ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮೋದಿ ಪ್ರಧಾನಿಯಾಗಿ 7 ವರ್ಷ: ಶಾಸಕ ಡಾ.ಭರತ್ ಶೆಟ್ಟಿಯವರಿಂದ ಸೇವಾಹೀ ಸಂಘಟನೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಮಂಗಳೂರು: ವಿಶ್ವಗುರು ಭಾರತದ ದೃಷ್ಟಿಯಿಂದ ದೇಶದ ಮತದಾರರ ಪ್ರಭು ಸ್ವಾಭಿಮಾನಿ ಭಾರತಕ್ಕಾಗಿ ನರೇಂದ್ರ ದಾಮೋದರ ದಾಸ್ ಮೋದಿಯವರನ್ನು ಪ್ರಧಾನಿಯನ್ನಾಗಿಸಿ ಮೇ 30ಕ್ಕೆ 7 ವರ್ಷ ಪೂರ್ಣಗೊಂಡಿದೆ. ಈ ಸಂತಸದ ಸಂಭ್ರಮವನ್ನು ಇಡೀ ದೇಶದ ರಾಷ್ಟ್ರಾಭಿಮಾನಿ ಬಂಧುಗಳು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಜೀಯವರ ಸೇವಾಹೀ ಸಂಘಟನಾ ಎಂಬ ಮಂತ್ರದೊಂದಿಗೆ ಮಂಗಳೂರು ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಯವರು ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಮಂಡಲದ ಅಧ್ಯಕ್ಷರ ಹಾಗೂ ನೀರುಮಾರ್ಗ ಮಹಾ ಶಕ್ತಿಕೇಂದ್ರದ ಪ್ರಮುಖರ ಸೂಚನೆಯಂತೆ ನೀರುಮಾರ್ಗ ಗ್ರಾಮದ ವ್ಯಾಪ್ತಿಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲಾಯಿತು. ಬೂತ್ ಸಂಖ್ಯೆ 230-231-232-233-234-235 ರಲ್ಲಿ  ಹಾಗೂ ಅಡ್ಯಾರ್ ಪದವು 241ರಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರು.

ಇದರ ಜೊತೆಗೆ ಕರೋನ ಮಹಾ ಮಾರಿಯ ದೆಸೆಯಿಂದ ಕರ್ನಾಟಕದಲ್ಲಿರುವ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ತೊಂದರೆಗೊಳಗಾದ ಅಸಂಘಟಿತ ವಲಯಗಳಿಗೆ ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಘೋಷಿಸಿರುವ ಪ್ಯಾಕೇಜ್‌ನ ಲಾಭವನ್ನು ಸಮರ್ಪಕ ವ್ಯಕ್ತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಶಾಸಕ ಡಾ.ಭರತ್ ಶೆಟ್ಟಿಯವರ ಜೊತೆ ಕಾರ್ಯಕರ್ತರು ಕಾರ್ಮಿಕ ಬಂಧುಗಳ ಮನೆಗೆ ತೆರಳಿ ಅವರಿಗೆ ಆನ್ಲೈನ್ ಅಪ್ಲಿಕೇಶನ್ ತುಂಬಲು ಸಹಕರಿಸುವ ಮೂಲಕ ಸಂಕಷ್ಟದಲ್ಲಿದ್ದ ಅಸಂಘಟಿತ ವರ್ಗಕ್ಕೆ ನೆರವಾದರು.ಅದರೊಂದಿಗೆ ನೀರುಮಾರ್ಗದಲ್ಲಿ ಆಶಾ ಕಾರ್ಯಕರ್ತೆ ಸಹೋದರಿಯರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಶಾಸಕರು ಆಲಿಸಿದರು.

ನೀರುಮಾರ್ಗ ಜಂಕ್ಷನ್ನಲ್ಲಿ ಡಾ.ಪಿಎ ಉಡುಪ ಹಾಗೂ ಡಾ.ಸಯದ್ ಇಹಿತಿಶಾಮ್ ಅವರ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಕ್ಲಿನಿಕ್ ಗೆ ಬರುವ ರೋಗಿಗಳಿಗೆ ಕೋವಿಡ್ ಮಹಾಮಾರಿಯ ಬಗ್ಗೆ ತಿಳುವಳಿಕೆ ಮೂಡಿಸಲು ಮನವಿ ಮಾಡಿದರು.  ನೀರುಮಾರ್ಗ ಜಂಕ್ಷನ್ನಲ್ಲಿ ಮೆಡಿಕಲ್ ಶಾಪ್ ಗಳಿಗೆ ಶಾಸಕರು ಭೇಟಿ ನೀಡಿದರು. ಕೋವಿಡ್ ಪಾಸಿಟಿವ್ ಇದ್ದವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು. ಕಾರ್ಯಕರ್ತರ ಮನೆಗಳಲ್ಲಿ ಗಿಡ ನೆಟ್ಟರು.

ಉತ್ತರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ಸ್ವತಃ ಬಂದು ಕಾರ್ಯಕರ್ತರ ಜೊತೆಗೂಡಿ ಮನೆ ಮನೆಗೆ ತೆರಳಿ ತಾವೇ ಆನ್ಲೈನ್  ಅಪ್ಲಿಕೇಶನ್ ತುಂಬಿಕೊಡಲು ನೆರವಾಗುವ ಕಾರ್ಯಕರ್ತರ ಈ ಕಾರ್ಯವನ್ನು ಶ್ಲಾಘಿಸಿದ್ದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಜೊತೆಗೆ ಒಂದು ಮನೆಯಲ್ಲಿ 4 ಮಂದಿ ಕೋವಿಡ್‌ಗೆ ತುತ್ತಾಗಿ ತಾಯಿಯ ಮೃತದೇಹವನ್ನು ನೋಡಲಾಗದೆ ನೋವಲ್ಲಿ ಇದ್ದ ಒಂದು ಮನೆಗೆ ಶಾಸಕ ಡಾ.ಭರತ್ ಶೆಟ್ಟಿಯವರು ತೆರಳಿ ಅವರಿಗೆ ಧೈರ್ಯ ತುಂಬಿ ಅವರ ಸಂಕಷ್ಟದ ಸಂದರ್ಭದಲ್ಲಿ ಅವರ ಜೊತೆ ನಿಂತು ಅವರ ಸಂಪೂರ್ಣ ಜವಾಬ್ದಾರಿ ಹೊತ್ತು ಮನೆಯ ಮಕ್ಕಳಂತೆ ಅವರ ಜೊತೆ ನಿಂತ ಹಿಂದೂ ಸಂರಕ್ಷಣಾ ಸಮಿತಿ ಕಾರ್ಯಕರ್ತರ ಕಾರ್ಯವನ್ನು ಶ್ಲಾಘಿಸಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೀರುಮಾರ್ಗ ಮಹಾ ಶಕ್ತಿಕೇಂದ್ರ ಪ್ರಭಾರಿಗಳು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಶಕ್ತಿಕೇಂದ್ರ ಪ್ರಮುಖರು ಸಹ ಪ್ರಮುಖ್ ಬೂತ್ ಅಧ್ಯಕ್ಷರು ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪ್ರಮುಖರು ಭಾಗವಹಿಸಿದರು.

Post a Comment

ನವೀನ ಹಳೆಯದು