ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 'ಪುಟ ಮೀರದ ಕಥೆ'- ಪುಟ್ಟ ಕಥೆಗಳ ಸಮ್ಮೇಳನ ಸಂಪನ್ನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಮಂಗಳೂರು: “ಈ ಹೊತ್ತಿನಲ್ಲಿ ಜನರ ನಿತ್ಯ ಬದುಕು ಅಸಹನೀಯ. ಕೋವಿಡ್ ಸಂಕಟದ ಸುದೀರ್ಘ ಕಾಲಮಾನದ ಹಿನ್ನೆಲೆಯಲ್ಲೂ ಕತೆಗಳು ಬಂದವು ಒಂದು ಘಟನೆ ನಡೆದುದನ್ನು ನಡೆದಂತೆ, ಇದ್ದುದನ್ನು ಇದ್ದಂತೆ ಬರೆದ್ರೆ ಅದು ಮಾಹಿತಿ ಆಗಬಹುದು, ವರದಿ ಆಗಬಹುದು, ಯಶಸ್ವಿ ಕತೆ ಆಗಬೇಕಾದ್ರೆ ಅಲ್ಲಿ ಕಥಾಂಶ– ಕಲಾತ್ಮಕತೆ, ನಿರೂಪಣೆ ಭಾಷೆ, ತಿರುವು, ಮೊನಚು, ಕಲ್ಪನೆ ಬೆರೆತಿರಬೇಕು. ತಂತಾನೆ ಸಂದೇಶ ಕೊಡಲು ಸಾಧ್ಯವಾದ್ರೆ ಅಲ್ಲಿ ಮತ್ತೊಂದು ಯಶಸ್ಸು ಎಂದು ಹಿರಿಯ ಸಾಹಿತಿ, ಮಂಗಳೂರು ಆಕಾಶವಾಣಿಯ ನಿವೃತ್ತ ಉನ್ನತ ಶ್ರೇಣಿಯ ಪ್ರಸಾರಕ ಮುದ್ದು ಮೂಡುಬೆಳ್ಳೆ ಅವರು ಹೇಳಿದರು.

ಅತೀ ಸಣ್ಣಕತೆಗಳಲ್ಲಿ ಈ ಅಂಶಗಳನ್ನು ಎಷ್ಟು ಪರಿಪೂರ್ಣವಾಗಿ ಕೊಡಬಹುದು ಎಂಬುದು ಪ್ರಶ್ನೆಯೇ. ಮಿನಿಕತೆ ಕಥಾಲಕ್ಷಣದ ಹಲವು ಅಂಶಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಕನಿಷ್ಠ ಒಂದು ಭಾವ ಪರಿಣಾಮ ನೀಡಲು ಸಾದ್ಯವಾದ್ರೆ ಅದೇ ದೊಡ್ಡದು ಇಲ್ಲಿನ ಹೆಚ್ಚಿನ ಕತೆಗಳು ಈ ಮಟ್ಟಿಗೆ ಯಶಸ್ವಿ ಆಗಿವೆ. ಈ ಮೂಲಕ ಇಲ್ಲಿ ಭಾಗವಹಿಸಿದ ಜಾಗೃತ ಮನಸ್ಸುಗಳನ್ನು ಸೃಜನಶೀಲತೆಗೆ ಹಚ್ಚಿ “ಕಿರಿದೊಳ್ ಪಿರಿದರ್ಥ”ಕ್ಕೆ ತುಡಿಯುವ ಧನಾತ್ಮಕ ಚಿಂತನೆಗೆ ಪ್ರೇರೇಪಿಸುವ ಈ ಪುಟ ಮೀರದ ಕತೆಗಳು ಸಮ್ಮೇಳನಕ್ಕೆ ಜೀವತುಂಬಿದೆ ಎಂದು ಅವರು ನುಡಿದರು.

ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರಿನಲ್ಲಿ ಮೇ 30ರಂದು ಜರುಗಿದ ರಾಜ್ಯ ಮಟ್ಟದ ಪುಟ ಮೀರದ ಕಥೆ ಕಥಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ, ಕೃಷ್ಣದಾಸ್ ಪ್ರಾಸ್ತಾವಿಕ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಹಬ್ಬಿರುವ ಈ ದಿನಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಕಾಗತೊಡಗಿವೆ. ಸಾಧ್ಯವಾದಷ್ಟು ಡಿಜಿಟಲ್ ಮಾಧ್ಯಮವನ್ನು ಬಳಸಿಕೊಳ್ಳಲು ಸಂಘಟಕರು ಸಂಘಟನೆಗಳು ಪ್ರಯತ್ನಿಸುವುದು ಅನಿವಾರ್ಯ. ಹಾಗಾಗಿ ಪರಿಷತ್ತು ಕೂಡ ಕಳೆದ ಕೆಲವು ತಿಂಗಳುಗಳಿಂದ ಇಂತಹ ಸಾಮಾಜಿಕ ತಂತ್ರಜ್ಞಾನದ ಮೂಲಕವೇ ರಾಜ್ಯದ ಸಾಹಿತಿಗಳಿಗೆ ವೇದಿಕೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ಜನಪ್ರಿಯ ಕಥೆಗಾರ ಕಲ್ಲಚ್ಚು ಮಹೇಶ್ ಆರ್ ನಾಯಕ್, ಉದ್ಯಮಿ ಸಂಘಟಕ ಗುರುಪ್ರಸಾದ್ ಕಡಂಬಾರ್, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಆಕೃತಿ ಐ ಎಸ್ ಭಟ್, ಸಮ್ಯಕ್ತ್  ಜೈನ್, ವಿಘ್ನೇಶ್ ಕೆ ಭಿಡೆ, ರಮೇಶ ಎಂ. ಬಾಯಾರು, ಪಿಎಂ ಇಕ್ಬಾಲ್ ಕೈರಂಗಳ, ಅರುಂಧತಿ ರಾವ್, ರೇಮಂಡ್ ಡಿಕುನಾ, ಡಾ ಸುರೇಶ ನೆಗಳಗುಳಿ, ರಮೇಶ್ ಕುಲಾಲ್ ನಾಲ್ತೂರು, ನಾಗಲಕ್ಷ್ಮಿ ಎಂ.ಎಸ್, ಶೋಭಾ ಬಿ, ಶ್ರೀಮತಿ ದೀಪಾಲಿ ಸಾಮಂತ, ದಾಂಡೇಲಿ, ಎಸ್. ಮಹಾಂತಪ್ಪ ಅಮರಾವತಿ, ಅಕ್ಷಯ ಆರ್ ಶೆಟ್ಟಿ, ಶ್ಯಾಮಲಾ ಪ್ರಸನ್ನಕುಮಾರ್, ಈರಣ್ಣ ಶೆಟ್ಟರ್, ಚಿತ್ರಾಶ್ರೀ ಕೆ.ಎಸ್, ಡಾ.ಅರುಣಾ ನಾಗರಾಜ್, ತ್ರಿವೇಣಿ ಎಂ, ವಿಶ್ವನಾಥ ಎನ್ ನೇರಳಕಟ್ಟೆ, ನಾಗವೇಣಿ ಜಿ ಜೆ, ಪ್ರಭಾವತಿ ಶೆಡ್ತಿ, ಸರೋಜಾ ಜಯಂತ್, ನಾರಾಯಣ ನಾಯ್ಕ ಕುದುಕೋಳಿ, ಜಯಲಕ್ಷ್ಮಿ ಶರತ್ ಶೆಟ್ಟಿ, ಎಂ.ರಾಮಚಂದ್ರ ರಾವು, ದಿವ್ಯಾ ವಿನಯ್, ವಿಜಯ ಕಾನ, ಡಾ. ಸುಧಾ ಜೋಶಿ, ಪ್ರಮೀಳಾ ಉಮೇಶ್, ಮಾನಸ  ವಿಜಯ್ ಕೈಂತಜೆ, ಶುಭಾ ವರ್ಣೇಕರ್, ಆನಂದ ಹಕ್ಕೆನ್ನವರ, ಸಂಗೀತಾ ವಣಗೇರಿ, ಅಶೋಕ ಮಳಗಲಿ, ಮನಿಶಾ ದಾಕು, ಪ್ರೀತಿ ಜವಳಿ, ಮೊಹಮ್ಮದ್ ಹುಮಾಯೂನ್ ಎನ್, ಹೆಚ್. ಎಸ್. ಭಾರತಿ, ರಶ್ಮಿ ಸನಿಲ್, ಶ್ರದ್ಧಾ ದೀಪಕ ಸಾಮಂತ, ಭಾರತಿ ರಘು, ರೇಖಾ ನಾಡಿಗೇರ, ಶಾರದಾ ಎ ಅಂಚನ್, ಮಾನಸಪ್ರವೀಣ್ ಭಟ್, ಸುಶೀಲಾ ಕೆ. ಪದ್ಯಾಣ, ವಾಣಿಲೋಕಯ್ಯ, ಸೋಮನಾಥ ಸಾಲಿಮಠ, ಸರೋಜಾ ಶ್ರೀಕಾಂತ ಅಮಾತಿ, ರೇಖಾ, ವೀಣಾ ಗಣಪತಿ ಹೆಗಡೆ, ಸೃಜನ ಗೌಡ ಎಸ್, ಶಿವಲೀಲಾ ಲಿಂಗರಾಜ ಪಾಟೀಲ, ಅಭಿನಂದನ್ ಎಂ. ಮೊದಲಾದ 51 ಕಥೆಗಾರರು ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದ ವಿವಿಧ ಭಾಗಗಳಿಂದ ಸಮ್ಮೇಳನದಲ್ಲಿ ಭಾಗವಹಿಸಿ ಒಂದು ಪುಟಕ್ಕೆ ಮೀರದ ಕಥೆಗಳನ್ನು ವಾಚಿಸಿದರು.

ಗೂಗಲ್ ಮೀಟ್ ವರ್ಚುವಲ್ ವೇದಿಕೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷೆ ಡಾ. ಅರುಣಾ ನಾಗರಾಜ್ ಸ್ವಾಗತಿಸಿದರು. ರೇಖಾ ನಾರಾಯಣ್ ಪ್ರಾರ್ಥಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲು ವಂದಿಸಿದರು. ಲೇಖಕಿ ಅರ್ಚನಾ ಎಂ. ಬಂಗೇರ ಕುಂಪಲ ಕಾರ್ಯಕ್ರಮ ನಿರೂಪಿಸಿದರು.


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು