ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಯಕ್ಷರಂಗದಲ್ಲಿ ಮಿನುಗುತ್ತಿರುವ ಇಂಗ್ಲಿಷ್ ಉಪನ್ಯಾಸಕ ಶಶಾಂಕ್ ಪಟೇಲ್ ಕೆ.ಜಿ. ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಸಾಗರ ತಾಲೂಕು ಹೆಗ್ಗೋಡು ಸಮೀಪದ ಪುರಪ್ಪೇಮನೆ ಕೆಳಮನೆಯ ದಿ.ನಾರಾಯಣ ಕೆ.ಜಿ ಹಾಗೂ ಗೀತಾ ನಾರಾಯಣ ಇವರ ಮಗನಾಗಿ ದಿನಾಂಕ 14.04.1986 ಇವರ ಜನನ. ಪ್ರಸ್ತುತ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಇವರ ವಾಸ. ಎಂ.ಎ( ಇಂಗ್ಲಿಷ್) ಇವರ ವಿದ್ಯಾಭ್ಯಾಸ. ಇವರ ಮನೆಯ ಯಕ್ಷಗಾನ ತಂಡವಾದ "ಸಾಕೇತ ಕಲಾವಿದರು (ರಿ.), ಕೆಳಮನೆ" ಇವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಎಂದು ಪಟೇಲ್ ಅವರು ಹೇಳುತ್ತಾರೆ.

ಶ್ರೀ ಸಂಜಿವ ಸುವರ್ಣ, ಬನ್ನಂಜೆ ಹಾಗೂ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನದ ಗುರುಗಳು. ಗದಾಯುದ್ಧ, ಕೃಷ್ಣಾರ್ಜುನ ಕಾಳಗ, ಕಾರ್ತವೀರ್ಯಾರ್ಜುನ, ಮಾರುತಿ ಪ್ರತಾಪ, ಲವಕುಶರ ಕಾಳಗ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಅರ್ಜುನ, ಭೀಮ, ರಾವಣ, ಕೌರವ, ರಾಮ, ಹನೂಮಂತ, ಸುಗ್ರೀವ, ಭದ್ರಸೇನ, ಕೀಚಕ, ಶತ್ರುಘ್ನ, ಕೃಷ್ಣ ಇತ್ಯಾದಿ ಇವರ ನೆಚ್ಚಿನ ವೇಷಗಳು.

ಸಾಲಿಗ್ರಾಮ, ಪೆರ್ಡೂರು, ಅಮೃತೇಶ್ವರಿ, ಹಾಲಾಡಿ, ನೀಲಾವರ ಇತ್ಯಾದಿ ಹಾಗೂ ಅತಿಥಿ ಕಲಾವಿದರಾಗಿ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ.

ಎರಡು ಸಂಘಗಳಿಂದ ಸಮ್ಮಾನ, ಕುಂದಾಪುರದಲ್ಲಿ 'ಯಕ್ಷ ತಾರಾ ಶಶಾಂಕ' ಎಂಬ ಬಿರುದಿನೊಂದಿಗೆ ಸಮ್ಮಾನ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಯಿಂದ 'ಉದಯೋನ್ಮುಖ ಯಕ್ಷ ಪ್ರತಿಭೆ' ಎಂಬ ಪುರಸ್ಕಾರ ಇವರಿಗೆ ಸಿಕ್ಕಿರುತ್ತದೆ.



ಕುಂದಾಪುರದ ಭಂಡಾರ್ಕಾರ್ಸ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದುಕೊಂಡು, ಪಠ್ಯೇತರ ಚಟುವಟಿಕೆಯ ಕಾಲೇಜಿನ 'ಆವರ್ತ ಯಕ್ಷ-ವೇದಿಕೆ' ಯಲ್ಲಿ ಸಕ್ರಿಯರಾಗಿರುತ್ತಾರೆ ಹಾಗೂ ವಿದ್ಯಾರ್ಥಿಗಳಲ್ಲಿ ಯಕ್ಷಾಸಕ್ತಿಯನ್ನು ಬೆಳೆಸುತ್ತಿದ್ದಾರೆ.

ಪುಸ್ತಕ ಓದುವುದು, ಯಕ್ಷಗಾನ, ಕ್ರಿಕೆಟ್, ಸಿನೆಮಾ ವೀಕ್ಷಣೆ ಇವರ ಹವ್ಯಾಸಗಳು.

'ಮಾಡರ್ನ್ ಮಹಾಭಾರತ' ಕನ್ನಡ ಸಿನೆಮಾದಲ್ಲಿ ಅಭಿನಯ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-  

ಆ ದಿನದ ಪ್ರಸಂಗದಲ್ಲಿ ಏನು ಪಾತ್ರ ಎಂದು ತಿಳಿದೊಡನೆ, ಪ್ರಸಂಗದ ಬಗ್ಗೆ ಅಧ್ಯಯನ ಮಾಡಿಕೊಂಡು, ಅನುಭವೀ ಕಲಾವಿದರೊಂದಿಗೆ ಚರ್ಚಿಸುತ್ತೇನೆ. ಬೇರೆ ಕಲಾವಿದರ ಪ್ರಸ್ತುತಿಯನ್ನ ವೀಕ್ಷಿಸುತ್ತೇನೆ. ಸಹಕಲಾವಿದರೊಂದಿಗೆ, ಭಾಗವತರೊಂದಿಗೆ ಚೌಕಿಯಲ್ಲಿ ಚರ್ಚಿಸುತ್ತೇನೆ ಎಂದು ಪಟೇಲ್ ಅವರು ಹೇಳುತ್ತಾರೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಸಹೃದಯಿ ಕಲಾಭಿಮಾನಿಗಳ ಜೊತೆಗೆ ಕಲಾವಿದಾಭಿಮಾನಿಗಳೂ ಇದ್ದಾರೆ. ಪ್ರೇಕ್ಷಕರು ಕಲೆಯನ್ನು ಬೆಳೆಸುತ್ತಾ ಕಲಾವಿದನನ್ನು ಬೆಳೆಸಿದರೆ ಉತ್ತಮ ಎಂದು ಹೇಳುತ್ತಾರೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-  

ಯಕ್ಷಗಾನವು ಜಾಗತಿಕ ಬೆಳವಣಿಗೆಯನ್ನು ಕಾಣುತ್ತಿದೆ. ಯುವಕರಲ್ಲಿ ಹೆಚ್ಚುತ್ತಿರುವ ಆಸಕ್ತಿ ತುಂಬಾನೇ ಖುಷಿ ಆಗುತ್ತೆ ಎಂದು  ಪಟೇಲ್ ಅವರು ಹೇಳುತ್ತಾರೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷರಂಗಕ್ಕೆ ಸೇವೆ ಸಲ್ಲಿಸುತ್ತಾ ನನ್ನ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಏನಾದರೂ ಕೊಡುಗೆ ಕೊಟ್ಟು ಸಾಧಿಸಬೇಕೆಂದುಕೊಂಡಿದ್ದೇನೆ ಎಂದು ಪಟೇಲ್ ಅವರು ಹೇಳುತ್ತಾರೆ.

ದಿನಾಂಕ 01.05.2013 ರಂದು ಶೃತಿ ಕಾಶಿ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು

+91 8971275651


Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು