಅವರ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

Tags: Mysure, Lockdown, Food kits distribution, ಲಾಕ್‌ಡೌನ್‌ ನೆರವು, ಮೈಸೂರು

Post a Comment

أحدث أقدم